ಜೆಡಿಎಸ್‌ ಯುವ ಘಟಕದ ಅಧ್ಯಕ್ಷ ನಿಖಿಲ್‌ ಕುಮಾರ ಸ್ವಾಮಿ ಪ್ರಶ್ನೆ

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಹೋದಲ್ಲಿ ಬಂದಲ್ಲಿ, ರಾಹುಲ್‌ ಗಾಂಧಿ ಅವರು ಮಹಿಳಾ ಸಬಲೀಕರಣದ ಬಗ್ಗೆ ಮಾತನಾಡುತ್ತಾರೆ. ಕೇವಲ ₹2 ಸಾವಿರ ಕೊಟ್ಟು ನಿರಂತರವಾಗಿ ಮಹಿಳಾ ಸಬಲೀಕರಣ ಮಾಡುತ್ತೀರಾ ಎಂದು ಜೆಡಿಎಸ್‌ ಯುವ ಘಟಕದ ಅಧ್ಯಕ್ಷ ನಿಖಿಲ್‌ ಕುಮಾರ ಸ್ವಾಮಿ ಪ್ರಶ್ನಿಸಿದ್ದಾರೆ.

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 1996ರಲ್ಲಿಯೇ ದೇವೇಗೌಡರು ಪ್ರಧಾನ ಮಂತ್ರಿ ಆಗಿರುವಾಗ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಶೇ.33 ರಷ್ಟು ಮಹಿಳೆಯರಿಗೆ ಸ್ಥಾನ ಮೀಸಲಿಡಬೇಕು ಎಂದು ತೀರ್ಮಾನ ಮಾಡಿದ್ದರು. ಆಗಲೂ ಕಾಂಗ್ರೆಸ್‌ ವಿರೋಧ ವ್ಯಕ್ತಪಡಿಸಿದ್ದರು.

ಈಗ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹೋದಲ್ಲಿ, ಬಂದಲ್ಲಿ ಮಹಿಳಾ ಸಬಲೀಕರಣದ ಬಗ್ಗೆ ಮಾತನಾಡುತ್ತಾರೆ. ಕೇವಲ ₹2 ಸಾವಿರ ಕೊಟ್ಟು ಮಹಿಳಾ ಸಬಲೀಕರಣ ಮಾಡುತ್ತೀರಾ?, ಮಹಿಳೆಯರ ಮೂಲಕವೂ ಆಡಳಿತ ನಡೆಸುವ ವ್ಯವಸ್ಥೆ ಮಾಡು ವುದರಲ್ಲಿ ತಪ್ಪೇನಿದೆ ಎಂದು ಕೇಳಿದ್ದಾರೆ.


ಇದು ಪ್ರಜಾಪ್ರಭುತ್ವದ ಸೋಲು:

ಮಹಿಳಾ ಮೀಸಲಾತಿ ಬಿಲ್‌ಗೆ ಸೋಲಾಗಿರುವುದು ಪ್ರಧಾನ ಮಂತ್ರಿ, ಎನ್‌ಡಿಎ ಸರ್ಕಾರದ ಸೋಲಲ್ಲ. ಪ್ರಜಾಪ್ರಭುತ್ವದ ಸೋಲಾಗಿದೆ. ಅದಕ್ಕೆ ಮೂಲ ಕಾರಣ ಕಾಂಗ್ರೆಸ್‌. ಮಹಿಳಾ ಮೀಸಲಾತಿ ವಿಚಾರದಲ್ಲಿ ಕಾಂಗ್ರೆಸ್‌ ದಕ್ಷಿಣ ಭಾರತ ಮತ್ತು ಉತ್ತರ ಭಾರತ ರಾಜ್ಯಗಳು ಎಂಬ ಪ್ರಾಪಗಾಂಡ ಸೃಷ್ಟಿ ಮಾಡುತ್ತಿದೆ. ಈ ಬಗ್ಗೆ ಲೋಕಸಭೆಯಲ್ಲಿ ಗೃಹ ಸಚಿವರು ಉತ್ತರ ನೀಡಿದ್ದು, 1971ರಲ್ಲಿ ಮೊದಲ ಜನಸಂಖ್ಯೆಗೆ ಹೋಲಿಕೆ ಮಾಡಿದರೆ, ಈಗ 3 ಪಟ್ಟು ಜನಸಂಖ್ಯೆ ಹೆಚ್ಚಾಗಿದೆ. ದಕ್ಷಿಣ ಭಾರತದ ರಾಜ್ಯಗಳು ಆತಂಕ ಪಡುವುದು ಬೇಡ. ಆಂದ್ರಪ್ರದೇಶ, ತಮಿಳುನಾಡು, ಕರ್ನಾಟಕ, ಕೇರಳ ಹಾಗೂ ತೆಲಂಗಾಣ ರಾಜ್ಯ ಗಳಿಗೆ ಶೇ,50 ರಷ್ಟು ನಿಯಮ ಅಳವಡಿಕೆ ಮಾಡುತ್ತೇವೆ.

