ಯಲಹಂಕದಲ್ಲಿ ಯೋಗದಿನಾಚರಣೆ

| Published : Jun 22 2024, 01:33 AM IST / Updated: Jun 22 2024, 07:10 AM IST

ಸಾರಾಂಶ

ವಿಶ್ವ ಯೋಗ ದಿನಾಚರಣೆಯ ದಶಮಾನೋ ತ್ಸವದ ಪ್ರಯುಕ್ತ ಯಲಹಂಕದ ಅಳ್ಳಾಳಸಂದ್ರ‌ ಕೆರೆಯ ಬಳಿ ಸುಮಾರು 2 ಸಾವಿರಕ್ಕೂ ಹೆಚ್ಚಿನ ನಾಗರೀಕರು, ಶಾಲಾಮಕ್ಕಳು ಹಾಗೂ ವಿವಿಧ ಸಂಘಟನೆಗಳ ಮುಖಂಡರು ಯೋಗ ಸಂಗಮ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಾಮೂಹಿಕವಾಗಿ ಯೋಗಾಸನ ಪ್ರದರ್ಶಿಸಿದರು.

 ಯಲಹಂಕ :  ವಿಶ್ವ ಯೋಗ ದಿನಾಚರಣೆಯ ದಶಮಾನೋ ತ್ಸವದ ಪ್ರಯುಕ್ತ ಯಲಹಂಕದ ಅಳ್ಳಾಳಸಂದ್ರ‌ ಕೆರೆಯ ಬಳಿ ಸುಮಾರು 2 ಸಾವಿರಕ್ಕೂ ಹೆಚ್ಚಿನ ನಾಗರೀಕರು, ಶಾಲಾಮಕ್ಕಳು ಹಾಗೂ ವಿವಿಧ ಸಂಘಟನೆಗಳ ಮುಖಂಡರು ಯೋಗ ಸಂಗಮ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಾಮೂಹಿಕವಾಗಿ ಯೋಗಾಸನ ಪ್ರದರ್ಶಿಸಿದರು. ಕಾರ್ಯಕ್ರಮದಲ್ಲಿ ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್, ಸಿಂಗನಾಯಕನಹಳ್ಳಿ ರೈತ ಸೇವಾ ಸಹಕಾರ ಸಂಘದ ಅಧ್ಯಕ್ಷೆ‌ ವಾಣಿಶ್ರೀ ವಿಶ್ವನಾಥ್ ನಾಗರೀಕರೊಟ್ಟಿಗೆ ಸಹಜ ಯೋಗ ಪ್ರದರ್ಶನದ ಮೂಲಕ ಗಮನ ಸೆಳೆದರು.

ಕಾರ್ಯಕ್ರಮ ಉದ್ದೇಶಿಸಿ ಶಾಸಕ ಎಸ್ ಆರ್ ವಿಶ್ವನಾಥ್ ಮಾತನಾಡಿ, ಯೋಗವು ವೈಯಕ್ತಿಕ ಆರೋಗ್ಯ ಮಾತ್ರವಲ್ಲದೇ, ಸಾಮಾಜಿಕ ಯೋಗಕ್ಷೇಮಕ್ಕೂ ಕೊಡುಗೆ ನೀಡುತ್ತದೆ. ಇದು ವೈಯಕ್ತಿಕ ಮತ್ತು ಸಾಮಾಜಿಕ ಆರೋಗ್ಯದ ಪರಸ್ಪರ ಸಂಬಂಧವನ್ನು ಒತ್ತಿ ಹೇಳುತ್ತದೆ ಎಂದರು.

ಇದೇ ಸಂದರ್ಭದಲ್ಲಿ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಪದ್ಮಶ್ರೀ, ಯೋಗ ಸಂಗಮ ಕಾರ್ಯಕ್ರಮದ ಆಯೋಜನಾ ಮಂಡಳಿಯ ಪ್ರಮುಖರಾದ ಕೆ.ವಿಜಯ ಕುಮಾರ್, ಎಚ್.ನಟರಾಜ್ ವಿಧಾನ ಪರಿಷತ್ ಸದಸ್ಯ ಕೇಶವ ಪ್ರಸಾದ್, ಹಿನ್ನಲೆ ಗಾಯಕ ಗೋಪಿ, ಮಾಜಿ ಬಿಬಿಎಂಪಿ ಸದಸ್ಯ ಸತೀಶ್ ಸೇರಿದಂತೆ ಇನ್ನಿತರ ಗಣ್ಯರಿದ್ದರು.