ಕನ್ನಡಪ್ರಭ ವಾರ್ತೆ, ತುಮಕೂರು
ಜಿಲ್ಲೆಯ ನಾಗರಿಕರು ತುಮಕೂರು ಹೆಸರು ಬದಲಾವಣೆ ಮಾಡುವುದಕ್ಕೆ ಒಪ್ಪುವುದಿಲ್ಲ , ಗುಬ್ಬಿ ಶಾಸಕ ಎಸ್.ಆರ್. ಶ್ರೀನಿವಾಸ್ ಹೇಳಿದ್ದಾರೆ.ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,
ಎನ್ನುವ ಮೂಲಕ ಸಾಧನಾ ಸಮಾವೇಶದಲ್ಲಿ ಪರಂ ಆಡಿದ್ದ ಮಾತಿಗೆ ಆಡಳಿಬೆಂಗಳೂರು ಟು ತುಮಕೂರು ಮೆಟ್ರೋ ಮಾಡಲಿ ತುಂಬ ಒಳ್ಳೆಯದು. ನಾನು ಅದನ್ನ ಸ್ವಾಗತಿಸುತ್ತೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ತುಮಕೂರನ್ನು ಬೆಂಗಳೂರು ಉತ್ತರ ಎಂದು ಹೆಸರಿಡುವ ಹಾಗೂ ಬೆಂಗಳೂರಿನೊಂದಿಗೆ ಸೇರಿಸುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅದನ್ನು ನಾನು ಒಪ್ಪುವುದಿಲ್ಲ. ಅದಕ್ಕೆ ನಾನು ಕಾಮೆಂಟ್ ಮಾಡುವುದಿಲ್ಲ. ಹೆಸರು ಬದಲಾವಣೆ ಮಾಡುವುದಿಲ್ಲ ಅಂದರೆ ಸೇರ್ಪಡೆ ಹೆಂಗೆ ಬರುತ್ತದೆ. ಈ ಬಗ್ಗೆ ಮಂತ್ರಿಗಳು ಸ್ಪಷ್ಟನೆ ನೀಡಿದ್ದಾರೆ. ತುಮಕೂರು ಒಂದು ಪ್ರತ್ಯೇಕ ಜಿಲ್ಲೆಯಾಗಿದೆ. ಮೊದಲಿನಿಂದಲೂ ತನ್ನತನವನ್ನು ಉಳಿಸಿಕೊಂಡು ಸಂಸ್ಕೃತಿ ಆಚಾರ ವಿಚಾರದಲ್ಲೂ ವಿಭಿನ್ನತೆಯಲ್ಲೂ ಹೊಂದಿರುವ ಜಿಲ್ಲೆಯಾಗಿದೆ. ಇದು ಶರಣರು, ಕಲಾವಿದರು, ಸಾಹಿತಿಗಳು ಸೇರಿದಂತೆ ಎಲ್ಲರೂ ನಡೆದಾಡಿದ ಭೂಮಿಯಾಗಿದ್ದು ಇಲ್ಲಿನ ಮಣ್ಣಿನ ಗುಣವೇ ಬೇರೆಯಾಗಿದೆ. ಇಷ್ಟೆಲ್ಲಾ ಇರುವಾಗ ಇದನ್ನು ತೆಗೆದುಕೊಂಡು ಹೋಗಿ ಬೆಂಗಳೂರಿಗೆ ಸೇರಿಸುವ ಅಥವಾ ಬೆಂಗಳೂರು ಉತ್ತರ ಎಂದು ನಾಮಕರಣ ಮಾಡಲು ಜನ ಒಪ್ಪುವುದಿಲ್ಲ ಎನ್ನುವ ಮೂಲಕ ನೇರವಾಗಿಯೇ ಜಿಲ್ಲೆಯ ಹೆಸರು ಬದಲಾವಣೆಗೆ ವಿರೋಧ ವ್ಯಕ್ತಪಡಿಸಿದರು.