ಅಂದರೆ, 543 ಲೋಕಸಭಾ ಸ್ಥಾನಗಳಲ್ಲಿ ಈ ಪೈಕಿ ದಕ್ಷಿಣ ಭಾರತದ ರಾಜ್ಯಗಳಿಂದ 129 ಸ್ಥಾನದಿಂದ ಪ್ರತಿನಿಧಿಸ ಲಾಗುತ್ತಿದೆ. ಅದು ಶೇ.23.76 ರಷ್ಟು ಆಗಲಿದೆ. ಕ್ಷೇತ್ರ ಮರು ವಿಂಗಡಣೆಯಿಂದ 850 ಸ್ಥಾನ ಆಗಲಿದೆ. ಆಗ ಸುಮಾರು 195 ರಷ್ಟು ಅಂದರೆ, ಶೇ.24 ರಷ್ಟು ಸ್ಥಾನಗಳು ದಕ್ಷಿಣ ಭಾರತದ ರಾಜ್ಯಗಳ ಪ್ರಾತಿನಿಧ್ಯಕ್ಕೆ ಅವಕಾಶ ನೀಡುತ್ತೇವೆ ಎಂದು ಪ್ರಧಾನಿ ಮಂತ್ರಿ ಸ್ಪಷ್ಟಪಡಿಸಿದ್ದಾರೆ.

ಆದರೂ ಕಾಂಗ್ರೆಸ್‌ ಕ್ಷೇತ್ರ ಪುನರ್‌ ವಿಂಗಡಣೆ ನೆಪವಾಗಿಸಿ ಮಹಿಳಾ ಮೀಸಲಾತಿ ವಿರೋಧಿಸಿ ಅವರ ಮನೋಸ್ಥಿತಿ ಏನು ಎಂಬುದನ್ನು ತಿಳಿಸುತ್ತಿದೆ. ಮಹಿಳೆಯರನ್ನು ಕೇವಲ ಮತ ಬ್ಯಾಂಕ್‌ಗಾಗಿಯೇ ಇಟ್ಟುಕೊಳ್ಳಬೇಕಾ ಎಂಬ ಬಗ್ಗೆ ಕಾಂಗ್ರೆಸ್‌ ಅಲೋಚನೆ ಮಾಡಬೇಕು ಎಂದರು.

ಸಚಿವ ಜಮೀರ್‌ ಅಹಮದ್‌ ಮತ್ತೆ ಜೆಡಿಎಸ್‌ ಸೇರ್ಪಡೆ ಊಹಾಪೋಹ

ದಾವಣಗೆರೆ ಉಪ ಚುನಾವಣೆ ಬಳಿಕ ಸಚಿವ ಜಮೀರ್ ಅಹಮದ್ ಖಾನ್ ಜೆಡಿಎಸ್ ಸೇರ್ಪಡೆ ವಿಚಾರಕ್ಕೆ ಪ್ರಕ್ರಿಯೆಸಿ ಇದು ಕೇವಲ ಊಹಾಪೋಹ ಮಾತ್ರ. ಈ ವಿಚಾರದ ಬಗ್ಗೆ ಯಾವುದೇ ಚರ್ಚೆ ಆಗಿಲ್ಲ. ಈ ಹಿಂದೆ ಯಾವ ಸಂದರ್ಭದಲ್ಲಿ ಯಾವ ರೀತಿ ಪಕ್ಷ ಬಿಟ್ಟರು, ಹೋಗುವಾಗ ಸಾರ್ವಜನಿಕ ವಲಯದಲ್ಲಿ ಯಾವ ರೀತಿ ಚರ್ಚೆ ಮಾಡಿದ್ದಾರೆ. ಎಲ್ಲ ಪರಿಗಣಿಸಿ ಅಲ್ಲಿಂದ ಪಕ್ಷದ ವರಿಷ್ಠರು ಯಾರನ್ನು ಕರೆಸಿಕೊಳ್ಳಬೇಕು. ಯಾರನ್ನು ದೂರ ಇಡಬೇಕು ಎಂದು ತೀರ್ಮಾನಿಸುತ್ತಾರೆ ಎಂದರು.

