ಸಾರಾಂಶ
2 ದಿನಗಳ ಈ ಚಲನಚಿತ್ರೋತ್ಸವದಲ್ಲಿ ಕನ್ನಡ, ಹಿಂದಿ, ಇಂಗ್ಲಿಷ್, ತೆಲಗು, ಮರಾಠಿ, ಪಂಜಾಬಿ, ಮಳೆಯಾಳಂ ಸೇರಿದಂತೆ ವಿವಿಧ ಭಾಷೆಗಳಲ್ಲಿ ನಿರ್ಮಿಸಲಾದ ಚಲನಚಿತ್ರ, ಕಿರುಚಿತ್ರ, ಹಾಡುಗಳು, ಟೆಲಿಚಿತ್ರಗಳು, ಸಾಕ್ಷ್ಯಚಿತ್ರಗಳು ಸೇರಿದಂತೆ ಒಟ್ಟು 145 ಚಿತ್ರಗಳು ಪಾಲ್ಗೊಂಡಿದ್ದವು. ಇವುಗಳಲ್ಲಿ ಆಯ್ದ 25 ಚಿತ್ರಗಳನ್ನು ಪ್ರದರ್ಶಿಸಲಾಯಿತು.
ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
ಇಲ್ಲಿಯ ದೇಶಪಾಂಡೆ ನಗರದ ಸವಾಯಿ ಗಂಧರ್ವ ಸಭಾಭವನದಲ್ಲಿ ನವ ಕರ್ನಾಟಕ ಚಲನಚಿತ್ರ ಅಕಾಡೆಮಿ ವತಿಯಿಂದ ಶನಿವಾರ ಆರಂಭಗೊಂಡ 3ನೇ ಕರ್ನಾಟಕ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ, ಚಲನಚಿತ್ರ ಹಾಗೂ ಕಿರುಚಿತ್ರ ಪ್ರಶಸ್ತಿ ಪ್ರಶಸ್ತಿ ಪ್ರದಾನ ಸಮಾರಂಭ ಭಾನುವಾರ ಸಂಜೆ ತೆರೆಕಂಡಿತು.2 ದಿನಗಳ ಈ ಚಲನಚಿತ್ರೋತ್ಸವದಲ್ಲಿ ಕನ್ನಡ, ಹಿಂದಿ, ಇಂಗ್ಲಿಷ್, ತೆಲಗು, ಮರಾಠಿ, ಪಂಜಾಬಿ, ಮಳೆಯಾಳಂ ಸೇರಿದಂತೆ ವಿವಿಧ ಭಾಷೆಗಳಲ್ಲಿ ನಿರ್ಮಿಸಲಾದ ಚಲನಚಿತ್ರ, ಕಿರುಚಿತ್ರ, ಹಾಡುಗಳು, ಟೆಲಿಚಿತ್ರಗಳು, ಸಾಕ್ಷ್ಯಚಿತ್ರಗಳು ಸೇರಿದಂತೆ ಒಟ್ಟು 145 ಚಿತ್ರಗಳು ಪಾಲ್ಗೊಂಡಿದ್ದವು. ಇವುಗಳಲ್ಲಿ ಆಯ್ದ 25 ಚಿತ್ರಗಳನ್ನು ಪ್ರದರ್ಶಿಸಲಾಯಿತು.
ಸಾಕ್ಷ್ಯಚಿತ್ರ, ಟೆಲಿಫಿಲ್ಮ್, ಸಂಗೀತ ಅಲ್ಬಂ, ಕಿರುಚಿತ್ರ, ಭವಿಷ್ಯದ ಚಿತ್ರ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಉತ್ತಮ ನಟ-ನಟಿ, ಪೋಷಕ ನಟ-ನಟಿ, ಉತ್ತಮ ನಿರ್ದೇಶನ, ಅತ್ಯುತ್ತಮ ಚಲನಚಿತ್ರ, ಅತ್ಯುತ್ತಮ ನಿರ್ದೇಶಕ, ನಿರ್ಮಾಪಕ, ಉತ್ತಮ ಸಂಗೀತ, ಅತ್ಯುತ್ತಮ ಗಾಯಕಿ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಒಟ್ಟು 45 ಜನರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಹಿಂದಿ ಭಾಷೆಯಲ್ಲಿ ಪ್ರಸಾರವಾದ "ಇಂಟರ್‌ನ್ಯಾಶನಲ್ ಪ್ಯಾಡ್ ಮನ್ " ಕಿರುಚಿತ್ರದಲ್ಲಿ ಪೋಷಕ ನಟಿಯಾಗಿ ಕಾರ್ಯನಿರ್ವಹಿಸಿದ ಸುಪ್ರಿಯಾಗೆ ಅತ್ಯುತ್ತಮ ಪೋಷಕ ನಟಿ, ಕನ್ನಡ ಭಾಷೆಯ "ಕಾಣದಾ ಕೈ " ಕಿರುಚಿತ್ರಕ್ಕೆ ಅತ್ಯುತ್ತಮ ಕಿರುಚಿತ್ರ, "ರುಘ್ಯಾ " ಕಿರುಚಿತ್ರದಲ್ಲಿ ಪೋಷಕಪಾತ್ರ ನಿರ್ವಹಿಸಿದ ಅಹ್ಮದ ಶರೀಫ್‌ಗೆ ಅತ್ಯುತ್ತಮ ಪೋಷಕ, ಹಿಂದಿ ಭಾಷೆಯ "ರಾಮ್ ಔರ್ ಶಾಮ್ " ಚಿತ್ರದ ನಟಿ ಸನಾ ಅಲಿಖಾನಗೆ ಉತ್ಯುತ್ತಮ ನಟಿ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಒಟ್ಟು 45 ಜನರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ನವ ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷ ಡಾ. ಎಂ.ಎ. ಮಮ್ಮಿಗಟ್ಟಿ, ಸದಸ್ಯ ರವೀಂದ್ರ ಪೌವುಸ್ಕರ, ಚಿತ್ರನಟಿ ಸುಪ್ರಿಯಾ, ನಟ ಮತ್ತು ನಿರ್ಮಾಪಕ ಜೈಪ್ರಭು ಲಿಂಗಾಯತ, ನಟ ಕಲೀಮ್ ಪಾಷಾ, ಬೀರೇನ ಡಾವೆ, ರಾಜಕುಮಾರ ತಿವಾರಿ, ನಿರ್ಮಾಪಕ ಅರುಣ ಪಾಟೀಲ, ರೋಟರಿ ಕ್ಲಬ್ ಅಧ್ಯಕ್ಷ ಅನೀಸ ಖೋಜೆ ಸೇರಿದಂತೆ ಹಲವರಿದ್ದರು.