ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ನಗರಸಭೆ ಕಚೇರಿಯಲ್ಲಿ ಹಾಜರಿದ್ದ ಸಾರ್ವಜನಿಕರಿಂದ ದೂರುಗಳನ್ನು ಸ್ವೀಕರಿಸಿ ನಿಗದಿತ ಸಮಯದಲ್ಲಿ ನಿಯಮಾನುಸಾರ ಪರಿಶೀಲನೆ ನಡೆಸಿ ವಿಲೇವಾರಿ ಮಾಡುವಂತೆ ಜಿಲ್ಲಾಧಿಕಾರಿ ಡಾ.ಕುಮಾರ ಅಧಿಕಾರಿಗಳಿಗೆ ತಾಕೀತು ಮಾಡಿದರು.ನಗರಸಭೆಯ ಕಂದಾಯ ವಿಭಾಗಕ್ಕೆ ಭೇಟಿ ನೀಡಿ ಎ ಖಾತೆ ಮತ್ತು ಬಿ ಖಾತೆ ನೀಡುವ ಬಗ್ಗೆ ಪ್ರಗತಿಯನ್ನು ಪರಿಶೀಲಿಸಿ, ಇಂದಿರಾ ಕ್ಯಾಂಟೀನ್‌ನಲ್ಲಿ ಆಹಾರ ಗುಣಮಟ್ಟವನ್ನು ಕಾಪಾಡುವಂತೆ ಸೂಚಿಸಿದರು.
ಸಕಾಲ ಸೇವೆಯಲ್ಲಿ ಬರುವಂತಹ ಸಾರ್ವಜನಿಕ ಸೇವೆಗಳನ್ನು ನಿಗದಿತ ಅವಧಿಯಲ್ಲಿ ನೀಡಬೇಕು. ನ್ಯಾಯಾಲಯದಲ್ಲಿ ದಾಖಲಾಗಿರುವ ಪ್ರಕರಣಗಳನ್ನು ವಿಲೇಗೊಳಿಸುವ ಸಂಬಂಧ ಕ್ರಮವಹಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.ಎ ಖಾತ ಮತ್ತು ಬಿ ಖಾತಗಳ ಪ್ರಗತಿಯ ಬಗ್ಗೆ ಅಸಮಧಾನ ವ್ಯಕ್ತಪಡಿಸಿ ಸಾರ್ವಜನಿಕರಿಗೆ ವಿತರಿಸುವ ಸಂಬಂಧ ಒಂದು ವಾರದಲ್ಲಿ ಒಂದು ವಾರ್ಡ್ ನಂತೆ ಇ-ಖಾತಾ ಅಭಿಯಾನವನ್ನು ಹಮ್ಮಿಕೊಂಡು ಸಾರ್ವಜನಿಕರಿಗೆ ವ್ಯಾಪಕವಾಗಿ ಪ್ರಚಾರ ಮಾಡುವಂತೆ ತಿಳಿಸಿದರು.
ನಗರಸಭೆ ವತಿಯಿಂದ ಹೊಸದಾಗಿ ನಿರ್ಮಿಸುತ್ತಿರುವ ಮಾರುಕಟ್ಟೆ ಸಂಬಂಧ ಸೂಕ್ತ ಮಾಹಿತಿಯನ್ನು ನಿಗದಿತ ನಮೂನೆಯಲ್ಲಿ ತಯಾರಿಸಿ ಸಲ್ಲಿಸುವಂತೆ ಸೂಚಿಸಿದರು.ಜಿಲ್ಲಾಧಿಕಾರಿಗಳು ಯೋಜನಾ ನಿರ್ದೇಶಕರು, ಕಾರ್ಯಪಾಲಕ ಅಭಿಯಂತರರು, ಪೌರಾಯುಕ್ತರು ಹಾಗೂ ಇತರೆ ಸಿಬ್ಬಂದಿ ಸಭೆ ನಡೆಸಿ ಸಾರ್ವಜನಿಕರಿಗೆ ಅಗತ್ಯ ಸೇವೆಗಳನ್ನು ನಿಗಧಿತ ಅವಧಿಯಲ್ಲಿ ನಿಯಮಾನುಸಾರ ನೀಡುವಂತೆ ಸೂಚನೆ ನೀಡಿದರು. ಈ ವೇಳೆ ಪೌರಾಯುಕ್ತೆ ಪಂಪಶ್ರೀ ಸೇರಿದಂತೆ ಇತರೆ ಅಧಿಕಾರಿಗಳು ಇದ್ದರು.
