ಸಾರಾಂಶ
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸುರೇಶ ಚನ್ನಶೆಟ್ಟಿ ನೇತೃತ್ವದಲ್ಲಿ ಸ್ವಾಗತ ಸಮಿತಿ, ಜಿಲ್ಲಾ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಪದಾಧಿಕಾರಿಗಳಿಂದ ಆಹ್ವಾನ, ಔರಾದ್‌ನಲ್ಲಿ ನಡೆಯಲಿರುವ ಸಮ್ಮೇಳನ
ಕನ್ನಡಪ್ರಭ ವಾರ್ತೆ ಔರಾದ್
ಬೀದರ್ ನಗರದ ರಂಗಮಂದಿರದಲ್ಲಿ ಡಿ.30ರಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಮ್ಮಿಕೊಂಡ ಜಿಲ್ಲಾ ಪ್ರಥಮ ದಾಸ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಬಿ.ಎಂ ಅಮರವಾಡಿಯವರನ್ನು ಸ್ವಾಗತ ಸಮಿತಿ, ಜಿಲ್ಲಾ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಪದಾಧಿಕಾರಿಗಳು ಆಮಂತ್ರಣ ನೀಡಿ ಸಮ್ಮೇಳನಕ್ಕೆ ಆಹ್ವಾನಿಸಿದರು.ಈ ಸಂದರ್ಭದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸುರೇಶ ಚನ್ನಶೆಟ್ಟಿ ಮಾತನಾಡಿ, ಬೀದರ್ ಜಿಲ್ಲೆಯಲ್ಲಿ ದಾಸ ಸಾಹಿತ್ಯದ ಬಗ್ಗೆ ಚಿಂತನೆಗಳು ಶುರುವಾಗುವಂತೆ ಮಾಡಿರುವ ಅಮರವಾಡಿ, ದಾಸ ಸಾಹಿತ್ಯ ಉಳಿಸಿ, ಬೆಳೆಸುತ್ತ ಸಾಹಿತ್ಯದ ಪ್ರಸಾರಕ್ಕಾಗಿ ಕಳೆದ ಒಂದೂವರೆ ದಶಕದಿಂದ ರಾಜ್ಯಮಟ್ಟದ ದಾಸ ಸಾಹಿತ್ಯ ಪರಿಷತ್ತು ಸಂಸ್ಥೆ ಸ್ಥಾಪಿಸಿ ನಿರಂತರವಾಗಿ ಶ್ರಮಿಸುತ್ತಿದ್ದು, ರಾಜ್ಯಮಟ್ಟದ 2 ದಾಸ ಸಾಹಿತ್ಯ ಸಮ್ಮೇಳನಗಳು ಆಯೋಜಿಸಿ ಬೀದರ್‌ನಲ್ಲಿ ದಾಸ ಸಾಹಿತ್ಯದ ಪ್ರಸಾರ ಮತ್ತು ಚಿಂತನೆಗಳಿಗೆ ತೀವ್ರ ಸ್ವರೂಪ ನೀಡಿ ಎಲ್ಲೆಡೆ ದಾಸ ಸಾಹಿತ್ಯ ಕೊಂಡೊಯ್ಯುತ್ತಿದ್ದಾರೆ ಎಂದರು.
ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಪಂಡಿತರಾವ ಚಿದ್ರಿ ಮಾತನಾಡಿ, ದಾಸ ಸಾಹಿತ್ಯ ಪ್ರಚಾರದ ಜೊತೆಗೆ ಗಡಿ ಪ್ರದೇಶದ ಜನರಲ್ಲಿ ಕನ್ನಡ ಪ್ರೇಮ, ಸಾಮಾಜಿಕ ಚಿಂತನೆ, ಶೈಕ್ಷಣಿಕ ಜಾಗೃತಿ ಮೂಡಿಸುವ ಹಲವು ಕೆಲಸಗಳು ಅಮರವಾಡಿ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿಯಾಗಿದೆ ಎಂದರು.ಬಸವ ಕೇಂದ್ರದ ಜಿಲ್ಲಾಧ್ಯಕ್ಷ ಶರಣಪ್ಪ ಮಿಠಾರೆ, ಮಾಳಪ್ಪ ಅಡಸಾರೆ, ಗುರುನಾಥ ದೇಶಮುಖ, ಪಂಡರಿ ಆಡೆ, ಶಾಲಿವಾನ ಉದಗಿರೆ ಸೇರಿದಂತೆ ಇನ್ನಿತರರು ಮಾತನಾಡಿದರು.
ಕಸಾಪ ಕೋಶಾಧ್ಯಕ್ಷ ಶಿವಶಂಕರ ಟೋಕರೆ, ಪೀರಪ್ಪ ಔರಾದೆ, ಸಿದ್ದಾರೂಢ ಭಾಲ್ಕೆ, ಸಂಜು ಅಲ್ಲೂರೆ, ಜಗನ್ನಾಥ ಮೂಲಗೆ, ಅಮೃತರಾವ ಬಿರಾದಾರ, ರೇವಣಯ್ಯ ಮಠ, ಕಲ್ಯಾಣರಾವ ಶೆಂಬೆಳ್ಳೆ, ಬಸವರಾಜ ಮಸ್ಕಲೆ, ಜಗನ್ನಾಥ ದೇಶಮುಖ, ಅಂಬಾದಾಸ ನಳಗೆ, ಸಂದೀಪ ಪಾಟೀಲ್, ಚಂದ್ರಕಾಂತ ಘುಳೆ, ಪ್ರಕಾಶ ಅಲಮಾಜೆ, ಮಾದಪ್ಪ ಕೋಟೆ, ರವೀಂದ್ರ ಮುಕ್ತೆದಾರ್, ಸಂತೋಷ ಚಾಂಡೆಶ್ವರೆ, ಧನರಾಜ ಮಾನೆ, ದೇವಿದಾಸ ಮಡಿವಾಳ, ದಶರಥ ವಾಘಮಾರೆ ಸೇರಿದಂತೆ ಇನ್ನಿತರರಿದ್ದರು.