ದುಷ್ಕೃತ್ಯ ನಡೆಸಿದರೆ ನಿರ್ದಾಕ್ಷಿಣ್ಯ ಕ್ರಮ: ಕೊಪ್ಪಳ ಎಸ್ಪಿ ವಂಟಿಗೋಡಿ

| Published : Dec 22 2023, 01:30 AM IST

ದುಷ್ಕೃತ್ಯ ನಡೆಸಿದರೆ ನಿರ್ದಾಕ್ಷಿಣ್ಯ ಕ್ರಮ: ಕೊಪ್ಪಳ ಎಸ್ಪಿ ವಂಟಿಗೋಡಿ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರತಿ ವರ್ಷದಂತೆ ಈ ವರ್ಷವೂ ಹನುಮಮಾಲಾ ವಿಸರ್ಜನೆ ಅಂಗವಾಗಿ ಡಿ.22ರಿಂದ 24ರವರೆಗೆ ಹನುಮಮಾಲಾ ವಿಸರ್ಜನಾ ಕಾರ್ಯಕ್ರಮ ಜರುಗಲಿದೆ. ಡಿ.22ರಂದು ಗಂಗಾವತಿ ನಗರದಲ್ಲಿ ಹನುಮಮಾಲಾ ಸಂಕೀರ್ತನೆ ಯಾತ್ರೆಯನ್ನು ಬೆಳಿಗ್ಗೆ 10 ಗಂಟೆಗೆ ಗಂಗಾವತಿ ನಗರದ ಎಪಿಎಂಸಿ ಸಮುದಾಯ ಭವನದಿಂದ ಆರಂಭವಾಗಿ ಸಿಬಿಎಸ್ ಸರ್ಕಲ್, ಮಹಾವೀರ ಸರ್ಕಲ್, ಗಾಂಧಿ ಸರ್ಕಲ್, ಬಸವಣ್ಣ ಸರ್ಕಲ್ ಮುಖಾಂತರ ಕೊಟ್ಟೂರೇಶ್ವರ ದೇವಸ್ಥಾನಕ್ಕೆ ತೆರಳಿ ಮೆರವಣಿಗೆ ಮುಕ್ತಾಯಗೊಳ್ಳುತ್ತದೆ.

ಗಂಗಾವತಿ: ನಗರದಲ್ಲಿ ಹನುಮಮಾಲಾ ವಿಸರ್ಜನೆ ಅಂಗವಾಗಿ ಡಿ.22ರಂದು ಹನುಮಮಾಲಾ ಸಂಕೀರ್ತನೆ ಯಾತ್ರೆ ನಡೆಯಲಿದೆ. ಈ ಸಂದರ್ಭದಲ್ಲಿ ಯಾರಾದರು ದುಷ್ಕೃತ್ಯ ನಡೆಸಿದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್ಪಿ ಯಶೋದಾ ವಂಟಿಗೋಡಿ ಹೇಳಿದರು.

ಗುರುವಾರ ಡಿವೈಎಸ್ಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿ ವರ್ಷದಂತೆ ಈ ವರ್ಷವೂ ಹನುಮಮಾಲಾ ವಿಸರ್ಜನೆ ಅಂಗವಾಗಿ ಡಿ.22ರಿಂದ 24ರವರೆಗೆ ಹನುಮಮಾಲಾ ವಿಸರ್ಜನಾ ಕಾರ್ಯಕ್ರಮ ಜರುಗಲಿದೆ. ಡಿ.22ರಂದು ಗಂಗಾವತಿ ನಗರದಲ್ಲಿ ಹನುಮಮಾಲಾ ಸಂಕೀರ್ತನೆ ಯಾತ್ರೆಯನ್ನು ಬೆಳಿಗ್ಗೆ 10 ಗಂಟೆಗೆ ಗಂಗಾವತಿ ನಗರದ ಎಪಿಎಂಸಿ ಸಮುದಾಯ ಭವನದಿಂದ ಆರಂಭವಾಗಿ ಸಿಬಿಎಸ್ ಸರ್ಕಲ್, ಮಹಾವೀರ ಸರ್ಕಲ್, ಗಾಂಧಿ ಸರ್ಕಲ್, ಬಸವಣ್ಣ ಸರ್ಕಲ್ ಮುಖಾಂತರ ಕೊಟ್ಟೂರೇಶ್ವರ ದೇವಸ್ಥಾನಕ್ಕೆ ತೆರಳಿ ಮೆರವಣಿಗೆ ಮುಕ್ತಾಯಗೊಳ್ಳುತ್ತದೆ ಎಂದು ತಿಳಿಸಿದರು.

ಮೆರವಣಿಗೆ ಹೋಗುವ ಎಲ್ಲ ವೃತ್ತಗಳಲ್ಲಿ ಮತ್ತು ನಗರದ ಮುಖ್ಯ ಸ್ಥಳಗಳಲ್ಲಿ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಬಂದೋಬಸ್ತ್‌ಗೆ ನೇಮಕ ಮಾಡಲಾಗಿದೆ. ನಗರದ ಸೂಕ್ಷ್ಮ ಪ್ರದೇಶಗಳಲ್ಲಿ ಯೋಗ್ಯ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಿದೆ.ಹನುಮಮಾಲಾ ಸಂಕೀರ್ತನೆ ಯಾತ್ರೆ, ಹನುಮಮಾಲಾ ವಿಸರ್ಜನೆ ಪ್ರಯುಕ್ತ ಗಂಗಾವತಿ ನಗರ ಹಾಗೂ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಕಟ್ಟುನಿಟ್ಟಿನ ಕ್ರಮ ಕೈಗೊಂಡು ಪ್ರಮುಖ ಸ್ಥಳಗಳಲ್ಲಿ 14 ಚೆಕ್ ಪೋಸ್ಟ್‌ಗಳನ್ನು ತೆರೆದು ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ. ಡಿ.22ರಿಂದ 24ರವರೆಗೆ ದಿನದ 24 ಗಂಟೆಯೂ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಬಿಗಿ ಭದ್ರತೆಗಾಗಿ ನಿಯೋಜಿಸಿಲಾಗಿದೆ ಎಂದರು.ಎಸ್ಪಿ, 2 ಡಿಎಸ್ಪಿ, 11 ಸಿಪಿಐ, ಪಿಎಸ್ಐ 25, ಎಎಸ್ಐ 46, 6 ಡಿಆರ್, 5 ಸಿಆರ್‌ಪಿ, 494, ಹೋಂ ಗಾರ್ಡ್‌ 256 ಸಿಬ್ಬಂದಿ ನಿಯೋಜಿಸಲಾಗಿದೆ ಎಂದರು.ಈ ಸಂದರ್ಭದಲ್ಲಿ ಡಿವೈಎಸ್‌ಪಿಗಳಾದ ಶರಣಪ್ಪ ಸುಬೇದಾರ, ಡಿವೈಎಸ್‌ಪಿ ಸಿದ್ದಲಿಂಗಪ್ಪಗೌಡ ಪಾಟೀಲ್, ಗಂಗಾವತಿ ನಗರ ಠಾಣೆ ಪಿಐ ಪ್ರಕಾಶ ಮಾಳಿ, ಗ್ರಾಮೀಣ ಠಾಣೆ ಸಿಪಿಐ ಸೋಮಶೇಖರ್ ಜುಟ್ಟಲ್ ಉಪಸ್ಥಿತರಿದ್ದರು.