ಹರಿಪಾದ ಸೇರಿರುವ ಪದ್ಮವಿಭೂಷಣ ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಪುಣ್ಯ ತಿಥಿಯ ಸಲುವಾಗಿ ಡಿ.೨೯ರಂದು ನಡೆಯರುವ ಕಾರ್ಯಕ್ರಮದ ಪ್ರಯುಕ್ತ ಕಲ್ಕೂರ ಪ್ರತಿಷ್ಠಾನ ವಿಶ್ವೇಶತೀರ್ಥ ಶ್ರೀಪಾದರ ಬಗ್ಗೆ ಪ್ರಬಂಧಸ್ಪರ್ಧೆ ಏರ್ಪಡಿಸಲಾಗಿದ್ದು, ವಿದ್ಯಾರ್ಥಿಗಳಿಂದ ಪ್ರಬಂಧ ಆಹ್ವಾನಿಸಲಾಗಿದೆ.
ಮಂಗಳೂರು: ಹರಿಪಾದ ಸೇರಿರುವ ಪದ್ಮವಿಭೂಷಣ ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಪುಣ್ಯ ತಿಥಿಯ ಸಲುವಾಗಿ ಡಿ.೨೯ರಂದು ನಡೆಯರುವ ಕಾರ್ಯಕ್ರಮದ ಪ್ರಯುಕ್ತ ಕಲ್ಕೂರ ಪ್ರತಿಷ್ಠಾನ ವಿಶ್ವೇಶತೀರ್ಥ ಶ್ರೀಪಾದರ ಬಗ್ಗೆ ಪ್ರಬಂಧಸ್ಪರ್ಧೆ ಏರ್ಪಡಿಸಲಾಗಿದ್ದು, ವಿದ್ಯಾರ್ಥಿಗಳಿಂದ ಪ್ರಬಂಧ ಆಹ್ವಾನಿಸಲಾಗಿದೆ.ಕಾಲೇಜು ಹಾಗೂ ಮುಕ್ತ ಎಂಬ ಎರಡು ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. ಕಾಲೇಜು ವಿಭಾಗಕ್ಕೆ ‘ಪದ್ಮವಿಭೂಷಣ ವಿಶ್ವೇಶತೀರ್ಥರು ನಾನು ಕಂಡಂತೆ’ ಎಂಬ ವಿಷಯದ ಬಗ್ಗೆ ಮತ್ತು ಮುಕ್ತ ವಿಭಾಗಕ್ಕೆ ‘ಪದ್ಮವಿಭೂಷಣ ವಿಶ್ವೇಶತೀರ್ಥ ಶ್ರೀಪಾದರು ವಿಶ್ವಮಾನ್ಯರು: ಅವಲೋಕನ, -ಅನುಸಂಧಾನ’ ವಿಷಯದ ಬಗ್ಗೆ ಪ್ರಬಂಧವನ್ನು ಮೂರು ಪುಟಗಳಿಗೆ ಮೀರದಂತೆ ಬರೆದು, ಡಿ.೨೫ರ ಒಳಗಾಗಿ, ಸ್ವ-ವಿಳಾಸ ಮತ್ತು ಸಂಪರ್ಕ ದೂರವಾಣಿ ಸಂಖ್ಯೆಯೊಂದಿಗೆ, ಜಿ.ಕೆ.ಭಟ್ ಸೇರಾಜೆ (ಸಂಚಾಲಕರು) ಕಲ್ಕೂರ ಪ್ರತಿಷ್ಠಾನ, ಶ್ರೀಕೃಷ್ಣ ಸಂಕೀರ್ಣ, ಮಹಾತ್ಮ ಗಾಂಧಿ ರಸ್ತೆ, ಕೊಡಿಯಾಲ್ಬೈಲ್, ಮಂಗಳೂರು ಈ ವಿಳಾಸಕ್ಕೆ ಕಳುಹಿಸಿಕೊಡಬೇಕು ಎಂದು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್.ಪ್ರದೀಪ ಕುಮಾರ ಕಲ್ಕೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
-----------