ಸಾರಾಂಶ
ವಿಜಯಪುರ: ಭಾರತೀಯ ಸನಾತನ ಸಂಸ್ಕೃತಿ, ಸಂಪ್ರದಾಯ, ಆಚಾರ ವಿಚಾರಗಳನ್ನು ಯುವಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ ಎಂದು ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ, ಶಿಕ್ಷಕ ಎಚ್.ಎಸ್.ರುದ್ರೇಶಮೂರ್ತಿ ತಿಳಿಸಿದರು.
ಕೊಮ್ಮಸಂದ್ರ ಶ್ರೀ ಕೃಷ್ಣ ಯೋಗಿನಾರೇಯಣ ಯತೀಂದ್ರರ ದೇವಾಲಯದಲ್ಲಿ ಶ್ರೀಕೃಷ್ಣ ಧ್ಯಾನಮಂದಿರ ಟ್ರಸ್ಟ್, ಶ್ರೀ ಕೃಷ್ಣ ಯೋಗಿನಾರೇಯಣ ಯತೀಂದ್ರ ಸತ್ಸಂಗ ಸೇವಾ ಸಮಿತಿಗಳ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಭಗವದ್ಗೀತೆ ಪಾರಾಯಣ, ಸತ್ಸಂಗ ಕಾರ್ಯಕ್ರಮದಲ್ಲಿ ಭಾರತೀಯ ಸನಾತನ ಸಂಸ್ಕೃತಿ ಕುರಿತು ಉಪನ್ಯಾಸ ನೀಡಿದರು.ಮಕ್ಕಳಿಗೆ ಬಾಲ್ಯದಲ್ಲಿಯೇ ಧರ್ಮ, ಸಂಸ್ಕೃತಿ ಪರಿಚಯಿಸಬೇಕು. ಇಂದಿನ ಜೀವನಶೈಲಿಯಲ್ಲಿ ಪಾಶ್ಚಿಮಾತ್ಯ ಸಂಸ್ಕೃತಿಯ ಪ್ರಭಾವ ಬಹುಬೇಗನೆ ಬೀರುತ್ತಿದೆ. ಪರಕೀಯರು ಭಾರತೀಯ ಸಂಸ್ಕೃತಿಯನ್ನು ಅಪ್ಪಿಕೊಳ್ಳುತ್ತಿದ್ದು, ಅನಾಥಾಶ್ರಮ, ವೃದ್ಧಾಶ್ರಮ, ವಿವಾಹ ವಿಚ್ಚೇದನಗಳು ಹೆಚ್ಚುತ್ತಿವೆ. ಇವು ನಮ್ಮ ಸಂಸ್ಕೃತಿಯಲ್ಲ. ಇವುಗಳಿಂದ ದೂರವಿರಲು ದೇಶದ ಸಂಸ್ಕೃತಿಯನ್ನು ಯುವಪೀಳಿಗೆಗೆ ಅರ್ಥ ಮಾಡಿಕೊಳ್ಳಬೇಕು. ಅನುಸರಿಸಬೇಕು ಎಂದರು.
ಶಿಕ್ಷಕ ಬಿ.ಎಸ್.ರಾಜಶೇಖರಾಚಾರಿ ಮಾತನಾಡಿ, ಸಾಮಾಜಿಕ ಜಾಲತಾಣಗಳ ಚಟ ಅಂಟಿಸಿಕೊಂಡಿರುವ ಯುವಪೀಳಿಗೆಯನ್ನು ತಿದ್ದಬೇಕಿದೆ ಎಂದರು.ಡಿ.ಎನ್.ಲಕ್ಷ್ಮಿಪತಿ ಮತ್ತು ನರಸಿಂಹಪ್ಪ ಭಗವದ್ಗೀತಾ ಪಾರಾಯಣ ಮಾಡಿದರು. ಶ್ರೀ ಕೃಷ್ಣ ಧ್ಯಾನಮಂದಿರ ಟ್ರಸ್ಟ್‌ನ ಗೌರವಾಧ್ಯಕ್ಷ ಕೆ.ವಿ.ವೆಂಕಟಸುಬ್ಬರಾವ್, ಧಾರ್ಮಿಕ ಮುಖಂಡ ಅಚ್ಚಪ್ಪಸ್ವಾಮೀಜಿ, ಗೋಣೂರು ಶ್ರೀ ರಾಮಕೃಷ್ಣಾನಂದ ಸ್ವಾಮೀಜಿ, ಸೇವಾಕರ್ತ ಮುನಿವೆಂಕಟಮ್ಮ ಮುನಿನಾರಾಯಣಪ್ಪ, ಕವಿತಾ ಆನಂದಕುಮಾರ್, ಟ್ರಸ್ಟ್ ಅಧ್ಯಕ್ಷ ನಾರಾಯಣಸ್ವಾಮಿ, ಮಂಜುನಾಥ್, ಚಂದ್ರಕಲಾ ವುಡ್‌ವರ್ಕ್ಸ್ ಮಾಲೀಕ ವಿ.ಕೃಷ್ಣಪ್ಪ, ಆಂಜಿನಪ್ಪ, ಸ್ವಪ್ನ ಡಯಾಗ್ನಸ್ಟಿಕ್‌ನ ರೂಪಾ ರಮೇಶ್‌ಸಿಂಧೆ, ಕಾಂತರಾಜು ಇತರರು ಪಾಲ್ಗೊಂಡಿದ್ದರು.ಶಿಕ್ಷಕಿ ಎಂ.ಗಿರಿಜಾಂಬ ರುದ್ರೇಶಮೂರ್ತಿ ದಂಪತಿ, ಶಿಕ್ಷಕ ರಾಜಶೇಖರ್, ಸೇವಾಕರ್ತರನ್ನು ಸನ್ಮಾನಿಸಲಾಯಿತು.