ಸಾರಾಂಶ
ಮಂಗಳೂರು: ಫಾದರ್ ಮುಲ್ಲರ್ ಹೋಮಿಯೋಪತಿಕ್ ಮೆಡಿಕಲ್ ಕಾಲೇಜು ಮತ್ತು ಗ್ಲೋಬಲ್ ಹೋಮಿಯೋಪತಿಕ್ ಫೌಂಡೇಶನ್ ವತಿಯಿಂದ ಅಂತಾರಾಷ್ಟ್ರೀಯ ಹೋಮಿಯೋಪತಿ ಸಮ್ಮೇಳನ ‘ಎಕ್ಸ್ ಫ್ಲೋರಾ-2025’ ಕಾರ್ಯಕ್ರಮ ನ.14ರಿಂದ 16ರವರೆಗೆ ಕಂಕನಾಡಿಯ ಫಾದರ್ ಮುಲ್ಲರ್ ಕನ್ವೆನ್ಶನ್ ಸೆಂಟರ್‌ನಲ್ಲಿ ನಡೆಯಲಿದೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಲೇಜು ಪ್ರಾಂಶುಪಾಲ ಡಾ.ಇ.ಎಸ್.ಜೆ. ಪ್ರಭುಕಿರಣ್, ನ.14ರಂದು ಮಧ್ಯಾಹ್ನ 12ಕ್ಕೆ ಉದ್ಘಾಟನೆ ನಡೆಯಲಿದ್ದು, ರಾಜ್ಯದ ಆಯುಷ್ ಇಲಾಖೆ ಮುಖ್ಯ ಆಡಳಿತಾಧಿಕಾರಿ ಕಮಲ ಬಾಯಿ ಬಿ., ದಕ್ಷಿಣ ಆಫ್ರಿಕಾದ ದರ್ಬನ್ ತಾಂತ್ರಿಕ ವಿವಿಯ ಹೋಮಿಯೋಪತಿ ವಿಭಾಗ ಮುಖ್ಯಸ್ಥೆ ಡಾ. ಆ್ಯಶ್ಲಿ ರೋಸ್, ಯುಕೆ ಫಂಕ್ಷನಲ್ ಶಿಫ್ಟ್ ಕನ್ಸಲ್ಟಿಂಗ್‌ನ ನಿರ್ದೇಶಕ ಡಾ. ಕೀಮ್ ಅಂಟೊನಿ ಭಾಗವಹಿಸಲಿದ್ದಾರೆ. ಫಾದರ್ ಮುಲ್ಲರ್ ಸಂಸ್ಥೆಗಳ ನಿರ್ದೇಶಕ ವಂ. ಫಾವುಸ್ತಿನ್ ಲೂಕಸ್ ಲೋಬೊ ಅಧ್ಯಕ್ಷತೆ ವಹಿಸಲಿದ್ದಾರೆ. ಕಾರ್ಯಾಗಾರದಲ್ಲಿ ಯುಕೆ, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ, ಜರ್ಮನಿ ಹಾಗೂ ಭಾರತದಿಂದ ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಲಿದ್ದು, ದೇಶ ವಿದೇಶಗಳಿಂದ ಸುಮಾರ 1500ಕ್ಕೂ ಅಧಿಕ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಈ ದಿನಗಳಲ್ಲಿ ಸಂಜೆ 4.30ರಿಂದ 9ರವರೆಗೆ ಸಾಂಸ್ಕೃತಿಕ ಸಂಭ್ರಮ ಜರಗಲಿದೆ ಎಂದರು.
