ಸಾರಾಂಶ
ಜಿ.ಪಂ ಸಿಇಒ ಎಚ್.ಎಸ್. ಕೀರ್ತನಾರಿಂದ ಉದ್ಘಾಟನೆ: ಭಾಷಣ, ಚರ್ಚೆ ವಿಚಾರಗೋಷ್ಠಿ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ವಿಭಿನ್ನವಾಗಿ ಆಚರಿಸುವ ಜೊತೆಗೆ ಆಟೋಟ ಸ್ಪರ್ಧೆ ಆಯೋಜಿಸಲಾಗಿದ್ದು, ಮಾ.೮ ರಂದು ಬೆಳಗ್ಗೆ ೯ ಕ್ಕೆ ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಸಹೋದರತ್ವ ಸಮಿತಿ ಅಧ್ಯಕ್ಷೆ ಕೆ.ಬಿ. ಸುಧಾ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಅಂದು ಬೆಳಗ್ಗೆ ೧೧ಕ್ಕೆ ಮಹಿಳಾ ದಿನಾಚರಣೆಯನ್ನು ಜಿ.ಪಂ ಸಿಇಒ ಎಚ್.ಎಸ್. ಕೀರ್ತನಾ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಬಿಎಸ್‌ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಟಿ. ರಾಧಾಕೃಷ್ಣ, ನಗರಸಭೆ ಪೌರಾಯುಕ್ತ ಬಿ.ಸಿ. ಬಸವರಾಜ್ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ಹೇಳಿದರು.ಜಿಲ್ಲಾ ಸಹೋದರತ್ವ ಸಮಿತಿ ಸ್ಥಾಪನೆಯಾಗಿ ೧೦ ವರ್ಷಗಳು ತುಂಬುತ್ತಿರುವ ಸಂದರ್ಭದಲ್ಲಿ ಈ ಸಂಭ್ರಮದ ಆಚರಣೆಯನ್ನು ವಿಭಿನ್ನ, ವಿಶಿಷ್ಟವಾಗಿ ಮಾಡಲು ನಿರ್ಧರಿಸಲಾಗಿದೆ. ಭಗವಾನ್ ಬುದ್ಧರ ಸಂದೇಶ, ತತ್ವಾದರ್ಶವನ್ನು ಸಮಾಜದಲ್ಲಿ ಬಿತ್ತರಿ ಸುವ ಉದ್ದೇಶದೊಂದಿಗೆ ಸಮಿತಿ ಸ್ಥಾಪಿಸಿ ಎಲ್ಲಾ ಸದಸ್ಯರು ಆದರ್ಶಗಳನ್ನು ಮೈಗೂಡಿಸಿಕೊಂಡು ಸಕ್ರಿಯವಾಗಿ ಸಮಾಜ ಸೇವೆಯಲ್ಲಿ ತೊಡಗಿದ್ದಾರೆಂದು ತಿಳಿಸಿದರು.ಮೇಲು-ಕೀಳು ಬೇಧಭಾವವಿಲ್ಲದೆ ಸಮಾಜದ ಸರ್ವರೂ ಒಗ್ಗಟ್ಟಾಗಿ ಭಾಗವಹಿಸಲು ಈ ವೇದಿಕೆ ಸ್ಥಾಪಿಸಿದ್ದು, ವ್ಯಕ್ತಿ ಸ್ವಾಭಿಮಾನ, ಸ್ವಾವಲಂಬಿ ಜೀವನ ನಡೆಸಲು ಅಗತ್ಯವಿರುವ ಪರಿಣಿತರಿಂದ ಭಾಷಣ ಮತ್ತು ಚರ್ಚೆ ಏರ್ಪಡಿಸಿ ಬೌದ್ಧಿಕ ವಿಚಾರಗಳನ್ನು ತಿಳಿಸಲಾಗುವುದೆಂದು ಹೇಳಿದರು.ನಗರದ ಅನಾಥಾಶ್ರಮ, ವೃದ್ಧಾಶ್ರಮಗಳು, ಅಂಧಮಕ್ಕಳ ಪಾಠಶಾಲೆ, ಸರ್ವರೂ ಸಮಾರೆಂದು ಸಾರಿ ಸೇವೆ ಸಲ್ಲಿಸಿರುವ ಮಹಾತ್ಮರ ದಿನಾಚರಣೆ ಬಗ್ಗೆ ಸಂಬಂಧಿಸಿದ ಉಪನ್ಯಾಸಕರಿಂದ ತಿಳಿಸುವ ಜೊತೆಗೆ ಅಲ್ಲೇ ಮಹಾನ್ ಪುರುಷರ ಜಯಂತಿ ಆಚರಿಸಲಾಗಿದೆ ಎಂದರು.