ಜಾತಿ ಕೇಳಿ ಹೊಡೆಯೋಕಾಗುತ್ತಾ? : ಸಚಿವ ತಿಮ್ಮಾಪುರ

| N/A | Published : Apr 27 2025, 01:45 AM IST / Updated: Apr 27 2025, 01:07 PM IST

ಜಾತಿ ಕೇಳಿ ಹೊಡೆಯೋಕಾಗುತ್ತಾ? : ಸಚಿವ ತಿಮ್ಮಾಪುರ
Share this Article
  • FB
  • TW
  • Linkdin
  • Email

ಸಾರಾಂಶ

ಪಹಲ್ಗಾಮ್ ನಲ್ಲಿ ಉಗ್ರರ ದಾಳಿಯ ವಿಷಯದಲ್ಲಿ ಮಾತ್ರವಲ್ಲ, ಈ ದೇಶದಲ್ಲಿ ಬೇಹುಗಾರಿಕೆ ಪೆಲ್ಯೂರ್ ಆಗ್ತಿರೋದು ಇದೇ ಮೊದಲಲ್ಲ, ಕಾರ್ಗಿಲ್ ಯುದ್ಧ ಆದಾಗ, ಪುಲ್ವಾಮಾ ದಾಳಿ ವೇಳೆಯೂ ಬೇಹುಗಾರಿಕೆ ಫೇಲ್ ಆಗಿತ್ತು, ಈಗ ಮತ್ತೆ ಫೇಲ್ ಆಗಿದೆ ಎಂದು ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಹೇಳಿದ್ದಾರೆ.

  ಬಾಗಲಕೋಟೆ : ಪಹಲ್ಗಾಮ್ ನಲ್ಲಿ ಉಗ್ರರ ದಾಳಿಯ ವಿಷಯದಲ್ಲಿ ಮಾತ್ರವಲ್ಲ, ಈ ದೇಶದಲ್ಲಿ ಬೇಹುಗಾರಿಕೆ ಪೆಲ್ಯೂರ್ ಆಗ್ತಿರೋದು ಇದೇ ಮೊದಲಲ್ಲ, ಕಾರ್ಗಿಲ್ ಯುದ್ಧ ಆದಾಗ, ಪುಲ್ವಾಮಾ ದಾಳಿ ವೇಳೆಯೂ ಬೇಹುಗಾರಿಕೆ ಫೇಲ್ ಆಗಿತ್ತು, ಈಗ ಮತ್ತೆ ಫೇಲ್ ಆಗಿದೆ ಎಂದು ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಹೇಳಿದ್ದಾರೆ.

ಬಾಗಲಕೋಟೆಯಲ್ಲಿ ಶನಿವಾರ ಮಾತನಾಡಿದ ಅವರು, ಇದನ್ನು ಕೇಳಿದರೆ ಹಿಂದೂ ಐಡಿ ಕಾರ್ಡ್‌ ನೋಡಿ ಗುಂಡು ಹೊಡೆದರು ಎಂದು ಬಿಜೆಪಿಯವರು ಹೇಳ್ತಾರೆ, ಮುಸ್ಲಿಮರನ್ನು ಕೊಂದಿಲ್ವಾ ಎಂದು ಪ್ರಶ್ನಿಸಿದ ಸಚಿವರು, ಯಾರೆ ಸತ್ತರೂ ಅದನ್ನು ರಾಜಕೀಯವಾಗಿ ಹೇಗೆ ಲಾಭ ತಗೊಬೇಕು ಅನ್ನೋದೆ ನಮ್ಮ ಧ್ಯೇಯ. ಇದರಿಂದ ದೇಶದ ಪರಿಸ್ಥಿತಿ ಎಲ್ಲಿಗೆ ಹೋಗಬೇಕು ಎಂದು ಆತಂಕ ವ್ಯಕ್ತಪಡಿಸಿದರು.

