ಒಳಮೀಸಲು ವರದಿ ಅವೈಜ್ಞಾನಿಕ, ಅದನ್ನು ಒಪ್ಪಲ್ಲ

| Published : Aug 15 2025, 01:02 AM IST

ಒಳಮೀಸಲು ವರದಿ ಅವೈಜ್ಞಾನಿಕ, ಅದನ್ನು ಒಪ್ಪಲ್ಲ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ ನ್ಯಾ.ಎಚ್‌.ಎನ್‌.ನಾಗಮೋಹನದಾಸ್ ಅವರ ಒಳಮೀಸಲಾತಿ ವರದಿಯನ್ನು ನಾವು ಒಪ್ಪುವುದಿಲ್ಲ. ಅದು ಅವೈಜ್ಞಾನಿಕವಾಗಿದ್ದು, ಬಲಗೈ ಹೊಲೆಯ ಸಮುದಾಯದವರ ಸಂಖ್ಯೆ ಕಡಿಮೆ ತೋರಿಸಿ, ನಮ್ಮನ್ನು ವ್ಯವಸ್ಥಿತವಾಗಿ ತುಳಿಯುವ ಹುನ್ನಾರ ನಡೆಸಲಾಗಿದೆ ಎಂದು ಎಂದು ದಲಿತ ಸಮಾಜದ ಮುಖಂಡ ಹರೀಷ ನಾಟಿಕಾರ ಹಾಗೂ ಚನ್ನಪ್ಪ ವಿಜಯಕರ ಆರೋಪಿಸಿದರು.

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ

ನ್ಯಾ.ಎಚ್‌.ಎನ್‌.ನಾಗಮೋಹನದಾಸ್ ಅವರ ಒಳಮೀಸಲಾತಿ ವರದಿಯನ್ನು ನಾವು ಒಪ್ಪುವುದಿಲ್ಲ. ಅದು ಅವೈಜ್ಞಾನಿಕವಾಗಿದ್ದು, ಬಲಗೈ ಹೊಲೆಯ ಸಮುದಾಯದವರ ಸಂಖ್ಯೆ ಕಡಿಮೆ ತೋರಿಸಿ, ನಮ್ಮನ್ನು ವ್ಯವಸ್ಥಿತವಾಗಿ ತುಳಿಯುವ ಹುನ್ನಾರ ನಡೆಸಲಾಗಿದೆ ಎಂದು ಎಂದು ದಲಿತ ಸಮಾಜದ ಮುಖಂಡ ಹರೀಷ ನಾಟಿಕಾರ ಹಾಗೂ ಚನ್ನಪ್ಪ ವಿಜಯಕರ ಆರೋಪಿಸಿದರು.

