ಸಾರಾಂಶ
ದೊಡ್ಡಬಳ್ಳಾಪುರ: ಥೈಲ್ಯಾಂಡ್‌ನ ಬ್ಯಾಂಕಾಕ್‌ನಲ್ಲಿ ನಡೆದ 11ನೇ ಟಿರಾಕ್ ಟೇಕ್ವಾಂಡೋ ಅಂತಾರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸಿದ್ದ ದೊಡ್ಡಬಳ್ಳಾಪುರದ ಕರಾಟೆಪಟುಗಳು ಉತ್ತಮ ಸಾಧನೆಯೊಂದಿಗೆ ಹಲವು ಪದಕಗಳನ್ನು ಪಡೆದಿದ್ದಾರೆ. ಇಲ್ಲಿನ ಶಂಕರ್ ಟೇಕ್ವಾಂಡೋ ಅಕಾಡೆಮಿಯಲ್ಲಿ ತರಬೇತಿ ಪಡೆದ ನ್ಯಾಷನಲ್ ಪ್ರೈಡ್ ಶಾಲೆಯ 9 ರಿಂದ 10 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಎಸ್.ವರ್ಷನ್(ಚಿನ್ನ), 7 ರಿಂದ 8 ವರ್ಷದ ವಿಭಾಗದಲ್ಲಿ ಎನ್.ಮನ್ವಿತ್ ಗೌಡ(ಚಿನ್ನ), ಡಿ.ಯು.ನಂದನ್(ಕಂಚು), 5 ರಿಂದ 6 ವರ್ಷದ ಬಾಲಕಿಯರ ವಿಭಾಗದಲ್ಲಿ ಎಸ್.ಶಾನ್ವಿ(ಚಿನ್ನ), 7 ರಿಂದ 8 ವರ್ಷದ ವಿಭಾಗದಲ್ಲಿ ಚಿನ್ಮಯಿ(ಚಿನ್ನ), 9 ರಿಂದ 10 ವರ್ಷದ ವಿಭಾಗದಲ್ಲಿ ಆರ್.ತಮನ್ನಾ(ಬೆಳ್ಳಿ), 8 ರಿಂದ 9 ವರ್ಷ ವಿಭಾಗದಲ್ಲಿ ಪಿ.ದೀಕ್ಷಾ(ಬೆಳ್ಳಿ), 7 ರಿಂದ 8 ವರ್ಷದ ವಿಭಾಗದಲ್ಲಿ ಡಿ.ಯು.ನಂದನ್(ಕಂಚು) ಪದಕ ಪಡೆದಿದ್ದಾರೆ. ಕರಾಟೆಪಟುಗಳನ್ನು ಮುಖ್ಯತರಬೇತುದಾರ ರವಿಕುಮಾರ್, ತರಬೇತುದಾರ ಆರ್.ಶಂಕರ್, ಜಿಲ್ಲಾ ಟೇಕ್ವಾಂಡೋ ಅಸೋಸಿಯೇಷನ್ ಕಾರ್ಯದರ್ಶಿ ವಿ.ನಾರಾಯಣಸ್ವಾಮಿ ಮತ್ತಿತರರು ಅಭಿನಂದಿಸಿದ್ದಾರೆ.