ದರ್ಶನ್ ಅಭಿಮಾನಿಗಳಿಗೆ ತಿಳಿಹೇಳಲಿ: ದರ್ಶನ್ ಪುಟ್ಟಣ್ಣಯ್ಯಕನ್ನಡಪ್ರಭ ವಾರ್ತೆ ಮಂಡ್ಯ
ಒಂದು ಫ್ಲಾಟ್ ಫಾರಂನಲ್ಲಿ ಅವರಿಗೆ ಇಷ್ಟ ಬಂದಂತೆ ಮಾಡೋದಿಕ್ಕೆ ಆಗೋಲ್ಲ. ದರ್ಶನ್ ಅವರು ತಮ್ಮ ಅಭಿಮಾನಿಗಳಿಗೆ ತಿಳಿ ಹೇಳುವ ಕೆಲಸ ಮಾಡಬೇಕು. ಇಲ್ಲದಿದ್ದರೆ ಇದು ಹೀಗೆ ಮುಂದುವರಿಯುತ್ತದೆ. ಸರಿಯಾದ ಬೆಳವಣಿಗೆ ಅಲ್ಲ ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ತಿಳಿಸಿದರು.ನ್ಯಾಯಾಲಯದಲ್ಲಿ ತಪ್ಪಿತಸ್ಥರು ಎಂದು ಗೊತ್ತಾಗಿ ಶಿಕ್ಷೆಯೂ ಆಗುತ್ತೆ. ಅದರಿಂದ ಯಾರೂ ಸಹ ತಪ್ಪಿಸಿಕೊಳ್ಳಲು ಆಗೋಲ್ಲ. ನ್ಯಾಯಾಲಯದ ಮುಂದೆ ಯಾರೂ ದೊಡ್ಡವರಲ್ಲ. ಸುಮ್ಮನೆ ಮಾತನಾಡಿದರೆ ವೇಸ್ಟ್. ಕಮೆಂಟ್ ಮಾಡಿ ಅವರಿವರನ್ನು ಬೈದುಕೊಂಡು ಇದ್ದರೆ ಏನೂ ಆಗೋಲ್ಲ. ನ್ಯಾಯಾಲಯದಲ್ಲಿ ಏನು ತೀರ್ಪು ಬರುತ್ತೆ ನೋಡಬೇಕು ಎಂದು ದರ್ಶನ್ ಫ್ಯಾನ್ಸ್ ರಮ್ಯ ಅವರಿಗೆ ಕೆಟ್ಟ ಸಂದೇಶ ಕಳುಹಿಸಿರುವ ವಿಚಾರಕ್ಕೆ ತಾಲೂಕಿನ ದುದ್ದ ಗ್ರಾಮದಲ್ಲಿ ಪ್ರತಿಕ್ರಿಯಿಸಿದರು.
ಅಭಿಮಾನಿಗಳಿಗೆ ಹೇಳಲು ದರ್ಶನ್ ಜೊತೆ ಮಾತನಾಡುತ್ತೇನೆ. ದರ್ಶನ್ ಅವರು ತಮ್ಮ ಫ್ಯಾನ್ಸ್‌ಗಳಿಗೆ ಸಲಹೆ ಕೊಟ್ಟರೆ ಒಳ್ಳೆಯದು. ಕೆಟ್ಟ ಕಮೆಂಟ್‌ಗಳನ್ನು ಮಾಡೋದು ಬೇಡ, ದರ್ಶನ್ ಪ್ಯಾನ್ಸ್ ಏನೂ ಮಾಡುವುದು ಬೇಡ ಎಂದು ಅವರೇ ತಿಳಿ ಹೇಳಬೇಕು ಎಂದರು.ಸಲಹೆ ಕೊಡಲಿಲ್ಲ ಎಂದರೆ ಹೀಗೆಯೇ ಜಿದ್ದಾ ಜಿದ್ದು ನಡೆಯುತ್ತದೆ. ನ್ಯಾಯಾಲಯದಲ್ಲಿ ಏನು ಬರುತ್ತೆ ನೋಡೋಣ. ಎಲ್ಲಾ ವಿಚಾರದಲ್ಲೂ ನೆಗೆಟಿವ್- ಪಾಸಿಟಿವ್ ಇರುತ್ತೆ. ಸಾಮಾಜಿಕ ಜಾಲತಾಣವನ್ನು ಪಾಸಿಟಿವ್ ಆಗಿ ಬಳಕೆ ಮಾಡಿಕೊಳ್ಳಬೇಕು. ಈ ಬಗ್ಗೆ ಜನರಿಗೂ ತಿಳುವಳಿಕೆ ಮೂಡಿಸುವ ಅವಶ್ಯಕತೆ ಇದೆ. ಸರ್ಕಾರವೂ ಸಹ ಎಫೆಕ್ಟಿವ್ ಆಗಿ ಬಳಕೆ ಮಾಡುವುದರ ಬಗ್ಗೆ ಹೇಳಬೇಕು ಎಂದು ಪ್ರತಿಪಾದಿಸಿದರು.