ಬಿಜೆಪಿಯೊಂದಿಗೆ ಜೆಡಿಎಸ್‌ ಸಿದ್ದಾಂತ ವಿಲೀನವಿಲ್ಲ

ಜಾತ್ಯತೀತ ಜನತಾದಳ ಸಿದ್ದಾಂತದಲ್ಲಿ ಯಾವುದೇ ಬದಲಾವಣೆ ಇಲ್ಲ. ಎನ್‌ಡಿಎ ಮಿತ್ರ ಪಕ್ಷವಾಗಿ ಕೈ ಜೋಡಿಸಿದ್ದೇವೆ. ಆದರೆ, ಜೆಡಿಎಸ್‌ ತನ್ನ ಸಿದ್ದಾಂತವನ್ನು ಯಾರ ಜೊತೆಗೂ ವಿಲೀನ ಮಾಡಿಲ್ಲ. ಜೆಡಿಎಸ್‌ ಒಂದು ಪ್ರತ್ಯೇಕ ರಾಜಕೀಯ ಪಕ್ಷ. ಯಾವತ್ತೂ ಧರ್ಮ ,ಜಾತಿ‌, ಸಮುದಾಯದ ಆಧಾರದ ಮೇಲೆ ರಾಜಕಾರಣ ಮಾಡಿಲ್ಲ. ಸರ್ವ ಜನಾಂಗದ ಶಾಂತಿ ತೋಟದ ಬಗ್ಗೆ ಪರಿಕಲ್ಪನೆ ಇಟ್ಟುಕೊಂಡಿದೆ ಎಂದು ಹೇಳಿದರು.

ಅಲ್ಪಸಂಖ್ಯಾತರನ್ನು ಕಾಂಗ್ರೆಸ್‌ ಮತ ಬ್ಯಾಂಕ್‌ ಗೆ ಬಳಕೆ ಮಾಡಿದ್ದು, ಬಿಟ್ಟರೆ ಅವರನ್ನು ಬೆಳೆಸುವ ಕೆಲಸ ಕಾಂಗ್ರೆಸ್ ಮಾಡಿಲ್ಲ.ಜಿನ್ನು ಮುಂದೆಯಾದರೂ ಅಲ್ಪಸಂಖ್ಯಾತರು ಎಚ್ಚೆತ್ತುಕೊಳ್ಳಬೇಕಾಗಲಿದೆ.

----ಬಾಕ್ಸ್‌---

ಕೇಸರಿ ಶಾಲನ್ನು ಗುತ್ತಿಗೆ ನೀಡಲಾಗಿದೆಯೇ?

ಜೆಡಿಎಸ್‌ ಮುಖಂಡರು ಕೇಸರಿ ಶಾಲು ಹಾಕಿಕೊಂಡರೆ, ಅಲ್ಪಸಂಖ್ಯಾತರು ಹೇಗೆ ವಿಶ್ವಾಸವಿಟ್ಟು ಜೆಡಿಎಸ್‌ನೊಂದಿಗೆ ಬರುತ್ತಾರೆ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ನಿಖಿಲ್‌ ಕುಮಾರ ಸ್ವಾಮಿ, ಕೇಸರಿ ಶಾಲು ಹಿಂದೂಧರ್ಮದ ಸಂಕೇತ, ಜೆಡಿಎಸ್‌ ಕಾರ್ಯಕರ್ತರು, ಮುಖಂಡರ ಮೈಮೇಲೆ ಯಾವಾಗಲೂ ಹಸಿರು ಶಾಲು ಇರುತ್ತದೆ ಎಂದರು.

ಈ ವೇಳೆ ಧ್ವನಿಗೂಡಿದ ವಿಧಾನಪರಿಷತ್‌ ಸದಸ್ಯ ಭೋಜೇಗೌಡ, ಮೊದಲ ಬಾರಿ ಜೆಡಿಎಸ್‌ನಿಂದ ಚುನಾವಣೆ ಗೆದ್ದಾಗ, ಮಂಗಳೂರಿನಲ್ಲಿ ಪ್ರತಿಕಾಗೋಷ್ಠಿಯಲ್ಲಿ ಕೇಸರಿ ಶಾಲು ಹಾಕಿಕೊಂಡು ಮಾತನಾಡುವಾಗ ಪತ್ರಕರ್ತರು, ಕೇಸರಿ ಶಾಲು ಯಾಕೆ ಎಂದು ಪ್ರಶ್ನಿಸಿದ್ದರು. ಆಗ ಕೇಸರಿ ಶಾಲನ್ನು ಯಾರಿಗಾದರೂ ಗುತ್ತಿಗೆ ಕೊಡಲಾಗಿದೆಯೇ ಎಂದು ಮರು ಪ್ರಶ್ನಿಸಿದೆ ಎಂದು ಹೇಳಿದರು.