ಪಟ್ಟಣದಲ್ಲಿ ತಾಲೂಕಿನ ಬಲಗೈ ದಲಿತ ಸಮಾಜದ ಒಕ್ಕೂಟದಿಂದ ನ್ಯಾ.ನಾಗಮೋಹನದಾಸ್ ಅವರ ಒಳಮೀಸಲಾತಿ ವರದಿ ವಿರೋಧಿಸಿ ಗುರುವಾರ ನಡೆದ ಬೃಹತ್ ಪ್ರತಿಭಟನೆ ಮೆರವಣಿಗೆಯೂ ಡಾ.ಬಿ.ಆರ್.ಅಂಡ್ಕರ ವೃತ್ತದಿಂದ ತಹಸೀಲ್ದಾರ್‌ ಕಚೇರಿಗೆ ಆಗಮಿಸಿ ತಹಸೀಲ್ದಾರ್‌ ಕೀರ್ತಿ ಚಾಲಕ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಈ ವೇಳೆ ಹರೀಷ ನಾಟಿಕಾರ ಹಾಗೂ ಚನ್ನಪ್ಪ ವಿಜಯಕರ ಮಾತನಾಡಿ, ಕಳೇದ 35 ವರ್ಷಗಳಿಂದ ಬಲಗೈ ಸಮುದಾಯಕ್ಕೆ ಒಳಮೀಸಲಾತಿ ಕುರಿತು ಇಡೀ ದೇಶ್ಯಾದ್ಯಂತ ಹೋರಾಟ ನಡೆಯುತ್ತಿದೆ. ಆದರೆ, ಈ ಬಾರಿ ನ್ಯಾ.ನಾಗಮೋಹನದಾಸ ಅವರ ಜಾತಿ ಜನಗಣತಿ ವರದಿ ನ್ಯಾಯಯುತವಾಗಿಲ್ಲ. ಯಾರನ್ನೂ ಓಲೈಸಲು ಆಯೋಗವು ತರಾತುರಿಯಲ್ಲಿ ಗಣತಿ ಮಾಡುವ ಅವಶ್ಯಕತೆಯೇ ಇರಲಿಲ್ಲ. ಈ ಕುರಿತು ಮುಖ್ಯಮಂತ್ರಿಗಳು ಉಪ ಸಮಿತಿಯನ್ನು ರಚನೆ ಮಾಡಿ ವರದಿಯನ್ನು ಕೂಲಂಕುಷವಾಗಿ ಪರಿಶೀಲನೆ ನಡೆಸಿ ಬಲಗೈ ಹೊಲೆಯ ಸಮುದಾಯದವರಿಗೆ ನ್ಯಾಯ ಒದಗಿಸಿಕೊಡಬೇಕು. ಲೋಪದೋಷಗಳ ಕುರಿತು ಚರ್ಚಿಸಲು ಸ್ವತಂತ್ರ ನೀಡಬೇಕು. 101 ಜಾತಿಗಳಲ್ಲಿ 49 ಜಾತಿಗಳು ಬಲಗೈ ಹೊಲೆಯ ಸಮುದಾಯಕ್ಕೆ ಸೇರಿವೆ. ಈ ವಿಷಯವನ್ನು ನಾವು ಹಿಂದೆಯೇ ನಾಗಮೋಹನ ದಾಸ್ ಅವರಿಗೆ ನಮ್ಮ ಸ್ವಾಮೀಜಿಗಳು ಬಲಗೈ ಸಮಾಜಕ್ಕೆ ಅನ್ಯಾಯವಾಗದಂತೆ ನೋಡಿಕೊಳ್ಳಲು ತಿಳಿಸಿದ್ದರು. 2011ರ ಜನಗಣತಿಯಂತೆ ರಾಜ್ಯದಲ್ಲಿ 38 ಲಕ್ಷ ಬಲಗೈ ಸಮುದಾಯದವರಿದ್ದಾರೆ. ಇದರ ಆಧಾರದ ಮೇಲೆ ಶೇ.7 ಒಳಮೀಸಲಾತಿ ನೀಡಿ. ನಮಗೆ ಅನ್ಯಾಯವಾದರೆ ಸುಮ್ಮನಿರುವುದಿಲ್ಲ. ಈ ವರದಿ ಅಧ್ಯಯನ ಮಾಡಿ ಸರಿಪಡಿಸುವಂತೆ ಆಗ್ರಹಿಸಿದರು.ಪಿ.ಎಚ್.ಉಪ್ಪಲದಿನ್ನಿ ಮಾತನಾಡಿ, ನ್ಯಾ.ನಾಗಮೋಹನದಾಸ್ ಅವರು ತಾಂತ್ರಿಕ ನೆಪ ಮುಂದಿಟ್ಟುಕೊಂಡು ಬಲಗೈ ಸಮುದಾಯದವರನ್ನು ತುಳಿಯುವ ಹುನ್ನಾರ ಮಾಡಿದ್ದಾರೆ. ಇದು ಅವರ ಮನಸ್ಥಿತಿ ತೋರಿಸುತ್ತದೆ ಎಂದರು. ಸದ್ಯ ಸರ್ಕಾರ ನಡೆಸಿದ ಸಮೀಕ್ಷೆ ತೃಪ್ತಿಕರವಾಗಿಲ್ಲ. ಬಲಗೈ ಸಮುದಾಯದ ಜನಸಂಖ್ಯೆಯನ್ನು ಅಂಕಿ ಅಂಶಗಳಿಂದ ಕಡಿಮೆ ಮಾಡುವ ಉದ್ದೇಶದಿಂದ ಮಾದಿಗ ಸಮುದಾಯದ ಜನಸಂಖ್ಯೆಗೆ ಬಲಗೈ ಸಮುದಾಯ ಸೇರ್ಪಡೆ ಮಾಡಲಾಗಿದೆ. ಸರ್ಕಾರದ ಆದೇಶ ಮತ್ತು ನಿಯಮಾವಳಿ ಉಲ್ಲಂಘನೆಯಾಗಿದೆ ಎಂಬುದು ತಾತ್ಕಾಲಿಕ ದೋಷಗಳಿಂದ ಕಂಡು ಬಂದಿವೆ. ಈ ಸಂಬಂಧ ಚರ್ಚೆ ನಡೆಸಲು ಆ.16ರಂದು ಬೆಂಗಳೂರಿನಲ್ಲಿ ಸಭೆ ಕರೆದಿದ್ದಾರೆ. ಬಲಗೈ ಸಮುದಾಯದವರಿಗೆ ನ್ಯಾಯ ಸಿಗಬೇಕು, ಇಲ್ಲದಿದ್ದರೆ ಹೋರಾಟ ಮಾಡುವುದಾಗಿ ಎಚ್ಚರಿಸಿದರು.