ಏನ್ರಿ ಸತ್ತಾಗಲೂ ದೇಶಕ್ಕೆ ಗಂಡಾಂತರ ಬಂದಿದೆ, ಅದಕ್ಕೆ ನೋವು ವ್ಯಕ್ತಪಡಿಸುವುದು ಬಿಟ್ಟು, ಹಿಂದು ಧರ್ಮದವರನ್ನಷ್ಟೇ ಹುಡುಕಿ ಹುಡುಕಿ ಕೊಂದರು ಎಂದು ಹೇಳ್ತಾರೆ, ಚುನಾವಣೆ ಬಂದಾಗ ಕಾರವಾರದಲ್ಲಿ ಯಾರೋ ಸತ್ತರೆ ಮುಸ್ಲಿಮರೆ ಕೊಂದ್ರು ಅಂದ್ರು, ಅನಂತರ ಅಸಹಜ ಸಾವು ಎಂದು ಸಾಬೀತಾಯ್ತು, ಎಲ್ಲವನ್ನೂ ಎಲೆಕ್ಷನ್ ದೃಷ್ಟಿಯಿಂದ ನೋಡೋದು ಸರಿನಾ? ಎಂದು ಪ್ರಶ್ನಿಸಿದರು.

ನನ್ನ ಹಾಗೂ ನನ್ನ ಮಗನನ್ನು ಬದುಕಿಸಿದವ ಮುಸ್ಲಿಂ ಎಂದು ಮೃತ ಮಂಜುನಾಥ ಪತ್ನಿಯೇ ಹೇಳಿದ್ದಾಳೆ. ಕೆಲವರನ್ನು ಹಿಂದು ಧರ್ಮನಾ ಕೇಳಿ ಹೊಡೆದಿದ್ದಾರೆ ಎಂಬ ಪ್ರಶ್ನೆಗೆ ಆಘಾತದಲ್ಲಿದ್ದಾಗ ಮನುಷ್ಯ ಧರ್ಮ ಕೇಳಿ ಹೊಡೆದರು ಎಂದು ಸಹಜವಾಗಿ ಹೇಳಿರಬಹುದು ಎಂದ ತಿಮ್ಮಾಪೂರ ಅವರು, ಆದರೆ ಎಷ್ಟೋ ಮುಸ್ಲಿಂ ಯುವಕರು ಹಿಂದುಗಳನ್ನು ರಕ್ಷಣೆ ಮಾಡಿದ್ದಾರೆ ಗೊತ್ತಾ? ಮುಸ್ಲಿಮರನ್ನು ಯಾಕೆ ಕೊಂದರು? ಹೊಡೆದು ಓಡಿ ಹೋಗುವವ ಜಾತಿ ಕೇಳಿ ಹೊಡೆಯೋಕಾಗುತ್ತಾ? ಪ್ರ್ಯಾಕ್ಟಿಕಲ್ ಆಗಿ ಯೋಚನೆ ಮಾಡಿ. ಬಡ ಬಡ ಹೊಡಿತಾನೆ ಓಡಿ ಹೋಗ್ತಾನಷ್ಟೇ. ನಿಂತು ಜಾತಿ ಕೇಳಿ ಹೊಡೆಯುವಷ್ಟು ವ್ಯವಧಾನ ಯಾರಿಗೂ ಇರೋದಿಲ್ಲ. ಇದು ಏನೇ ಇದ್ದರೂ ಇದನ್ನು ಧರ್ಮಕ್ಕೆ ಹಚ್ಚಿ ಲಾಭ ತೆಗೆದುಕೊಳ್ಳುವ ಹುನ್ನಾರ ನಡೆಯುತ್ತಿದೆ ಅದು ಆಗಬಾರದು, ಒಂದು ವೇಳೆ ಹಿಂದೂ ಎಂದು ಕೇಳಿ ಹತ್ಯೆ ಮಾಡಿದ್ದರೂ, ಇದರಲ್ಲಿ ರಾಜಕಾರಣ ಮಾಡಬಾರದು, ದೇಶಕ್ಕೆ ಎದುರಾಗಿರುವ ಗಂಡಾಂತರ ಎದುರಿಸುವ ಭಾವನೆ ನಮ್ಮಲ್ಲಿರಬೇಕು ವಿನಃ.ಧರ್ಮ ಎಂದು ರಾಜಕೀಯಕ್ಕೆ ಬಳಸಿಕೊಳ್ಳೋದು ತಪ್ಪು. ಹಿಂದೂನಾ ಎಂದು ಕೇಳಿ ಹೊಡೆದಿರಲಿಕ್ಕಿಲ್ಲ ಎಂಬ ಭಾವನೆ ನನ್ನದು. ನಾನು ಡಿಟೇಲ್ ಆಗಿ ನೋಡಿಲ್ಲ. ಒಂದು ವೇಳೆ ಕೇಳಿ ಮಾಡಿದ್ದರೆ ಅದನ್ನು ಧರ್ಮಕ್ಕೆ ಹಚ್ಚಿ ರಾಜಕೀಯ ಲಾಭ ಪಡೆದುಕೊಳ್ಳುವ ಹುಚ್ಚುತನ ಮಾಡಬಾರದು ಎಂದು ಕಿವಿಮಾತು ಹೇಳಿದರು.

