ಸಾರಾಂಶ
ಬೆಳಗಾವಿಯ ಟೇಕ್ವಾಂಡೋ ತಜ್ಞ, ತರಬೇತುದಾರ, ಮಾರ್ಗದರ್ಶಕ ಮತ್ತು ಆಡಳಿತಗಾರರಾದ, ಭಾರತೀಯ ವಾಯುಪಡೆಯ ಟೇಕ್ವಾಂಡೋ ಮಾಸ್ಟರ್ ಶ್ರೀಪಾದ ಆರ್ ರಾವ್ ಅವರು ಲೆವೆಲ್ 2 ಅಂತರರಾಷ್ಟ್ರೀಯ ಟೇಕ್ವಾಂಡೋ ಪ್ರಶಿಕ್ಷಕರಾಗಿ ವರ್ಲ್ಡ್ ಟೇಕ್ವಾಂಡೋ ಸಂಸ್ಥೆಯಿಂದ ಪದೋನ್ನತಿ ಪಡೆದಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಳಗಾವಿ
ಬೆಳಗಾವಿಯ ಟೇಕ್ವಾಂಡೋ ತಜ್ಞ, ತರಬೇತುದಾರ, ಮಾರ್ಗದರ್ಶಕ ಮತ್ತು ಆಡಳಿತಗಾರರಾದ, ಭಾರತೀಯ ವಾಯುಪಡೆಯ ಟೇಕ್ವಾಂಡೋ ಮಾಸ್ಟರ್ ಶ್ರೀಪಾದ ಆರ್ ರಾವ್ ಅವರು ಲೆವೆಲ್ 2 ಅಂತರರಾಷ್ಟ್ರೀಯ ಟೇಕ್ವಾಂಡೋ ಪ್ರಶಿಕ್ಷಕರಾಗಿ ವರ್ಲ್ಡ್ ಟೇಕ್ವಾಂಡೋ ಸಂಸ್ಥೆಯಿಂದ ಪದೋನ್ನತಿ ಪಡೆದಿದ್ದಾರೆ.ಜ. 15ರಿಂದ 21ರವರೆಗೆ ವರ್ಲ್ಡ್ ಟೇಕ್ವಾಂಡೋ ನಡೆಸಿದ ನಿಗದಿತ ಅಡ್ವಾನ್ಸ್‌ಮೆಂಟ್ ಕೋರ್ಸ್‌ನಲ್ಲಿ ಟೇಕ್ವಾಂಡೋ ಮಾಸ್ಟರ್ ರಾವ್ ಸೇರಿದಂತೆ ಜಗತ್ತಿನಾದ್ಯಂತದಿಂದ ಸಂಬಂಧಿತ ನ್ಯಾಷನಲ್ ಫೆಡೆರೇಶನ್ ನಿಂದ ಶಿಫಾರಸು ಮಾಡಲಾದ ಇಂಟರ್ನ್ಯಾಷನಲ್ ಟೇಕ್ವಾಂಡೋ ಕೋಚ್ ಲೆವೆಲ್-1 ದರ್ಜೆಯ ಒಟ್ಟು 11 ಶ್ರೇಯಾಂಕಿತ ಅಭ್ಯರ್ಥಿಗಳು ಭಾಗವಹಿಸಿದ್ದರು.
7 ದಿನಗಳ ಕೋರ್ಸ್‌ನ ಪಠ್ಯಕ್ರಮವು ವರ್ಲ್ಡ್ ಟೇಕ್ವಾಂಡೋ ಫೆಡರೇಶನ್ ನಿಯಮಗಳು ಮತ್ತು ಆಡಳಿತ ವ್ಯವಸ್ಥೆ, ಸ್ಪರ್ಧೆಯ ನಿಯಮಾವಳಿ ಮತ್ತು ಅದರ ಕೇಸ್ ಸ್ಟಡೀಸ್, ವೈದ್ಯಕೀಯ ಆರೈಕೆ ಮತ್ತು ಆಂಟಿ-ಡೋಪಿಂಗ್, ಕ್ರೀಡಾಪಟುಗಳ ಸುರಕ್ಷತೆ, ಕ್ರೀಡಾ ಮನೋವಿಜ್ಞಾನ, ಆಟಗಳ ನಿರ್ವಹಣೆ ಮತ್ತು ತರಬೇತಿ ಕೌಶಲ್ಯಗಳನ್ನು ಒಳಗೊಂಡಿತ್ತು.ಅಂತಿಮ ಲಿಖಿತ ಪರೀಕ್ಷೆಯಲ್ಲಿ ಟೇಕ್ವಾಂಡೋ ಮಾಸ್ಟರ್ ರಾವ್ ಅವರು ಶೇ. 90 ಅಂಕಗಳನ್ನು ಪಡೆದು ''''''''ಇಂಟರ್ನ್ಯಾಷನಲ್ ಕೋಚ್ - ಲೆವೆಲ್ II'''''''' ಶ್ರೇಣಿಗೆ ಪದೋನ್ನತಿ ಪಡೆದಿದ್ದಾರೆ ಮತ್ತು ಇದರೊಂದಿಗೆ ಅವರು ರಾಷ್ಟ್ರೀಯ ತಂಡದ ತರಬೇತುದಾರರಾಗಿ ಮತ್ತು ಗ್ರೇಡ್-4, ಗ್ರೇಡ್-6, ಗ್ರೇಡ್-10 & ಗ್ರೇಡ್-14 ಶ್ರೇಣಿಗಳ ಇಂಟರ್ನ್ಯಾಷನಲ್ ಚಾಂಪಿಯನ್‌ಶಿಪ್‌ನಲ್ಲಿ ತಂಡದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಲು ಅರ್ಹತೆಯನ್ನು ಗಳಿಸಿದ್ದಾರೆ.
2020ರಲ್ಲಿ ಟೇಕ್ವಾಂಡೋ ಮಾಸ್ಟರ್ ರಾವ್ ಅವರು ಲೆವೆಲ್-1 ಅಂತರಾಷ್ಟ್ರೀಯ ಪ್ರಶಿಕ್ಷಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರು ಅವರ ಈ ಸಾಧನೆಗಾಗಿ ಕರ್ನಾಟಕ ಸರ್ಕಾರದಿಂದ ಶ್ಲಾಘನೆಯನ್ನು ಪಡೆದಿದ್ದರು ನಂತರ ಜೂನ್ 2023ರಲ್ಲಿ ಅವರನ್ನು ದಕ್ಷಿಣ ಕೊರಿಯಾ ಗಣರಾಜ್ಯದ ಕ್ರೀಡೆ, ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವಾಲಯದ ಸಂಪೂರ್ಣ ಪ್ರಾಯೋಜಕತ್ವದೊಂದಿಗೆ ಸಿಯೋಲ್ ಮತ್ತು ಮುಜುದಲ್ಲಿ ನಡೆದ ಡಬ್ಲ್ಯುಟಿ ಪಾರ್ಟ್ನರ್ ಶಿಪ್ ಟೇಕ್ವಾಂಡೋ ಪ್ರೋಗ್ರಾಮ್ ನಲ್ಲಿ ಭಾಗವಹಿಸಲು ಭಾರತದ ಮಾಸ್ಟರ್‌ಗಳಲ್ಲಿ ಒಬ್ಬರಾಗಿ ವಿಶ್ವ ಟೇಕ್ವಾಂಡೋ ಫೆಡರೇಷನಿಂದ ಆಯ್ಕೆಯಾಗಿದ್ದರು.;Resize=(128,128))
;Resize=(128,128))
;Resize=(128,128))
;Resize=(128,128))