ಸಾರಾಂಶ
ಇಷ್ಟಲಿಂಗ ಪೂಜೆ ಅನುಭಾವದ ಅತ್ಯಂತಿಕ ಸ್ಥಿತಿ ನಿರೂಪಿಸುವ ಸಾಧನವಾಗಿದೆ. ಇಷ್ಟಲಿಂಗ ಧ್ಯಾನ ಹಾಗೂ ಪೂಜೆಯನ್ನು ಯಾರಾದರೂ ಮಾಡಬಹುದು ಇದಕ್ಕೆ ಜಾತಿ, ಮತ, ಪಂಥ ಎಂಬ ಭೇದ ಇರುವುದಿಲ್ಲ.
ಧಾರವಾಡ:
ಕಲುಷಿತಗೊಳ್ಳುವ ಮನುಷ್ಯ ಜನ್ಮವನ್ನು ಪರಿಶುದ್ಧಗೊಳಿಸಲು ಪರಮಾತ್ಮನ ಸಾತ್ವಿಕ ಸಂಬಂಧ ಹೊಂದಬೇಕು. ಆ ಸಂಬಂಧ ಪಡೆಯುವ ಮಾರ್ಗವೇ ಇಷ್ಟಲಿಂಗ ಪೂಜೆ ಎಂದು ಮುಂಡಗೋಡ ಅತ್ತಿವೇರಿ ಬಸವಧಾಮದ ಬಸವೇಶ್ವರಿ ಮಾತಾಜಿ ಹೇಳಿದರು.ಶ್ರೀಉಳವಿ ಚನ್ನಬಸವೇಶ್ವರ ದೇವಸ್ಥಾನದಲ್ಲಿ ಬಸವೇಶ್ವರ ಧರ್ಮ ಫಂಡ ಸಂಸ್ಥೆ ವತಿಯಿಂದ ಶ್ರಾವಣ ಮಾಸದ ನಿಮಿತ್ತ ಏರ್ಪಡಿಸಿದ್ದ ಇಷ್ಟಲಿಂಗ ಪೂಜಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇಷ್ಟಲಿಂಗ ಪೂಜೆ ಅನುಭಾವದ ಅತ್ಯಂತಿಕ ಸ್ಥಿತಿ ನಿರೂಪಿಸುವ ಸಾಧನವಾಗಿದೆ. ಇಷ್ಟಲಿಂಗ ಧ್ಯಾನ ಹಾಗೂ ಪೂಜೆಯನ್ನು ಯಾರಾದರೂ ಮಾಡಬಹುದು ಇದಕ್ಕೆ ಜಾತಿ, ಮತ, ಪಂಥ, ಭೇದವಿಲ್ಲ ಎಂದರು.ದೇವರನ್ನು ಹುಡುಕುತ್ತ ಹೊರಟ ಮನಸ್ಸು ತಾನು ಎಂಥೆಂಥ ಮಾನಸಿಕ ತುಮುಲಗಳನ್ನು ದಾಟಬೇಕು, ಅನುಭವಿಸಬೇಕು ಎಂದು ಎಲ್ಲವನ್ನು ಎದುರಿಸಿ ಮಾನಸಿಕ ಸಂಘರ್ಷಗಳನ್ನು ದಾಟಿದಾಗಲೇ ಮಾನವ ಮಹಾಮಾನವನಾಗುತ್ತೇನೆ ಎಂದರು.
ಡಾ. ಎಸ್.ಆರ್. ರಾಮನಗೌಡರ, ಕೆ.ಎಂ. ಗೌಡರ, ಆರ್.ವೈ. ಸುಳ್ಳದ, ಬಸವರಾಜ ಸೂರಗೊಂಡ, ಟಿ.ಎಲ್. ಪಾಟೀಲ, ವಿಜೇಂದ್ರ ಪಾಟೀಲ, ಎನ್.ಬಿ. ಗೋಲಣ್ಣವರ, ಆರ್.ಡಿ. ಹಿರೇಗೌಡರ, ವೀರಣ್ಣ ಗಟಿಗೆಣ್ಣವರ ಇಷ್ಟಲಿಂಗ ಪ್ರಾತ್ಯಕ್ಷತೆಯಲ್ಲಿದ್ದರು. ಇಷ್ಟಲಿಂಗ ಪೂಜೆಯಲ್ಲಿ 250ಕ್ಕೂ ಹೆಚ್ಚು ಜನ ಪಾಲ್ಗೊಂಡಿದ್ದರು. 150ಕ್ಕೂ ಹೆಚ್ಚು ಮಕ್ಕಳು ಇಷ್ಟಲಿಂಗ ಧಾರಣೆ ಮಾಡಿದರು.