ಮೆಣಸು ಬೆಳೆಗಾರರ ನೆರವಿಗೆ ಐಪಿಎಲ್: ಸುನೀಲ್ ತಾಮಗಾಳೆ

| Published : Feb 25 2025, 12:45 AM IST

ಸಾರಾಂಶ

ಬಾಳೆಹೊನ್ನೂರು, ಕೃಷಿಯಲ್ಲಿ ವೈಜ್ಞಾನಿಕ ವಿಧಾನ ಅಳವಡಿಸಿಕೊಳ್ಳುವ ಮೂಲಕ ಹೆಚ್ಚು ಉತ್ಪಾದನೆ ಗಳಿಸುವುದನ್ನು ಐಪಿಎಲ್ ತರಬೇತಿ ಕಾರ್ಯಕ್ರಮದಲ್ಲಿ ತಿಳಿಸಿಕೊಡಲಾಗುತ್ತದೆ ಐಪಿಎಲ್ ಸಂಸ್ಥೆ ವೈಜ್ಞಾನಿಕ ನಿರ್ದೇಶಕ ಸುನೀಲ್ ತಾಮಗಾಳೆ ತಿಳಿಸಿದರು.

ಕಾಳು ಮೆಣಸು-ಕಾಫಿ ಬೆಳೆಗೆ ತಾಂತ್ರಿಕ ನೆರವು, ಮಾರುಕಟ್ಟೆ ಮಾಹಿತಿ

ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ಕೃಷಿಯಲ್ಲಿ ವೈಜ್ಞಾನಿಕ ವಿಧಾನ ಅಳವಡಿಸಿಕೊಳ್ಳುವ ಮೂಲಕ ಹೆಚ್ಚು ಉತ್ಪಾದನೆ ಗಳಿಸುವುದನ್ನು ಐಪಿಎಲ್ ತರಬೇತಿ ಕಾರ್ಯಕ್ರಮದಲ್ಲಿ ತಿಳಿಸಿಕೊಡಲಾಗುತ್ತದೆ ಐಪಿಎಲ್ ಸಂಸ್ಥೆ ವೈಜ್ಞಾನಿಕ ನಿರ್ದೇಶಕ ಸುನೀಲ್ ತಾಮಗಾಳೆ ತಿಳಿಸಿದರು.

ಕಾಳು ಮೆಣಸು-ಕಾಫಿ ಬೆಳೆಗೆ ತಾಂತ್ರಿಕ ನೆರವು ಮತ್ತು ಮಾರುಕಟ್ಟೆ ಕುರಿತು ರೈತರಿಗೆ ಮಾಹಿತಿ ನೀಡಲು ಅಸ್ಥಿತ್ವಕ್ಕೆ ಬಂದಿರುವ ಇಂಡಿಯನ್ ಪೆಪ್ಪರ್ ಲೀಗ್–2025(ಐಪಿಎಲ್) ಉದ್ಘಾಟನೆ, ಮೊದಲ ತರಬೇತಿ ಕಾರ್ಯಗಾರದಲ್ಲಿ ಮಾತನಾಡಿ, ವಿಜ್ಞಾನಿಗಳು, ಪ್ರಗತಿಪರ ಬೆಳೆಗಾರರ ಮೂಲಕ ಮೆಣಸು ಬೆಳೆವ ರೈತರಿಗೆ ಮಾಹಿತಿ ನೀಡುವ ಮೊದಲ ಕಾರ್ಯಾಗಾರದಲ್ಲಿ 65 ರೈತರು ನೋಂದಾಯಿಸಿಕೊಂಡಿದ್ದರು. ಶೃಂಗೇರಿ, ಕೊಪ್ಪ ಭಾಗದಲ್ಲಿ ಪ್ರಗತಿಪರ ಕೃಷಿಕ ಸತ್ಯಪ್ರಕಾಶ್ ಮಾರ್ಗದರ್ಶನದಲ್ಲಿ ಆರಂಭವಾದ ಸಂಘಟನೆಯಲ್ಲಿ ಕಾಳು ಮೆಣಸಿನ ಯಶಸ್ವಿ ಕೃಷಿಕರು ಇರಲಿದ್ದಾರೆ ಎಂದು ಹೇಳಿದರು.

