ಸಾಧನೆ ಗುರುತಿಸಿ ಪ್ರಶಸ್ತಿ ನೀಡಿರುವುದು ಹೆಮ್ಮೆಯ ವಿಷಯ: ಶಾಸಕ ಜಿ.ಎಚ್.ಶ್ರೀನಿವಾಸ್

| Published : Oct 12 2025, 01:00 AM IST

ಸಾಧನೆ ಗುರುತಿಸಿ ಪ್ರಶಸ್ತಿ ನೀಡಿರುವುದು ಹೆಮ್ಮೆಯ ವಿಷಯ: ಶಾಸಕ ಜಿ.ಎಚ್.ಶ್ರೀನಿವಾಸ್
Share this Article
  • FB
  • TW
  • Linkdin
  • Email

ಸಾರಾಂಶ

ತರೀಕೆರೆ, ಜನಪದ ಕಲಾವಿದೆ ಲಕ್ಷ್ಮೀದೇವಮ್ಮ ನವರ ಸಾಧನೆ ಗುರುತಿಸಿ ಅನೇಕ ಪ್ರಶಸ್ತಿಗಳು ನೀಡಿರುವುದು ಹೆಮ್ಮೆಯ ವಿಷಯ ಸರ್ಕಾರ ಸಾಧಕರನ್ನು ಗುರುತಿಸುತ್ತದೆ ಎಂಬುದಕ್ಕೆ ಇದೇ ಸಾಕ್ಷಿ ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಹೇಳಿದರು.

- ಲಕ್ಷ್ಮೀದೇವಮ್ಮ ಎಸ್.ಜಿ. ಅವರ ಆತ್ಮಕಥನ ಎದೆಯ ಪದ ಪುಸ್ತಕ ಬಿಡುಗಡೆ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ, ತರೀಕೆರೆ

ಜನಪದ ಕಲಾವಿದೆ ಲಕ್ಷ್ಮೀದೇವಮ್ಮ ನವರ ಸಾಧನೆ ಗುರುತಿಸಿ ಅನೇಕ ಪ್ರಶಸ್ತಿಗಳು ನೀಡಿರುವುದು ಹೆಮ್ಮೆಯ ವಿಷಯ ಸರ್ಕಾರ ಸಾಧಕರನ್ನು ಗುರುತಿಸುತ್ತದೆ ಎಂಬುದಕ್ಕೆ ಇದೇ ಸಾಕ್ಷಿ ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಹೇಳಿದರು.ಶನಿವಾರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕನ್ನಡ ವಿಭಾಗ, ತರೀಕೆರೆ ಮತ್ತು ಮೈಸೂರಿನ ಸಮತಾ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಭಾಂಗಣದಲ್ಲಿ ಲಕ್ಷ್ಮೀದೇವಮ್ಮ ಅವರ ಆತ್ಮಕಥನ ಎದೆಯ ಪದ ಪುಸ್ತಕ ಬಿಡುಗಡೆ ನೆರವೇರಿಸಿ ಮಾತನಾಡಿದರು.

