ಮಾ. 8ರಿಂದ ಸಸಿಹಿತ್ಲುವಿನಲ್ಲಿ ಅಂತಾರಾಷ್ಟ್ರೀಯ ಸ್ಟ್ಯಾಂಡ್ ಅಪ್ ಪೆಡಲ್ ಸರ್ಫಿಂಗ್‌ ಸ್ಪರ್ಧೆ

| Published : Feb 25 2024, 01:51 AM IST

ಮಾ. 8ರಿಂದ ಸಸಿಹಿತ್ಲುವಿನಲ್ಲಿ ಅಂತಾರಾಷ್ಟ್ರೀಯ ಸ್ಟ್ಯಾಂಡ್ ಅಪ್ ಪೆಡಲ್ ಸರ್ಫಿಂಗ್‌ ಸ್ಪರ್ಧೆ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯ ಸರ್ಕಾರದ ಪ್ರವಾಸೋದ್ಯಮ ಇಲಾಖೆ ಮತ್ತು ಸರ್ಫಿಂಗ್ ಸ್ವಾಮಿ ಫೌಂಡೇಶನ್ ಸಹಯೋಗದಲ್ಲಿ ಸ್ಪರ್ಧೆ ಹಾಗೂ ಬೀಚ್ ಫೆಸ್ಟಿವಲ್ ನಡೆಯಲಿದೆ. ವಿಶ್ವ ಬ್ಯಾಂಕಿಂಗ್ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ.

ಕನ್ನಡಪ್ರಭವಾರ್ತೆ ಮೂಲ್ಕಿ

ಅಸೋಸಿಯೇಶನ್ ಆಫ್ ಪೆಡಲ್ ಸರ್ಫ್ ಪ್ರೊಫೆಶನಲ್ಸ್ ಎಪಿಪಿ ವರ್ಲ್ಡ್‌ ದೇಶದಲ್ಲೇ ಪ್ರಥಮ ಬಾರಿಗೆ ಮೂಲ್ಕಿ ಸಮೀಪದ ಸಸಿಹಿತ್ಲು ಮುಂಡಾ ಬೀಚ್‌ನಲ್ಲಿ ಮಾ. 8ರಿಂದ 10ರ ವರೆಗೆ ಅಂತಾರಾಷ್ಟ್ರೀಯ ಮಟ್ಟದ ಸ್ಟ್ಯಾಂಡ್ ಅಪ್ ಪೆಡಲ್ ಸರ್ಫಿಂಗ್ ಸ್ಪರ್ಧೆ ನಡೆಯಲಿದ್ದು ವಿಶ್ವ ಬ್ಯಾಂಕಿಂಗ್ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ.

ರಾಜ್ಯ ಸರ್ಕಾರದ ಪ್ರವಾಸೋದ್ಯಮ ಇಲಾಖೆ ಮತ್ತು ಸರ್ಫಿಂಗ್ ಸ್ವಾಮಿ ಫೌಂಡೇಶನ್ ಸಹಯೋಗದಲ್ಲಿ ಸ್ಪರ್ಧೆ ಹಾಗೂ ಬೀಚ್ ಫೆಸ್ಟಿವಲ್ ನಡೆಯಲಿದೆ. ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆ ಆಯೋಜಕರಾದ ಎಪಿಪಿ ವರ್ಲ್ಡ್‌ ಸಿಇಒ ಟ್ರಿಸ್ಟನ್ ಬೋಕ್ಸ್‌ಫೋರ್ಡ್ ಅವರು ಮಾಹಿತಿ ನೀಡಿದರು.

ಭಾರತೀಯ ಪ್ರಥಮ ರ್ಯಾಂಕ್ ಕ್ರೀಡಾಪಟು ಶೇಖ‌ರ್ ಪಚೈ ಮಾಹಿತಿ ನೀಡಿ, ಅಂತಾರಾಷ್ಟ್ರೀಯ ಸ್ಪರ್ಧೆ ನಮ್ಮ ದೇಶದಲ್ಲಿ ನಡೆಯಲಿರುವುದು ಸಂತಸ ತಂದಿದೆ. ಇಲ್ಲಿನ ಸ್ಪರ್ಧಿಗಳಿಗೆ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧಿಗಳೊಡನೆ ಸೆಣೆಸಲು ಅವಕಾಶ ದ ಜೊತೆಗೆ ಹೆಚ್ಚು ತಂತ್ರಗಾರಿಕೆ ಕಲಿಯಲು ಸಹಕಾರಿಯಾಗಲಿದೆ. ಸ್ಪರ್ಧೆಯಲ್ಲಿ ಭಾಗವಹಿಸಲು ಕಠಿಣ ತರಬೇತಿ ಆರಂಭಿಸಿದ್ದೇನೆ. ವಿಶ್ವ ಪ್ರಶಸ್ತಿ ವಿಜೇತ ಜಪಾನಿನ 17 ವರ್ಷ ಶೂರಿ ಆರ್ಕಿ ಸ್ಪರ್ಧೆಗೆ ಆಗಮಿಸಲಿದ್ದು ಭಾರತೀಯ ಸಮುದ್ರ ಮತ್ತು ಇಲ್ಲಿನ ಸ್ಪರ್ಧಾಳುಗಳ ಬಗ್ಗೆ ತಿಳಿಯುವ ಆಸಕ್ತಿ ಇದೆ ಎಂದಿದ್ದಾರೆ. ಸಸಿಹಿತ್ಲು ಮುಂಡಾ ಬೀಚ್ ಸ್ಪರ್ಧೆ ಹಾಗೂ ಬೀಚ್ ಉತ್ಸವಕ್ಕಾಗಿ ತಯಾರಿ ನಡೆಯುತ್ತಿದೆ.