ಮಂಗಳೂರಿನ ಸಂಘನಿಕೇತನದಲ್ಲಿ ಕೇಶವ ಸ್ಮೃತಿ ಸಂವರ್ಧನ ಟ್ರಸ್ಟ್ ಆಶ್ರಯದಲ್ಲಿ ನಡೆಯುವ ೭೯ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಆಮಂತ್ರಣವನ್ನು ಮಂಗಳೂರಿನ ಕಥೋಲಿಕ್ ಧರ್ಮಾಧ್ಯಕ್ಷ ರೆ.ಫಾ.ಡಾ. ಪೀಟರ್ ಪಾವ್ಲ್ ಸಲ್ಡಾನ ಇವರಿಗೆ ಗಣೇಶೋತ್ಸವ ಸಮಿತಿಯ ಪ್ರಮುಖರು ಭೇಟಿಯಾಗಿ ನೀಡಿದರು.

ಮಂಗಳೂರು: ಮಂಗಳೂರಿನ ಸಂಘನಿಕೇತನದಲ್ಲಿ ಕೇಶವ ಸ್ಮೃತಿ ಸಂವರ್ಧನ ಟ್ರಸ್ಟ್ ಆಶ್ರಯದಲ್ಲಿ ನಡೆಯುವ ೭೯ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಆಮಂತ್ರಣವನ್ನು ಮಂಗಳೂರಿನ ಕಥೋಲಿಕ್ ಧರ್ಮಾಧ್ಯಕ್ಷ ರೆ.ಫಾ.ಡಾ. ಪೀಟರ್ ಪಾವ್ಲ್ ಸಲ್ಡಾನ ಇವರಿಗೆ ಗಣೇಶೋತ್ಸವ ಸಮಿತಿಯ ಪ್ರಮುಖರು ಭೇಟಿಯಾಗಿ ನೀಡಿದರು. ಕೇಶವ ಸ್ಮೃತಿ ಸಂವರ್ಧನ ಟ್ರಸ್ಟ್ ಇದರ ಪ್ರಧಾನ ಕಾರ್ಯದರ್ಶಿ ಗಜಾನನ ಪೈ ಇವರು ಹೂಗುಚ್ಛ ನೀಡಿ, ಧರ್ಮಾಧ್ಯಕ್ಷರನ್ನು ಗೌರವಿಸಿದರು. ಭ್ರಾತೃತ್ವದ ಸಂಕೇತವಾಗಿ ಧರ್ಮಾಧ್ಯಕ್ಷರಿಗೆ ಪೂರ್ಣಿಮಾ ಶೆಣೈ ರಾಖಿ ಕಟ್ಟಿ ಸಿಹಿತಿಂಡಿ ನೀಡಿದರು. ಧರ್ಮಾಧ್ಯಕ್ಷರು ಹಿಂದೂ ಸಮಾಜಕ್ಕೆ ಗಣೇಶೋತ್ಸವದ ಶುಭಾಶಯಗಳನ್ನು ಸಲ್ಲಿಸಿದರು.ಸಮಿತಿಯ ಪ್ರಮುಖರಾದ ತರುಣ್ ಕೆ ಥಾಖರ್, ನಂದನ್ ಮಲ್ಯ, ಅಭಿಷೇಕ್ ಭಂಡಾರಿ, ದೇವರಾಯ ಶೆಣೈ, ರಮೇಶ್ ಪಟೇಲ್ ಹಾಗೂ ರಾಷ್ಟ್ರೀಯವಾದಿ ಕ್ರೈಸ್ತರ ವೇದಿಕೆಯ ಸ್ಥಾಪಕ ಫ್ರ್ಯಾಂಕ್ಲಿನ್ ಮೊಂತೆರೊ ಇದ್ದರು.