ಪತ್ರಿಕಾ ಸಂಪಾದಕ ರವೀಂದ್ರ ಭಟ್ಟ ಮಾತನಾಡಿ, ರೈತರ ಬೆಳೆಗಳ ಮಾರುಕಟ್ಟೆ ಜವಾಬ್ದಾರಿ ಸರ್ಕಾರ ವಹಿಸಿಕೊಳ್ಳಬೇಕು. ನಮ್ಮ ಸಮಸ್ಯೆಗಳಿಗೆ ನಾವೇ ಪರಿಹಾರ ಕಂಡುಕೊಳ್ಳಲು ಸಂಘಟನೆ ಹುಟ್ಟಿಕೊಂಡಿರುವುದು ಸ್ವಾಗತಾರ್ಹ. ರೈತರ ಸ್ಥಿತಿ ಕಷ್ಟವಾಗಿದ್ದು,ಉತ್ತಮ ಮಾರುಕಟ್ಟೆ ಇಲ್ಲದೆ ದುಡಿದ ಶ್ರಮ ವ್ಯರ್ಥವಾಗುತ್ತಿದೆ. ವರ್ಷಗಟ್ಟಲೆ ಬಾಳಿಕೆ ಬರುವ ಕಾಳುಮೆಣಸು, ಕಾಫಿ ಬೆಳೆಗಳನ್ನು ಸಂರಕ್ಷಿಸಿ ಮಾರುಕಟ್ಟೆಗೆ ವ್ಯವಸ್ಥೆ ಮಾಡದಿರುವುದು ದೌರ್ಭಾಗ್ಯ ಎಂದರು.ಐಪಿಎಲ್ ಅಧ್ಯಕ್ಷ ಎಚ್.ವಿ.ಪ್ರದೀಪ್ ಕುಮಾರ್, ಉಪಾಧ್ಯಕ್ಷ ಚಂದ್ರಶೇಖರ್ ಹೆಗ್ಡೆ ಕಲ್ಕುಳಿ, ಇಂದಿರಮ್ಮ ಎಸ್ಟೇಟ್ ಮಾಲೀಕ ಪ್ರದೀಪ್ ಜಯಪುರ, ಕೆ.ಎಸ್.ಸತ್ಯಪ್ರಕಾಶ್ ಕೆಳಕೊಡಿಗೆ, ಕಾರ್ಯದರ್ಶಿ ಕೆ.ಪಿ.ವಿಶ್ವನಾಥ್, ಖಜಾಂಚಿ ಎಚ್.ಎಸ್. ಕುಮಾರಸ್ವಾಮಿ, ನಿರ್ದೇಶಕ ಎಸ್.ಆರ್.ಆದರ್ಶ, ಶಿರಾಂಕ್ ಹೆಗ್ಡೆ, ಎಚ್.ಎಂ.ಚನ್ನಕೇಶವ, ಎಚ್.ಜಿ.ಭರತ್, ಮಧುಕುಮಾರ್, ಪ್ರದೀಪ್, ಜಗದೀಶ್ ಕಣದಮನೆ ಪಾಲ್ಗೊಂಡಿದ್ದರು.೨೪ಬಿಹೆಚ್‌ಆರ್ ೧:

ಬಾಳೆಹೊನ್ನೂರು ಸಮೀಪದ ಜಯಪುರ ಗುತ್ತಿಖಾನ್ ಇಂದಿರಮ್ಮ ಎಸ್ಟೇಟಿನಲ್ಲಿ ನಡೆದ ತರಬೇತಿ ಕಾರ್ಯಾದಲ್ಲಿ ಭಾಗವಹಿಸಿದ್ದ ಬೆಳೆಗಾರರು.