ಮಧುಮೇಹ ಜಾಗೃತಿ ಅಭಿಯಾನ: ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜಿನ ಸಮುದಾಯ ವೈದ್ಯಕೀಯ ವಿಭಾಗ ವತಿಯಿಂದ ವಿಶ್ವ ಮಧುಮೇಹ ದಿನದ ಜಾಗೃತಿ ಅಭಿಯಾನ ನ.14ರಂದು ಹಮ್ಮಿಕೊಳ್ಳಲಾಗಿದೆ. ನ.15ರಂದು ದೈನಂದಿನ ಜೀವನದಲ್ಲಿ ಆಹಾರ ಕ್ರಮಗಳು ಹಾಗೂ ಕೆಲಸದ ಸ್ಥಳಗಳಲ್ಲಿ ಸಕ್ರಿಯವಾಗಿರುವ ಕುರಿತು ಉಪನ್ಯಾಸ ನಡೆಯಲಿದೆ.14ರಂದು ಸಂಭ್ರಮಾಚರಣೆ: ಫಾ.ಮುಲ್ಲರ್ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಎನ್‌ಎಬಿಎಚ್ ಮಾನ್ಯತೆ ಲಭಿಸಿ 10 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಸಂಭ್ರಮಾಚರಣೆ ಹಾಗೂ ವಿಶ್ವ ಗುಣಮಟ್ಟ ವಾರವಾಗಿ ಆಚರಿಸಲಾಗುತ್ತಿದೆ. ನ.14ರಂದು ಸಂಜೆ 3 ಗಂಟೆಗೆ ಆಸ್ಪತ್ರೆಯ ಡಿಎಂ ಸಭಾಂಗಣದಲ್ಲಿ ಸಂಭ್ರಮಾಚರಣೆ ನಡೆಯಲಿದೆ. ಫಾದರ್ ಮುಲ್ಲರ್ ಸಂಸ್ಥೆಯ ಸಮ್ಮೇಳನ ಸಭಾಂಗಣದಲ್ಲಿ ನ.15ರಂದು ಹೊರರೋಗಿಗಳು, ಒಳರೋಗಿಗಳು ಮತ್ತು ಎಫ್‌ಎಂಸಿಐ ಸಿಬ್ಬಂದಿ ಮಕ್ಕಳಿಗಾಗಿ ಮಕ್ಕಳ ದಿನಾಚರಣೆ ಆಯೋಜಿಸಲಾಗಿದೆ. ಮಕ್ಕಳಿಗಾಗಿ ಚಿತ್ರಕಲೆ ಮತ್ತು ವೇಷಭೂಷಣ ಸ್ಪರ್ಧೆ, ಜಾದೂ ಪ್ರದರ್ಶನ ಏರ್ಪಡಿಸಲಾಗಿದೆ. ಸಂಸ್ಥೆಯ ವತಿಯಿಂದ ನ.13ರಂದು ಬಜಾಲ್‌ನ ಸಂತ ಜೋಸೆಫ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಆಯೋಜಿಸಲಾಗಿದೆ.ಫಾ.ಮುಲ್ಲರ್ ಸಂಸ್ಥೆಗಳ ನಿರ್ದೇಶಕ ವಂ. ಫಾವುಸ್ತಿನ್ ಲೂಕಸ್ ಲೋಬೊ, ಫಾದರ್ ಮುಲ್ಲರ್ ಹೋಮಿಯೋಪತಿಕ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಆಡಳಿತಾಧಿಕಾರಿ ವಂ. ಡೊನಾಲ್ಡ್ ನಿಲೇಶ್ ಕ್ರಾಸ್ತಾ, ಎಫ್‌ಎಂಎಚ್‌ಪಿಡಿ ಆಡಳಿತಾಧಿಕಾರಿ ವಂ.ಡಾ. ನೆಲ್ಸನ್ ಡಿ. ಪಾಯಿಸ್, ಮೆಡಿಕಲ್ ಆಸ್ಪತ್ರೆಯ ಆಡಳಿತಾಧಿಕಾರಿ ವಂ. ಜೋರ್ಜ್ ಜೀವನ್ ಸಿಕ್ವೇರಾ, ಸಹಾಯಕ ಆಡಳಿತಾಧಿಕಾರಿ ವಂ. ವಿಲಿಯಂ ಡಿಸೋಜ, ಡೀನ್ ಡಾ. ಆಂಟನಿ ಡಿಸೋಜ, ಎಫ್‌ಎಂಎಚ್‌ಎಂಸಿ ಉಪಪ್ರಾಂಶುಪಾಲೆ ಡಾ. ವಿಲ್ಮಾ ಮೀರಾ ಡಿಸೋಜ, ಎಫ್‌ಎಂಎಚ್ಎಂಸಿ ವೈದ್ಯಕೀಯ ಅಧೀಕ್ಷಕ ಡಾ. ಗಿರೀಶ್ ನಾವಡ, ಪ್ರಮುಖರಾದ ಡಾ. ಕಿರಣ್ ಶೆಟ್ಟಿ, ಡಾ. ಪೃಥ್ವಿ ಶೆಟ್ಟಿ, ಡಾ. ಹೆಲೆನ್, ಡಾ. ಅನಿಲ್ ಶೆಟ್ಟಿ, ಡಾ. ಶೀನಾ ಕೆ.ಎನ್., ಡಾ. ಧೀರಜ್ ಐ. ಫರ್ನಾಂಡಿಸ್, ಡಾ. ಶೆರ್ಲಿನ್ ಪೌಲ್, ಇಲ್ಯಾಸ್ ಫರ್ನಾಂಡಿಸ್, ಡಾ. ಕೆಲ್ವಿನ್, ಸ್ಮಿತಾ ಡಿಸಿಲ್ವಾ, ಪ್ರಿಯಾ ಪಿರೇರಾ ಮತ್ತಿತರರು ಇದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))