ಸಾರಾಂಶ
ದ್ಯಾರ್ಥಿಗಳು ಕೇಂದ್ರದ ಇನ್ನೊವೇಶನ್ ಹಬ್‌ಗೆ ಭೇಟಿ ನೀಡಿ ಮಾದರಿಗಳ ಪ್ರಾತ್ಯಕ್ಷಿಕೆಗಳನ್ನು ವೀಕ್ಷಿಸಿ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ಕನ್ನಡಪ್ರಭ ವಾರ್ತೆ ಮಂಗಳೂರು
ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಅಂತಾರಾಷ್ಟ್ರೀಯ ಕ್ಷುದ್ರ ಗ್ರಹಗಳ ದಿನವನ್ನು ಆಚರಿಸಲಾಯಿತು.ಮಾಹೆ ವಿಶ್ವವಿದ್ಯಾನಿಲಯದ ಸಂಶೋಧಕ ಅತುಲ್ ಭಟ್ ಅವರು ಕ್ಷುದ್ರ ಗ್ರಹಗಳ ಬಗ್ಗೆ ವಿವರಿಸಿ, ಈ ಆಕಾಶ ಕಾಯಗಳ ಕುರಿತು ಅರಿವು, ಅಪಾಯಗಳ ಬಗ್ಗೆ ಜಾಗೃತಿ ಮತ್ತು ಈಗ ಉಪಗ್ರಹ ತಂತ್ರಜ್ಞಾನದ ಸಹಾಯದಿಂದ ಭೂಮಿಯ ಸಮೀಪದ ಕ್ಷುದ್ರಗ್ರಹಗಳ ಅಧ್ಯಯನಗಳನ್ನು ಹೇಗೆ ನಡೆಸಲಾಗುತ್ತಿದೆ ಎಂದು ಸವಿಸ್ತಾರವಾಗಿ ತಿಳಿಸಿದರು.
ಮಾಹೆ ವಿಶ್ವವಿದ್ಯಾನಿಲಯದ ಸಂಶೋಧಕ ಆದಿತ್ಯ ಅವರು ಎಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿನ ಇತ್ತೀಚಿನ ಕ್ರಾಂತಿಕಾರಿ ಬೆಳವಣಿಗೆಗಳಿಂದ ಶಾಲೆಗಳಲ್ಲಿ ಯಾವರೀತಿ ಉಪಕರಣಗಳ ತಯಾರಿ ಮಾಡಬಹುದು ಎಂಬುದನ್ನು ತೋರಿಸಿಕೊಟ್ಟರು.ಟಿಂಕರ್ ಸ್ಪೇಸ್‌ನ ಮನೋಜ್ ಆಚಾರ್ಯ ಮತ್ತು ತಂಡದವರು, ವಿದ್ಯಾರ್ಥಿಗಳು ಸುಲಭವಾಗಿ ಮಾಡಬಹುದಾದ ಕೆಲವು ಮಾದರಿಗಳನ್ನು ಪ್ರದರ್ಶಿಸಿ, ಇವುಗಳಿಂದ ಸೃಜನಶೀಲತೆಯನ್ನು ಮತ್ತು ಹೊಸ ಆಲೋಚನೆಗಳನ್ನು ಮೂಡಿಸಬಹುದೆಂದು ಸೂಕ್ತ ಉದಾಹರಣೆಗಳ ಮೂಲಕ ವಿವರಿಸಿದರು.
ನಂತರ ವಿದ್ಯಾರ್ಥಿಗಳು ಕೇಂದ್ರದ ಇನ್ನೊವೇಶನ್ ಹಬ್‌ಗೆ ಭೇಟಿ ನೀಡಿ ಮಾದರಿಗಳ ಪ್ರಾತ್ಯಕ್ಷಿಕೆಗಳನ್ನು ವೀಕ್ಷಿಸಿ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.ಕೇಂದ್ರದ ನಿರ್ದೇಶಕ ಡಾ.ಕೆ.ವಿ. ರಾವ್ ಅಧ್ಯಕ್ಷತೆ ವಹಿಸಿದ್ದರು. ಮೋಹನ್ ಕಾರ್ಯಕ್ರಮ ನಿರೂಪಿಸಿದರು. ವಿಘ್ನೇಶ್ ಸ್ವಾಗತಿಸಿದರು. ಶಿವರಾಮ್ ವಂದಿಸಿದರು. ಕೇಂದ್ರದ ಸಿಬ್ಬಂದಿ ಇನ್ನೋವೇಶನ್ ಹಬ್ ಮತ್ತು ವರ್ಕ್‌ಶಾಪ್‌ಗಳ ಸೌಲಭ್ಯಗಳನ್ನು ಪ್ರದರ್ಶಿಸಲು ಸಹಕರಿಸಿದರು.