ಸಾರಾಂಶ
ಕನ್ನಡಪ್ರಭ ವಾರ್ತೆ ಕೋಲಾರಮಾನಸಿಕ ಆರೋಗ್ಯದ ಕುರಿತು ಇರುವ ತಪ್ಪು ಕಲ್ಪನೆ, ಕಟ್ಟುಕಥೆಗಳು, ಮೂಢನಂಬಿಕೆ ಹೋಗಲಾಡಿಸಲು ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಆಚರಿಸುತ್ತಿದ್ದು, ಒತ್ತಡ ಮುಕ್ತ ವಾತಾವರಣ ಸೃಷ್ಟಿಯ ಮೂಲಕ ರೋಗ ನಿವಾರಣೆ ಸಾಧ್ಯ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸುನಿಲ್ ಎಸ್.ಹೊಸಮನಿ ತಿಳಿಸಿದರು.ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ದೇವರಾಜ ಅರಸು ವೈದ್ಯಕೀಯ ಕಾಲೇಜು ಇವರ ಸಂಯುಕ್ತ ಆಶ್ರಯದಲ್ಲಿ ಅರಸು ಮೆಡಿಕಲ್ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಹಾಗೂ ಕಾನೂನು ಅರಿವು ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು. ಆರೋಗ್ಯ ಕುರಿತು ಜಾಗೃತಿ
ಈ ಸಾಲಿನ ಧ್ಯೇಯ ವಾಕ್ಯ ‘ಕೆಲಸದ ಸ್ಥಳದಲ್ಲಿ ಮಾನಸಿಕ ಆರೋಗ್ಯಕ್ಕೆ ಆದ್ಯತೆ ನೀಡುವುದು’ ಎಂಬುದಾಗಿದೆ. ಯಾವುದೇ ವೃತ್ತಿಯಾದರೂ ಒತ್ತಡ ಮುಕ್ತವಾಗಿರಬೇಕು, ಅಂತಹ ವಾತಾವರಣ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಸಹಕಾರಿಯಾಗುತ್ತದೆ. ಮಾನಸಿಕ ಆರೋಗ್ಯ ಜಾಗೃತಿಗಾಗಿ ಒಂದು ದಿನವನ್ನು ಆಚರಿಸಲು ೧೯೯೨ ರಲ್ಲಿ ವಿಶ್ವ ಮಾನಸಿಕ ಆರೋಗ್ಯ ಕಾಂಗ್ರೆಸ್‌ನಲ್ಲಿ ಪ್ರಸ್ತಾಪಿಸಿದ್ದು, ಅದರಂತೆ ಪ್ರತಿ ವರ್ಷ ಈ ದಿನ ಆಚರಿಸಲಾಗುತ್ತಿದೆ, ಮತ್ತು ಮಾನಸಿಕ ಆರೋಗ್ಯದ ಕುರಿತು ಜಾಗೃತಿ ಮತ್ತು ಅವರ ರಕ್ಷಣೆಗೆ ಇರುವ ಕಾನೂನುಗಳ ಕುರಿತು ತಿಳಿಸಿಕೊಡಲಾಗುತ್ತಿದೆ ಎಂದರು.ಜೀವನದ ಶೈಲಿಯಿಂದ ಮಾನಸಿಕ ಆರೋಗ್ಯ ಸಮಸ್ಯೆ ಉಲ್ಬಣವಾಗುವ ಸಾಧ್ಯತೆ ಇರುತ್ತದೆ, ಆಧುನಿಕ ಜಗತ್ತಿನಲ್ಲಿ ಹಲವಾರು ಕಾರಣಗಳಿಂದ ಮಾನಸಿಕ ಆರೋಗ್ಯದ ಸಮಸ್ಯೆ ಹೆಚ್ಚುತ್ತಿರುವುದರಿಂದ ಅಂತಹ ವ್ಯಕ್ತಿಗಳನ್ನು ಜಗತ್ತು ನೋಡುವ ದೃಷ್ಟಿಯೇ ಬೇರೆಯಾಗಿರುತ್ತದೆ ಆದ್ದರಿಂದ ಅಂತಹ ವ್ಯಕ್ತಿಗಳ ರಕ್ಷಣೆಗೆ ಮಾನಸಿಕ ಆರೋಗ್ಯ ಕಾಯಿದೆ ೧೯೮೭ರಲ್ಲಿ ಜಾರಿಗೆ ಬಂದಿದೆ ಎಂದರು.ಆಪ್ತ ಸಮಾಲೋಚನೆ ಚಿಕಿತ್ಸೆ