ಸಮಿತಿ ಸಮಾಜಮುಖಿಯಾಗಿ ಎಲ್ಲಾ ಸದಸ್ಯರೊಂದಿಗೆ ಚರಂಡಿ, ರಸ್ತೆ ಸ್ವಚ್ಚತೆ, ಉಚಿತ ಆರೋಗ್ಯ ತಪಾಸಣೆ, ಕಣ್ಣಿನ ತಪಾಸಣಾ ಶಿಬಿರ, ಗ್ರಾಮೀಣ ಭಾಗದಲ್ಲಿ ನಿರ್ಗತಿಕರಿಗೆ ಮನೆ ನಿರ್ಮಾಣ ಸೇರಿದಂತೆ ಯಾವುದೇ ಸಂಭಾವನೆ ಇಲ್ಲದೆ ಕಾರ್ಮಿಕರಾಗಿ ಕೆಲಸ ಮಾಡುತ್ತೇವೆ ಎಂದರು.ಬಡವರ ಮನೆಗಳಿಗೆ ಬೇಕಾಗಿರುವ ಅಗತ್ಯ ಪರಿಕರ ಕೊಡಿಸಲಾಗಿದೆ. ಕಳೆದ ೫೦ ವರ್ಷಗಳಿಂದ ಜಿಲ್ಲೆಯಲ್ಲಿ ತಮ್ಮ ಅಸ್ತಿತ್ವ ಲೆಕ್ಕಿಸದೆ ಸಮಾನತೆಗೆ ಹೋರಾಟ ಮತ್ತು ಸೇವೆ ಸಲ್ಲಿಸುವ ಹಿರಿಯರು, ವಿವಿಧ ಸಂಘಟನೆ ಮತ್ತು ಪಕ್ಷಗಳ ಮುಖಂಡರನ್ನು ಸನ್ಮಾನಿಸಲಾಗಿದೆ ಎಂದು ಹೇಳಿದರು.ಕೋವಿಡ್ ಸಂದರ್ಭದಲ್ಲಿ ತಮ್ಮ ಪ್ರಾಣದ ಹಂಗು ತೊರೆದು ಸೇವೆ ಸಲ್ಲಿಸಿದ ನಗರದ ಜಿಲ್ಲಾಸ್ಪತ್ರೆ ವೈದ್ಯರು, ನರ್ಸ್‌ಗಳು ಮತ್ತು ಸಿಬ್ಬಂದಿಯನ್ನು ಸನ್ಮಾನಿಸಲಾಗಿದ್ದು ಹೀಗೆ ೧೦ ವರ್ಷಗಳಿಂದ ಅನೇಕ ಸ್ಥರಗಳಲ್ಲಿ ಸಮಾಜ ಮುಖಿ ಕೆಲಸ ಮಾಡುತ್ತಿದ್ದೇ ವೆಂದು ಹೇಳಿದರು.ಸಂಜೆ ೪ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಶಾಸಕ ಎಚ್.ಡಿ. ತಮ್ಮಯ್ಯ, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಉಪನಿರ್ದೇಶಕರಾದ ಮಂಜುಳ ಹುಲ್ಲಳ್ಳಿ ಬಹುಮಾನ ವಿತರಣೆ ಮಾಡಲಿದ್ದಾರೆಂದರು.ಬಿಎಸ್‌ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಟಿ. ರಾಧಾಕೃಷ್ಣ ಮಾತನಾಡಿ, ಇದೊಂದು ೩೨ ಜಾತಿ ಸಮ್ಮಿಲನವಾಗಿದ್ದು ಸೌಹಾರ್ದ ಕೂಟಕ್ಕಾಗಿ ವಿವಿಧ ಕ್ರೀಡೆಗಳನ್ನು ಏರ್ಪಡಿಸಲಾಗಿದೆ. ಸತ್ಯದ ಕಡೆ ಇರುವವರು ಇಂದು ಬಹಳ ವಿರಳ ಎಂದು ವಿಷಾಧಿಸಿದರು.ಈ ಕ್ರೀಡಾಕೂಟಗಳಲ್ಲಿ ಭಾಗವಹಿಸುವ ತಾಲೂಕಿನ ನಾಗರಿಕರು ಮಾ.೫ ರೊಳಗೆ ಕೆ.ಬಿ. ಸುಧಾ ೯೪೮೨೧೫೮೮೭೧, ಕೆ.ಎಸ್. ಮಂಜುಳ ೯೯೭೨೨೧೦೮೯೧, ಕೆ.ಆರ್ ಗಂಗಾಧರ್ ೯೪೪೯೪೧೨೨೨೬೩, ವಸಂತ್. ಆರ್ ೯೬೬೩೪೮ ೧೮೯೧ ಇವರ ವಾಟ್ಸಾಪ್ ಸಂಖ್ಯೆಯಲ್ಲಿ ನೋಂದಾಯಿಸಲು ಮನವಿ ಮಾಡಿದರು.ಪತ್ರಿಕಾಗೋಷ್ಠಿಯಲ್ಲಿ ಸಮಿತಿ ಕಾರ್ಯದರ್ಶಿ ಕೆ.ಎಸ್. ಮಂಜುಳ, ಮುಖಂಡ ಎಚ್.ಕುಮಾರ್, ಕೆ.ಆರ್. ಗಂಗಾಧರ್, ಆರ್. ವಸಂತ್, ಟಿ.ಎಚ್. ರತ್ನ, ಕಲಾವತಿ, ಗಿರೀಶ್ ಉಪಸ್ಥಿತರಿದ್ದರು.