ಗುಬ್ಬಿ ಜೆಡಿಎಸ್ ಮುಖಂಡನ ಚಲನವಲನ ಟ್ರ್ಯಾಕಕ್ ಮಾಡಿದ ವಿಚಾರದ ಬಗ್ಗೆ ಮಾತನಾಡಿದ ಅವರು ಚಿಲ್ಲರೆಗಳು ಹೇಳಿರುವುದಕ್ಕೆಲ್ಲಾ ನಾನು ರಿಯಾಕ್ಟ್ ಮಾಡಬೇಕಾ? ಎಂದ ಅವರು 40 ವರ್ಷದ ರಾಜಕಾರಣದಲ್ಲಿ ಯಾರ ಮೇಲು ನಾನು ದ್ವೇಷ ಮಾಡಿಲ್ಲ. ಬಿಜೆಪಿ ದಿಲೀಪ್ ನನ್ನ ವಿರುದ್ಧ ಎರಡು ಬಾರಿ ಸ್ಪರ್ಧೆ ಮಾಡಿ ಸೋತಿದ್ದಾರೆ ಬೇಕಾದರೆ ಅವರನ್ನೇ ಕೇಳಿ. ವೈಯಕ್ತಿಕ ವಿಚಾರದಲ್ಲಿ ನಾನು ಭಾಗಿಯಾಗಿಲ್ಲ ಎಂದರು. ನನ್ನ ಮಗನ ಆಡಿಯೋದಲ್ಲಿ ಏನ್ ಇದೆ ಎಂದ ಅವರು ಪ್ರಾಪರ್ಟಿ ಬಗ್ಗೆ ಮಾತನಾಡಿದ್ದಾರೆ. ಅವನ ಪ್ರಾಪರ್ಟಿ ಬಗ್ಗೆ ಮಾತನಾಡಿದ್ದಾರಾ. ಆಡಿಯೋದಲ್ಲಿ ಕೇಳಿ ನನ್ನ ಮಗನನ್ನ ಪ್ರವೋಕ್ ಮಾಡುತ್ತಿದ್ದಾರೆ. ಯಾವ ಉದ್ದೇಶ ಇಟ್ಟುಕೊಂಡು ಈ ರೀತಿಯಾಗಿ ಮಾಡುತ್ತಿದ್ದಾರೆ. ನನ್ನ ಮಗನ ಹತ್ತಿರ ನಾನು ಮಾತನಾಡಿಯೇ 3 ತಿಂಗಳು ಆಯ್ತು ಎಂದರು. ನನ್ನ ವಿರುದ್ಧ ನಿಂತು ಕೊಳ್ತಾರೋ ಅದರ ಬಗ್ಗೆ ನಾನು ತಲೆನೆ ಕೆಡಿಸಿಕೊಳ್ಳುವುದಿಲ್ಲ. ನಾನು ನನ್ನ ಎದುರಾಳಿ ಬಗ್ಗೆ ಒಳ್ಳೆದು ಮಾತನಾಡುವುದಿಲ್ಲ. ಕೆಟ್ಟದ್ದು ಮಾತನಾಡುವುದಿಲ್ಲ. ನಾನು ಏನಾದರೂ ಕೆಟ್ಟ ದ್ವೇಷ ರಾಜಕಾರಣ ಮಾಡಿದ್ದೇನೆ ಅಂತ ಯಾರಾದರೂ ಹೇಳಿದರೆ ನಾನು ಒಂದು ಕ್ಷಣನೂ ರಾಜಕಾರಣದಲ್ಲಿ ಮುಂದುವರಿಯುವುದಿಲ್ಲ ಎಂದರು. ನಾನು ಏನು ಅಂತ ನಮ್ಮ ಕ್ಷೇತ್ರದ ಜನರಿಗೆ ಗೊತ್ತಿದೆ. ಬೆಳಗ್ಗೆ ಆದರೆ ಸಾಕು ನಾನು ನಮ್ಮ ಕ್ಷೇತ್ರದಲ್ಲಿ ಇರುತ್ತೇನೆ. ನಾನು ಇದರ ಬಗ್ಗೆ ನನ್ನ ಮಗನನ್ನೇ ಕೇಳಿದೆ. ಅವನ್ಯಾರೋ ಡ್ರೈವರ್ ಬಂದಿದ್ದ. ಒಂದು