ಜಾತಿ ಸಮೀಕ್ಷೆ ಗೊಂದಲ ನಿವಾರಣೆಗೆ ಕ್ರಮ:

ರಾಜ್ಯದಲ್ಲಿನ ಜಾತಿ ಸಮೀಕ್ಷೆ ವರದಿ ಬಂದ ನಂತರ ಗೊಂದಲ ಎದ್ದಿರುವುದು ಸತ್ಯ ಆದರೆ ಶೈಕ್ಷಣಿಕ, ಆರ್ಥಿಕ, ಸಾಮಾಜಿಕವಾಗಿ ಹಿಂದುಳಿದವರ ಜನರ ಕಲ್ಯಾಣಕ್ಕಾಗಿ ಹಾಗೂ ಅವರಿಗೆ ಸರ್ಕಾರ ನ್ಯಾಯ ಕೊಡಿಸುವ ಕೆಲಸ ಮಾಡಲಿದೆ. ಅಂಕಿ ಸಂಖ್ಯೆ ಗೊಂದಲ ಇದ್ದು, ಅದನ್ನು ಸರಿಪಡಿಸುವ ಕೆಲಸವನ್ನು ಸರ್ಕಾರ ಮಾಡಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ಹೇಳಿದರು.

ಜಿಲ್ಲೆಯಲ್ಲಿ 3-4 ಸಕ್ಕರೆ ಕಾರ್ಖಾನೆಯವರು ಬಿಲ್ ಪಾವತಿ ಮಾಡುವುದು ಬಾಕಿ ಇದೆ, ಬಾಕಿ ಚುಕ್ತಾ ಕ್ರಮ ವಹಿಸಲಾಗುವುದು. ಸಕ್ಕರೆ ಮಾರಾಟಕ್ಕೆ ಅವಕಾಶ ಇಲ್ಲದಿರುವ ಕಾರಣಕ್ಕೆ ಬಾಕಿ ಉಳಿಸಿಕೊಂಡಿದೆ. ಕೂಡಲೇ ಕಬ್ಬಿನ ಬಾಕಿ ಹಣ ಪಾವತಿಸಲು ಸೂಚಿಸಲಾಗುವುದು ಎಂದು ಹೇಳಿದರು.

ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ಕುರಿತು ಗಮನ ಹರಿಸಲಾಗುವುದು. ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ಭಾಗಿಯಾದರೆ ಅಂತಹವರನ್ನು ಮನೆಗೆ ಕಳುಹಿಸುವ ಕೆಲಸ ಮಾಡಲಾಗುವುದು. ಸಂತ್ರಸ್ತರಿಗೆ ನಿವೇಶನ ನೀಡಲು ಸಹ ಆದ್ಯತೆ ನೀಡಲಾಗುವುದು. ಜಿಲ್ಲೆಯ ಕೂಡಲಂಗಮದಲ್ಲಿ ಅಕ್ಷರಧಾಮ ಕಾಮಗಾರಿ ನೆನಗುದಿಗೆ ಬಿದ್ದಿರುವುದು ಗಮನಕ್ಕೆ ಬಂದಿದ್ದು ಆ ಬಗ್ಗೆ ಕ್ರಮ ವಹಿಸಲಾಗುವುದು ಎಂದು ಹೇಳಿದರು.