ಸಾರಾಂಶ
ಕನ್ನಡಪ್ರಭ ವಾರ್ತೆ ನಾಪೋಕ್ಲು
ಅಂತಾರಾಷ್ಟ್ರೀಯ ಮಟ್ಟದ ಮ್ಯಾರಥಾನ್ ಕ್ರೀಡೆಯಲ್ಲಿ ಅಪರೂಪದ ಸಾಧನೆಯನ್ನು ಕೊಡಗಿನ ಯುವತಿಯೊಬ್ಬರು ಮಾಡಿದ್ದಾರೆ. ಕರವಟಿರ ಚೈತ್ರ ಪಳಂಗಪ್ಪ ಈ ಸಾಧನೆ ಮಾಡಿದವರು.ಇವರು ಡೆಕಾಥ್ಲಾನ್ ಕ್ರೀಡೆಗಳೊಂದಿಗೆ ಕೆಲಸ ಮಾಡುತ್ತಾ ಇವರು 72 ಕಿಲೋಮೀಟರ್ ಅಂತರದ ಖರ್ದುಂಗ್ಲ ಸವಾಲನ್ನು ಯಶಸ್ವಿಯಾಗಿ ಪೂರೈಸಿದ್ದಾರೆ. ವಾರ್ಷಿಕ ಲಡಾಕ್ ಮ್ಯಾರಥಾನ್ ಭಾಗವಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ನಡೆಯುವ ಖರ್ದುಂಗ್ಲ 72 ಕಿ.ಮೀ ಅಂತರದ ಓಟವು 71,600 ಅಡಿಗಳಿಗಿಂತ ಹೆಚ್ಚು ಎತ್ತರದಲ್ಲಿರುವ ಪೌರಾಣಿಕ ಖರ್ದುಂಗ ಲಾ ಪಾಸ್ ಸೇರಿದಂತೆ ಅತ್ಯಂತ ಎತ್ತರದ ಭೂ ಪ್ರದೇಶದ ಮೂಲಕ ಹಾದು ಹೋಗಿದೆ. ಈ ಅದ್ಭುತ ಸಾಧನೆಯನ್ನು ಮಾಡಲು ಧೈರ್ಯ ಮಾಡುವ ಕ್ರೀಡಾಪಟುಗಳಿಗೆ ಕರೆದುಕೊಂಡು ಹೋಗುವ ಚಾಲೆಂಜ್ ಸ್ವಯಂ ಶೋಧನೆಯ ಪ್ರಯಾಣ ಮತ್ತು ಅವರ ಅವಿನಾ ಭಾವ ಮನೋಭಾವಕ್ಕೆ ಸಾಕ್ಷಿಯಾಗಿದೆ. ಇಂತಹ ಕಠಿಣ ಆಯ್ಕೆಯನ್ನು ಚೈತ್ರ ಸವಾಲಾಗಿ ಸ್ವೀಕರಿಸಿ ಯಶಸ್ವಿ ಗೊಳಿಸಿದ್ದಾರೆ. ಇವರು ಕೊಡಗು ಜಿಲ್ಲೆ ಮಡಿಕೇರಿ ತಾಲೂಕು ಕಕ್ಕಬೆ ಗ್ರಾಮ ಪಂಚಾಯಿತಿಯ ಯವಕಪಾಡಿ ಗ್ರಾಮದ ನಿವಾಸಿ ನಿವೃತ್ತ ಸೈನಿಕ ಕರವಟಿರ ಪಳಂಗಪ್ಪ ಮತ್ತು ಕಾಂತಿ ದಂಪತಿ
ಪುತ್ರಿ.-------------------------------------
ಹಬ್ಬದ ಕಟ್ಟುಪಾಡಿಗೆ ಧಕ್ಕೆ: ಗ್ರಾಮಸ್ಥರ ಆಕ್ರೋಶಮಡಿಕೇರಿ: ಕೊಡಗು ಜಿಲ್ಲೆಯ ಭಾಗಮಂಡಲ ತ್ರಿವೇಣಿ ಸಂಗಮದ ಬಳಿ ಅಸ್ಸಾಂ ಮೂಲದ ಕಾರ್ಮಿಕರು ಕಾವೇರಿ ನದಿಯಲ್ಲಿ ಮೀನು ಹಿಡಿದ ಘಟನೆಯಿಂದ ತಲಕಾವೇರಿ ತೀರ್ಥೋದ್ಭವದ ಹಿನ್ನೆಲೆಯಲ್ಲಿ ಆಚರಿಸಲಾಗುವ ಹಬ್ಬದ ಕಟ್ಟುಪಾಡಿಗೆ ಧಕ್ಕೆಯಾಗಿದೆ ಎಂದು ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಅಕ್ಟೋಬರ್ 4 ರಿಂದ ಅಕ್ಟೋಬರ್ 17 ರವರೆಗೆ ತೀರ್ಥೋದ್ಭವದ ಸಂದರ್ಭದಲ್ಲಿ ಐದು ಗ್ರಾಮಗಳಲ್ಲಿ ಹಬ್ಬದ ಕಟ್ಟು ಆಚರಣೆಯಿದೆ. ಈ ಸಮಯದಲ್ಲಿ ಪ್ರಾಣಿ ಬಲಿ, ಮಾಂಸಾಹಾರ ಸೇವನೆ ಸಂಪೂರ್ಣ ನಿಷಿದ್ಧವಾಗಿದೆ. ಆದರೆ, ಅಸ್ಸಾಂ ಕಾರ್ಮಿಕರು ಕಾವೇರಿ ನದಿಯಲ್ಲಿ ಮೀನು ಹಿಡಿದಿರುವುದು ಗ್ರಾಮದ ಕಟ್ಟುಪಾಡಿಗೆ ಭಂಗ ತಂದಿದೆ. ಕೊಡಗು ಜಿಲ್ಲೆಯಲ್ಲಿ ಅಸ್ಸಾಂ ಕಾರ್ಮಿಕರ ಹಾವಳಿ ಹೆಚ್ಚಾಗಿದೆ ಎಂದು ಗ್ರಾಮಸ್ಥರ ಆಕ್ರೋಶ ವ್ಯಕ್ತಪಡಿಸಿದ ಬೆನ್ನಲ್ಲೇ, ಪಂಚಾಯತ್ ಪಿಡಿಓ ಭಾಗಮಂಡಲ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಕಟ್ಟುಪಾಡಿಗೆ ಧಕ್ಕೆ ತಂದ ಅಸ್ಸಾಂ ಕಾರ್ಮಿಕರ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಪೊಲೀಸರು ಪ್ರಕರಣದ ತನಿಖೆ ಆರಂಭಿಸಿದ್ದು, ಮುಂದಿನ ಕ್ರಮಕ್ಕಾಗಿ ಕಾಯುತ್ತಿದ್ದಾರೆ.