ದಲಿತ ದೌರ್ಜನ್ಯ ಸಮಿತಿಯ ಮಲ್ಲು ತಳವಾರ, ಮುಖಂಡರಾದ ಹೊಳಿಯಪ್ಪ ಗಂಜಿಹಾಳ, ಎಸ್.ಆರ್.ಕಟ್ಟಿಮನಿ, ಶರಣಬಸ್ಸು ಚಲವಾದಿ, ಶಿವು ಶಿವಪುರ, ಮಂಜುನಾಥ ಕಟ್ಟಿಮನಿ, ರೇವಣೆಪ್ಪ ಚಲವಾದಿ, ಶ್ರೀಶೈಲ ಬಿದರಕುಂದಿ, ಪರುಶು ಮೂರಾಳ, ಶಿವಪುತ್ರ ಅಜಮನಿ, ವೈ.ವೈ.ಚಲವಾದಿ, ಪರಶುರಾಮ ಚಲವಾದಿ, ಸಿದ್ದಪ್ಪ ಚಲವಾದಿ, ಈರಣ್ಣ ತಾರನಾಳ, ಗುಂಡಪ್ಪ ಚಲವಾದಿ, ಪ್ರಕಾಶ ಸರೂರ, ಪ್ರಶಾಂತ ಕಾಳೆ, ಹಣಮಂತ ಚಲವಾದಿ, ಸಿದ್ದು ಕಟ್ಟಿಮನಿ, ಶ್ರೀಕಾಂತ ಚಲವಾದಿ, ದೇವರಾಜ ಹಂಗರಗಿ, ಅಶೋಕ ಪಾದಗಟ್ಟಿ, ಯಲ್ಲಪ್ಪ ಅಜಮನಿ, ಕೆ.ಎಂ.ಇಬ್ರಾಹಿಂಪೂರ, ಸಂಗಮೇಶ ಚಲವಾದಿ, ಬಿ.ಎನ್.ರಾಜು, ಮಹಾದೇವ ಕೇಸಾಪೂರ ಸೇರಿದಂತೆ ಹಲವರು ಇದ್ದರು.