ಸದರಿ ಕಾಯಿದೆಗೆ ೨೦೧೭ರಲ್ಲಿ ತಿದ್ದುಪಡಿ ತಂದು ಹೊಸ ಮಾನಸಿಕ ಆರೋಗ್ಯ ಸಂರಕ್ಷಣಾ ಕಾಯಿದೆ ಜಾರಿಗೆ ತರಲಾಗಿದೆ, ಸದರಿ ಕಾಯಿದೆಯಡಿ ಮಾನಸಿಕ ಆರೋಗ್ಯದಿಂದ ಬಳಲುವ ವ್ಯಕ್ತಿಗಳಿಗೆ ಇರುವ ಹಕ್ಕುಗಳು, ಚಿಕಿತ್ಸೆ, ಅವರ ಸಂರಕ್ಷಣೆಗೆ ಆಪ್ತ ಸಮಾಲೋಚನೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಮಾನಸಿಕ ಕಾಯಿಲೆಗಳು ಹಲವಾರು ಚಿತ್ತ ಚಂಚಲತೆ, ಬುದ್ದ ಮಾಂದ್ಯತೆ, ಮಾಧಕ ವಸ್ತು ಮತ್ತು ಮದ್ಯಪಾನ ವ್ಯಸನಗಳೀಗೆ ಕಾರಣವಾಗುವುದು, ಆಗಿದ್ದು, ಇಂತಹವರಿಗೆ ಆಪ್ತ ಸಮಾಲೋಚನೆ ಮೂಲಕ ಚಿಕಿತ್ಸೆ ಪಡೆಯಲು ಅವಕಾಶ ಕಲ್ಪಿಸಲಾಗಿದೆ ಎಂದರು.ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ನಿಖಿಲ್ ಮಾತನಾಡಿ, ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯ ಮಹತ್ವ ಹಾಗೂ ಜಿಲ್ಲೆಯ ಮಾನಸಿಕ ಆರೋಗ್ಯ ಕೇಂದ್ರದಲ್ಲಿ ಸಿಗುವ ಆಪ್ತಸಮಾಲೋಚನೆ ಮತ್ತಿತರ ಚಿಕಿತ್ಸಾ ಸೌಲಭ್ಯಗಳ ಕುರಿತು ತಿಳಿಸಿಕೊಟ್ಟು, ಜಿಲ್ಲಾಸ್ಪತ್ರೆಯಲ್ಲಿರುವ ಈ ಚಿಕಿತ್ಸೆಯ ಪ್ರಯೋಜನ ಪಡೆಯಬೇಕು. ಮಾನಸಿಕ ರೋಗಿಗಳಿಗೆ ಬದುಕುವ ಹಕ್ಕಿದೆ, ಅವರಿಗೆ ಕಿರುಕುಳ ನೀಡುವುದು, ತೊಂದರೆ ಕೊಟ್ಟರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ತಿಳಿಸಿ, ಮಾನಸಿಕ ಸಮಸ್ಯೆ ಇರುವವರ ಕುರಿತು ಮಾನವೀಯ ಮನಸ್ಥಿತಿಯಿಂದ ಸಮಾಜ ವರ್ತಿಸಬೇಕು ಎಂದು ಸಲಹೆ ನೀಡಿದರು.
ಸವಾಲಾದ ಮಾನಸಿಕ ಆರೋಗ್ಯಕಾರ್ಯಕ್ರಮದಲ್ಲಿ ದೇವರಾಜ ಅರಸು ವೈದ್ಯಕೀಯ ವಿವಿ ಉಪಕುಲಪತಿ ಡಾ.ವೆಂಗಮ್ಮ ಮಾತನಾಡಿ, ಮಾನಸಿಕ ಆರೋಗ್ಯ ರಕ್ಷಣೆ ಇಂದಿನ ಸವಾಲಾಗಿದೆ, ಇದು ಸೂಕ್ಷ್ಮ ವಿಚಾರವಾಗಿದ್ದು, ಕೆಲಸ ಮಾಡುವ ಸ್ಥಳಗಳಲ್ಲಿ, ಮನೆಗಳಲ್ಲಿ ಅತಿಯಾದ ಒತ್ತಡ, ಹಿಂಸೆ, ಹೀಯಾಳಿಸುವುದು, ಬೇರೊಬ್ಬರೊಂದಿಗೆ ತುಲನೆ ಮಾಡುವುದು ಈ ಎಲ್ಲಾ ಕಾರಣಗಳಿಂದ ಕಂಡು ಬರುತ್ತದೆ, ಆದ್ದರಿಂದ ಒತ್ತಡ ಮುಕ್ತ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಕೈಜೋಡಿಸುವ ಮೂಲಕ ಮಾನಸಿಕ ರೋಗ ಮುಕ್ತ ವಾತಾವರಣ ಸೃಷ್ಟಿಸಬಹುದು ಎಂದರು.ವೈದ್ಯಕೀಯ ಕಾಲೇಜಿನ ಮುಖ್ಯ ಆಡಳಿತಾಧಿಕಾರಿ ಡಾ.ಡಿ.ವಿ.ಎಲ್.ಎನ್.ಪ್ರಸಾದ್, ವೈದ್ಯಕೀಯ ಕಾಲೇಜಿನ ಕುಲಸಚಿವ ಡಾ.ಮುನಿನಾರಾಯಣ, ಪ್ರಾಂಶುಪಾಲ ಡಾ.ಪ್ರಭಾಕರ್, ಮನೋವೈದ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಹಾಗೂ ಪ್ರಾಧ್ಯಾಪಕ ಡಾ.ಮೋಹನ್ ರೆಡ್ಡಿ ಮತ್ತಿತರರಿದ್ದರು.