ಕನ್ನಡಪ್ರಭ ವಾರ್ತೆ ಬೈಲಹೊಂಗಲ ಇಂದಿನ ಮಕ್ಕಳಿಗೆ ಹಾಗೂ ಯುವ ಸಮುದಾಯಕ್ಕೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸೇರಿ ಇತಿಹಾಸಕಾರರ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಸಬೇಕು. ಯಾವುದೇ ತಪ್ಪು ಮಾಹಿತಿ ನೀಡಬಾರದು. ಸಾಹಿತಿಗಳು, ವಿದ್ವಾಂಸರು, ಸಂಶೋಧಕರು ಆಳವಾದ ಸಂಶೋಧನೆಯ ಮೂಲಕ ಆಧಾರ ಸಹಿತ ಜನರಿಗೆ ಇತಿಹಾಸಕಾರರನ್ನು ಪರಿಚಯಿಸಬೇಕು ಸಂಶೋಧಕ ಸಿ.ಬಿ.ಗಣಾಚಾರಿ ಹೇಳಿದರು.

ಕನ್ನಡಪ್ರಭ ವಾರ್ತೆ ಬೈಲಹೊಂಗಲ

ಇಂದಿನ ಮಕ್ಕಳಿಗೆ ಹಾಗೂ ಯುವ ಸಮುದಾಯಕ್ಕೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸೇರಿ ಇತಿಹಾಸಕಾರರ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಸಬೇಕು. ಯಾವುದೇ ತಪ್ಪು ಮಾಹಿತಿ ನೀಡಬಾರದು. ಸಾಹಿತಿಗಳು, ವಿದ್ವಾಂಸರು, ಸಂಶೋಧಕರು ಆಳವಾದ ಸಂಶೋಧನೆಯ ಮೂಲಕ ಆಧಾರ ಸಹಿತ ಜನರಿಗೆ ಇತಿಹಾಸಕಾರರನ್ನು ಪರಿಚಯಿಸಬೇಕು ಸಂಶೋಧಕ ಸಿ.ಬಿ.ಗಣಾಚಾರಿ ಹೇಳಿದರು.

ತಾಲೂಕಿನ ಸಂಗೊಳ್ಳಿ ಗ್ರಾಮದ ಸ್ಮಾರಕ ಭವನದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಮ್ಮಿಕೊಂಡಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಉತ್ಸವ-2026ರ ಅಂಗವಾಗಿ ಮಂಗಳವಾರ ನಡೆದ ವಿಚಾರಗೋಷ್ಠಿಯಲ್ಲಿ ಮಾತನಾಡಿದರು.

