ಸರ್‌ ಎಂವಿಯವರಿಂದ ಜನಹಿತ, ಲೋಕಹಿತ

| Published : Sep 16 2025, 01:00 AM IST

ಸಾರಾಂಶ

ಸಮೃದ್ಧ ಭಾರತದ ಕನಸುಗಾರರಾದ, ಅಭಿವೃದ್ಧಿಯ ಹರಿಕಾರರಾದ, ರೈತರ ಪಾಲಿನ ಭಾಗ್ಯದೇವತೆ ಮತ್ತು ಅತ್ಯಂತ ಸರಳ ಹಾಗೂ ಮೇರು ವ್ಯಕ್ತಿತ್ವದ ಮೋಕ್ಷಗುಂಡಂ ವಿಶ್ವೇಶ್ವರಾಯ

ಕನ್ನಡಪ್ರಭ ವಾರ್ತೆ ಮೈಸೂರುಸರ್ ಎಂ. ವಿಶ್ವೇಶ್ವರಯ್ಯ ಜನ್ಮ ದಿನವನ್ನು ವಿಜಯವಿಠಲ ಕಾಲೇಜಿನಲ್ಲಿ ಆಚರಿಸಿತು.ಕಾಲೇಜಿನ ಪ್ರಾಂಶುಪಾಲ ಎಚ್. ಸತ್ಯಪ್ರಸಾದ್ ಮಾತನಾಡಿ, ಸೆ. 15 ಭಾರತರತ್ನ ಸರ್ ಎಂ.ವಿ. ಅವರ ಜನ್ಮದಿನ. ಈ ದಿನವನ್ನು ದೇಶಾದ್ಯಂತ ಎಂಜಿನಿಯರ್ ದಿನವನ್ನಾಗಿ ಆಚರಿಸಲಾಗುತ್ತಿದೆ. ಇದು ದೇಶ ಅವರಿಗೆ ಸಲ್ಲಿಸುತ್ತಿರುವ ಒಂದು ಮಹಾಗೌರವವಾಗಿದೆ. ಸಮೃದ್ಧ ಭಾರತದ ಕನಸುಗಾರರಾದ, ಅಭಿವೃದ್ಧಿಯ ಹರಿಕಾರರಾದ, ರೈತರ ಪಾಲಿನ ಭಾಗ್ಯದೇವತೆ ಮತ್ತು ಅತ್ಯಂತ ಸರಳ ಹಾಗೂ ಮೇರು ವ್ಯಕ್ತಿತ್ವದ ಮೋಕ್ಷಗುಂಡಂ ವಿಶ್ವೇಶ್ವರಾಯರವರ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಬೇಕು.ಸರ್ ಎಂ.ವಿ. ಅವರ ಸಾಧನೆಗಳು ವಿಶ್ವದಲ್ಲೇ ಗೌರವಾನ್ವಿತವಾದದ್ದು. ಜನಹಿತ, ಲೋಕಹಿತಕ್ಕಾಗಿ ಅವರು ತಮ್ಮ ಬದುಕನ್ನು ಮುಡುಪಾಗಿಟ್ಟಿದ್ದರು. ಕಷ್ಟದಲ್ಲೇ ಬದುಕನ್ನು ಕಟ್ಟಿಕೊಂಡ ಸರ್ ಎಂ.ವಿ. ಯವರು ಸುಸಂಸ್ಕೃತರೂ, ಸುಶಿಕ್ಷಿತರೂ, ನಿಷ್ಠಾವಂತರೂ, ಸಮಯಪಾಲಕರೂ ಆಗಿದ್ದು, ಶಿಸ್ತಿನ ಜೀವನವನ್ನು ನಡೆಸಿಕೊಂಡು ಬಂದಿದ್ದರು. ಅವರು ವಿದ್ಯಾರ್ಜನೆಗಾಗಿ ಶ್ರಮಿಸಿದ್ದನ್ನು ನಾವು ಮರೆಯುವಂತಿಲ್ಲ. ಸರ್.ಎಂ.ವಿ. ಅವರು ಕರ್ಮಯೋಗಿ ಮತ್ತು ಸಾವಿರಾರು ಜನರಿಗೆ ಉದ್ಯೋಗದಾತರಾಗಿದ್ದರು. ಅವರ ವ್ಯಕ್ತಿತ್ವ ಮತ್ತು ಜೀವನಶೈಲಿಯನ್ನು ವಿದ್ಯಾರ್ಥಿಗಳು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡಲ್ಲಿ ಶಕ್ತಿಶಾಲಿ ಭಾರತದ ನಿರ್ಮಾಣ ಸಾಧ್ಯ. ನಾವು ಮಾಡುವ ಪ್ರತಿ ಕೆಲಸದಲ್ಲಿಯೂ ಯಶಸ್ಸು ಕಾಣಬೇಕೆಂದರೆ ನಾವು ಮಾನಸಿಕವಾಗಿ ಮತ್ತು ದೈಹಿಕವಾಗಿ ಸದಾ ಕ್ರಿಯಾಶೀಲರಾಗಿರಬೇಕು. ಕೆಲಸದಲ್ಲಿ ಶ್ರದ್ಧೆ, ಆಸಕ್ತಿ, ನಿಖರತೆ ಮತ್ತು ಸಮಯಪ್ರಜ್ಞೆ ಇದ್ದಾಗ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯ. ವಿಶ್ವೇಶ್ವರಾಯರವರ ಜೀವನೋತ್ಸಾಹ, ಕರ್ತವ್ಯಪ್ರಜ್ಞೆ, ಇಚ್ಛಾಶಕ್ತಿ, ದೃಢತೆ, ಸರ್ವರಿಗೂ ಅನುಕರಣೀಯ. ವಿದ್ಯಾರ್ಥಿಗಳು ಅವರ ಆದರ್ಶಗಳನ್ನು ಮೈಗೂಡಿಸಿಕೊಂಡು ನಿಷ್ಠ್ಠೆ, ಶಿಸ್ತು, ಸಂಯಮ, ದಕ್ಷತೆಯಿಂದ ಕೆಲಸವನ್ನು ನಿರ್ವಹಿಸಬೇಕು ಎಂದು ಹೇಳಿದರು.ಉಪನ್ಯಾಸಕರಾದ ಮಯೂರಲಕ್ಷ್ಮಿ, ಅನ್ನಪೂರ್ಣ ರಾವ್, ಸೌಮ್ಯ ಇದ್ದರು.