ನೀರಾವರಿ ಉಪವಿಭಾಗದ ಎಂಜಿನಿಯರ್‌ಗಳು ಲೋಕಾಯುಕ್ತ ಬಲೆಗೆ

| Published : Dec 20 2023, 01:15 AM IST

ನೀರಾವರಿ ಉಪವಿಭಾಗದ ಎಂಜಿನಿಯರ್‌ಗಳು ಲೋಕಾಯುಕ್ತ ಬಲೆಗೆ
Share this Article
  • FB
  • TW
  • Linkdin
  • Email

ಸಾರಾಂಶ

ಕಾಮಗಾರಿಯ ಬಿಲ್ ಪಾಸ್ ಮಾಡಲು ಲಂಚ ಪಡೆಯುತ್ತಿದ್ದ ಶಿಗ್ಗಾಂವಿ ಏತ ನೀರಾವರಿ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಹಾಗೂ ಕಿರಿಯ ಎಂಜಿನಿಯರ್ ಮಂಗಳವಾರ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.ಶಿಗ್ಗಾಂವಿ ಏತ ನೀರಾವರಿ ಉಪವಿಭಾಗ-1 ಮತ್ತು 2, ಧಾರವಾಡ ಕಚೇರಿಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಮಂಜುನಾಥ ಬಿ. ಹಾಗೂ ಕಿರಿಯ ಎಂಜಿನಿಯರ್ ಪ್ರಕಾಶ ಹೊಸಮನಿ ಅವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಹಾವೇರಿ

ಕಾಮಗಾರಿಯ ಬಿಲ್ ಪಾಸ್ ಮಾಡಲು ಲಂಚ ಪಡೆಯುತ್ತಿದ್ದ ಶಿಗ್ಗಾಂವಿ ಏತ ನೀರಾವರಿ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಹಾಗೂ ಕಿರಿಯ ಎಂಜಿನಿಯರ್ ಮಂಗಳವಾರ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಶಿಗ್ಗಾಂವಿ ಏತ ನೀರಾವರಿ ಉಪವಿಭಾಗ-1 ಮತ್ತು 2, ಧಾರವಾಡ ಕಚೇರಿಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಮಂಜುನಾಥ ಬಿ. ಹಾಗೂ ಕಿರಿಯ ಎಂಜಿನಿಯರ್ ಪ್ರಕಾಶ ಹೊಸಮನಿ ಅವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.

ಜಿಲ್ಲೆಯ ಹೊಟ್ಟೂರು-ಬಿಸನಳ್ಳಿ, ಶಡಗರವಳ್ಳಿ-ಸಿದ್ದರಾಮೇಶ್ವರಗುಡ್ಡ ಹಾಗೂ ತೋರೂರು-ಹನಕನವಳ್ಳಿ ರಸ್ತೆ ಕಾಮಗಾರಿ ನಿರ್ವಹಿಸಿದ ಬಿಲ್‌ಗಳನ್ನು ಮೇಲಾಧಿಕಾರಿಗಳಿಗೆ ಕಳುಹಿಸಲು ಉತ್ತರ ಕನ್ನಡ ಜಿಲ್ಲೆಯ ಗುತ್ತಿಗೆದಾರ ಬಾಲಕೃಷ್ಣ ಪುಂಡಲೀಕ ಎಂಬುವರಿಗೆ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಮೊದಲ ಹಾಗೂ ಪಾರ್ಟ್ ಬಿಲ್ ಪಾಸ್ ಮಾಡಲು ಪೋನ್ ಪೇ ಮೂಲಕ ₹83 ಸಾವಿರ ಲಂಚ ಪಡೆದಿದ್ದರು. ಎರಡನೇ ಮತ್ತು ಕೊನೆಯ ಬಿಲ್ ಪಾಸ್ ಮಾಡಲು ₹1 ಲಕ್ಷ ಕ್ಕೆ ಬೇಡಿಕೆ ಇಟ್ಟು ಮಂಗಳವಾರ ಕಚೇರಿಯಲ್ಲಿ ಹಣ ಪಡೆಯುವಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ವಶಕ್ಕೆ ಪಡೆದಿದ್ದಾರೆ.

ಈ ಕುರಿತು ಹಾವೇರಿ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.