ಹುಡುಗಿನಾ ಲವ್ ಮಾಡಿದ್ನಂತೆ. ನಾಗರಾಜ್ ಗೆ 5 ಲಕ್ಷ ಕೇಳಿದ್ದನಂತೆ ಮದುವೆಯಾಗಲು ಹಣ ಕೊಟ್ಟಿಲ್ಲ ಹಾಗಾಗಿ ನನ್ನ ಬಳಿ ಹಣ ಕೇಳುವುದಕ್ಕೆ ಬಂದಿದ್ದ. ನಾನು ಬಾಂಬೆಯಲ್ಲಿದ್ದೇನೆ ಅಂತ ಹೇಳಿದೆ. ಅಷ್ಟು ಹೇಳಿದೆ ಅಂತ ನನಗೆ ಹೇಳಿದ್ದಾನೆ ಎಂದರು. ನಾನು ಸ್ವಾಭಿಮಾನ ಇರುವ ವ್ಯಕ್ತಿ. ಜೊತೆಯಲ್ಲೇ ಇದ್ದುಕೊಂಡು ಕುತ್ತಿಗೆ ಕುಯ್ಯುವ ಕೆಲಸ ಮಾಡಿದಾಗ ನಾವು ಅಲ್ಲಿ ಇರಬಾರದು. ಕುಮಾರಸ್ವಾಮಿ ಕ್ಷಮೆ ಕೇಳಿದರೆ ಮತ್ತೆ ಜೆಡಿಎಸ್ ಗೆ ವಾಪಸ್ ಹೋಗ್ತಿರಾ ಎಂಬ ಪ್ರಶ್ನೆಗೆ ಅವರು ದೊಡ್ಡವರು ನನ್ನಂಥ ಸಣ್ಣ ವ್ಯಕ್ತಿ ಹತ್ರ ಕ್ಷಮೆ ಕೇಳಲಿ ಅಂತ ನಾನು ಬಯಸುವುದಿಲ್ಲ. ನಾನು ಅವರಿಗೆ ಸಂಬಂಧಪಟ್ಟವರ ಕಡೆಯಿಂದ ಎಲ್ಲಾ ವಿಚಾರ ತಿಳಿಸಿದ್ದೇನೆ. ಕುಮಾರಸ್ವಾಮಿ ಮೇಲೆ ನೋವು ಇಲ್ಲ.. ದ್ವೇಷನು ಇಲ್ಲ ಎಂದ ಅವರು ನಾವಿಬ್ಬರೂ ಏನಾದರೂ ಹೊಡೆದಾಡಿದ್ವಾ ಸರಿ ಹೋಗೋಕೆ ಎಂದರು.
ಬಾಕ್ಸ್..25ವರ್ಷದಿಂದ ಕುಮಾರಸ್ವಾಮಿ ಜೊತೆ ರಾಜಕೀಯ ಮಾಡಿದ್ದೇನೆ. ನನಗೆ ಒಂದು ಸಲ ಕುಮಾರಸ್ವಾಮಿ ಟೋಪಿ ಗಿರಾಕಿ ಅಂದಿದ್ದರು. ಎಷ್ಟು ಬೇಜಾರ್ ಆಗುವುದಿಲ್ಲ ಹೇಳಿ. ಇದು ವ್ಯಕ್ತಿತ್ವ ಹರಣ ಮಾಡುವ ಕೆಲಸ ಎಂದರು. ಕಾಂಗ್ರೆಸ್ ಬಿಟ್ಟು ಜೆಡಿಎಸ್ ಗೆ ಹೋಗುತ್ತೀರಾ ಎಂಬ ಪ್ರಶ್ನೆಗೆ ನಾನು ಎಲ್ಲಿ ಹೋಗಬೇಕು ಎಲ್ಲಿ ಬರಬೇಕು ಅನ್ನೋದು ನನ್ನ ವೈಯಕ್ತಿಕ ವಿಚಾರ. ಯಾರನ್ನು ಕೇಳಿ ಹೇಳಿ ಹೋಗುವುದಿಲ್ಲ. ನಾನು ಕುಮಾರಸ್ವಾಮಿ ಆತ್ಮೀಯರಿದ್ವಿ. ಅವರು ಮಾಡಿದ ಒಂದೇ ಒಂದು ತಪ್ಪಿನಿಂದ ನಾನು ದೂರವಾದೆ ಎಂದರು.