ಉಪನ್ಯಾಸಕ ಬಸವರಾಜ ಪುರಾಣಿಕಮಠ ಅವರು ಆಂಗ್ಲ ದಾಖಲೆಗಳಲ್ಲಿ ರಾಯಣ್ಣನ ಪಾತ್ರ ಕುರಿತು ಮಾತನಾಡಿ, ಸಂಗೊಳ್ಳಿ ರಾಯಣ್ಣ ಜ್ಯಾತ್ಯಾತೀತ ನಾಯಕ. ಎಲ್ಲರೊಂದಿಗೆ ಭಾವೈಕ್ಯತೆ ಹೊಂದಿದ್ದ. ಹಲವಾರು ಸರ್ಕಾರಿ ಕಚೇರಿ ಸುಟ್ಟು ಬ್ರಿಟಿಷರ ಆಡಳಿತ ವಿರೋದಿಸಿದ್ದ. ಈ ಕುರಿತು ಹಲವು ದಾಖಲೆ ತಿಳಿಸುತ್ತವೆ. ಬೀಡಿ. ಸಂಪಗಾವ. ಹಳಿಯಾಳ, ಧಾರವಾಡ ಈ ಸ್ಥಳಗಳಲ್ಲಿ ದಾಳಿ ಮಾಡಿದ್ದ. ಹಂಡಿಭಡಗನಾಥದಲ್ಲಿ ಇದ್ದಾಗ ತಂಗಿಯ ನೋಡಲು ಮುಳಕೂರಕ್ಕೆ ಬಂದಾಗ ಅವನನ್ನು ಹಿಡಿಯಲು ಬಂದಾಗ ಗುಂಡು ಅವನ ತಂಗಿಗೆ ತಗುಲಿ ಆಕೆ ಮೃತಪಟ್ಟಳು. ಸಂಗೊಳ್ಳಿ ರಾಯಣ್ಣ ಹೆಸರಲ್ಲಿ ನಾಣ್ಯ ಬಿಡುಗಡೆ ಮಾಡಿ ಯುವ ಜನಾಂಗಕ್ಕೆ ರಾಯಣ್ಣ ಇನ್ನಷ್ಟು ಪ್ರೇರಣೆ ಆಗಬೇಕೆಂದು ಆಶಯ ವ್ಯಕ್ತಪಡಿಸಿದರು.ಸಾಹಿತಿ ಡಾ.ವೈ.ಎಂ.ಯಾಕೋಳಿ ಮಾತನಾಡಿ, ರಾಯಣ್ಣನ ನೆಲದಲ್ಲಿ ಹುಟ್ಟಿದ ಮತ್ತು ರಾಯಣ್ಣನ ದಿನವೂ ಪೂಜಿಸುವ ತಮಗೆ ರಾಯಣ್ಣನ ಬಗ್ಗೆ ಹೇಳಬೇಕಾಗಿಲ್ಲ. ಆದರೆ, ರಾಯಣ್ಣನ ಬಗ್ಗೆ ಗೊತ್ತಿಲ್ಲದ ಜನರಿಗೆ ಹೇಳಬೇಕಾಗಿದೆ. ಅಭಿಮಾನದ ಕೊರತೆ ನಮ್ಮಲ್ಲಿ ಕಾಡುತ್ತಿದೆ. ರಾಯಣ್ಣ ಚರಿತ್ರೆಯ ನಮಗೆ ಏನನ್ನು ಕಲಿಸುತ್ತದೆ ಎಂದರೆ, ನಮ್ಮ ದೇಶದ ಎಕತೆ. ಸ್ವಾತಂತ್ರ್ಯಕ್ಕೆ ಧಕ್ಕೆ ಬಂದಾಗ ಹೋರಾಟ ಮಾಡಬೇಕು. ಇಂದಿನ ಯುವಕರಿಗೆ ನಮ್ಮ ದೇಶ, ನೆಲಕ್ಕೆ ದುಡಿಯುವ, ಮಡಿಯುವ ಶಕ್ತಿ ಬರಬೇಕು ಎಂದರು.ಸಾಹಿತಿ ಡಾ.ಗಜಾನನ ಸೋಗಲನ್ನವರ ಹೈದರಾಬಾದ ಪ್ರಾಂತದಲ್ಲಿ ಸಂಗೂಳ್ಳಿ ರಾಯಣ್ಣ ವಿಷಯ ಕುರಿತು ಮಾತನಾಡಿದರು. ಗ್ರಾಪಂ ಅಧ್ಯಕ್ಷೆ ರೂಪಾ ಚಚಡಿ ಅಧ್ಯಕ್ಷತೆ ವಹಿಸಿದ್ದರು. ಸಂಗೊಳ್ಳಿ ರಾಯಣ್ಣ ಅಧ್ಯಯನ ಪೀಠದ ನಿದೇರ್ಶಕ ಡಾ.ರವಿ ದಳವಾಯಿ, ಸ್ಕೌಟ್ಸ್ ಅಧಿಕಾರಿ ಅಜ್ಜಪ್ಪ ಅಂಗಡಿ ಅತಿಥಿಗಳಾಗಿ ಆಗಮಿಸಿದ್ದರು. ಶಿಕ್ಷಕ ಬಸವರಾಜ ಕಮತ ನಿರೂಪಿಸಿದರು