ಲಕ್ಷ್ಮೀದೇವಮ್ಮ ಅವರಂತ ಕಲಾವಿದರ ಆತ್ಮಕಥನ ಬಿಡುಗಡೆಯಾಗುತ್ತಿರುವುದು ಸಂತೋಷ ತಂದಿದೆ. ಇದು ಬಹಳ ಒಳ್ಳೆಯ ಕಾರ್ಯಕ್ರಮ. ಪ್ರೊ.ಆರ್. ಸುನಂದಮ್ಮ ಪುಸ್ತಕವನ್ನು ಬಹಳ ಚೆನ್ನಾಗಿ ಬರೆದಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಬೆಂಗಳೂರು ವಿ.ವಿ.ಕನ್ನಡ ಅದ್ಯಯನ ಕೇಂದ್ರದ ನಿವೃತ್ತ ಪ್ರಾಧ್ಯಾಪಕ ಡಾ.ರಾಜಪ್ಪ ದಳವಾಯಿ ಪುಸ್ತಕ ಕುರಿತು ಮಾತನಾಡಿ ಲಕ್ಷ್ಮೀದೇವಮ್ಮ ಅವರ ಆತ್ಮಕಥನ ಪುಸ್ತಕ ಬಡತನದಲ್ಲಿದ್ದ ಹುಟ್ಟಿ ಬೆಳೆದ ಮಹಿಳೆ ತನ್ನ ಶ್ರಮದಿಂದ ಜನಪದ ಗೀತೆಗಳನ್ನು ಸುಶ್ರಾವ್ಯವಾಗಿ ಹಾಡುವ ಮುೂಲಕವೇ ಬದುಕನ್ನು ಹೇಗೆ ಕಟ್ಟಿಕೊಂಡರು ಎಂಬುದು ತಿಳಿಯುತ್ತದೆ, ಲಕ್ಷ್ಮೀದೇವಮ್ಮ ತಮ್ಮ ಮೂವರು ಮಕ್ಕಳನ್ನು ಕಷ್ಚಪಟ್ಟು ವಿದ್ಯಾವಂತರನ್ನಾಗಿ ಮಾಡಿದ್ದಾರೆ. ಅವರ ಪುತ್ರ ಡಾ.ರವೀಶ್ ವಿಶ್ವ ಆರೋಗ್ಯ ಸಂಸ್ಥೆಯಲ್ಲಿ ಪೂರ್ವ ಏಷಿಯಾ ದೇಶಗಳ ಉನ್ನತ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಹೇಳಿದರು. ಲಕ್ಷ್ಮೀ ದೇವಮ್ಮ ಅವರು ಭಜನಾ ಮಂಡಳಿ, ಆರುಣೋದಯ ಮಹಿಳಾ ಸಂಘ, ಗ್ರಾಪಂ ಸದಸ್ಯೆ, ಅಧ್ಯಕ್ಷರಾಗಿ ಆಕಾಶವಾಣಿ ಕಲಾವಿದರಾಗಿ, ಮಹಿಳೆಯರಿಗಾಗಿ ವಯಸ್ಕರ ಶಿಕ್ಷಣದಲ್ಲಿ ರಾತ್ರಿ ಶಾಲೆ ಪ್ರಾರಂಭಿಸಿ ಅನೇಕ ಮಹಿಳೆಯರಿಗೆ ವಿದ್ಯಾದಾನ ಮಾಡಿರುವ ಅವರು ಇತರರಿಗೆ ಮಾದರಿ. ಜೊತೆಗೆ ತಾವೇ ಸ್ವತಃ ಟೈಲರಿಂಗ್ ಕಲಿತು ಅನೇಕರಿಗೆ ತರಬೇತಿ ನೀಡಿದ್ದಾರೆ. ಸರ್ಕಾರದ ಯೋಜನೆಗಳಲ್ಲಿ ಅವರ ಮಹಿಳಾ ಸಂಘ ಸಕ್ರಿಯವಾಗಿ ತೊಡಗಿ ಮಹಿಳೆಯರ ಪೌಷ್ಟಿಕತೆ, ಆರೋಗ್ಯ ಕಾರ್ಯ ಕರ್ತೆ ಯಾಗಿ ಕೂಡ ಸೇವೆ ಸಲ್ಲಿಸಿದ್ದಾರೆ. ಬಾಲ್ಯ ವಿವಾಹ ನಿಷೇಧ ಕಾರ್ಯಕ್ರಮ ನೀರಿನ ಬಗ್ಗೆ ಅರಿವು ಮೂಡಿಸುವ ಕಾರ್ಯ ಕ್ರಮಗಳನ್ನು ಮಹಿಳಾ ಸಂಘಗಳ ಮೂಲಕ ನಿರ್ವಹಿಸಿದ್ದಾರೆ ಎಂದು ವಿವರಿಸಿದರು.

ಲೇಖಕಿ ಪ್ರೊ.ಆರ್.ಸುನಂದಮ್ಮ ಮಾತನಾಡಿ ಲಕ್ಷ್ಮೀದೇವಮ್ಮ ಅವರ ಗ್ರಾಮೀಣ ಆದರ್ಶ ಬದುಕು, ಅನೇಕ ಜನರಿಗೆ ಮಾರ್ಗಸೂಚಿಯಾಗಿದೆ ಎಂದು ಹೇಳಿದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಚಾರ್ಯ ಡಾ.ಟಿ.ಮಂಜುನಾಥ್ ಅಧ್ಯಕ್ಷತೆ ವಹಿಸಿ ಮಾತನಾಡಿ ಅತ್ಮಕಥನ ಪ್ರಭಾವಯುತವಾಗಿದೆ ಎಂದು ಹೇಳಿದರು.ಕಲಾವಿದೆ ಲಕ್ಷ್ಮೀದೇವಮ್ಮ, ಮೈಸೂರು ಸಮತಾ ಅಧ್ಯಯನ ಕೇಂದ್ರ ಅಧ್ಯಕ್ಷ ಡಾ.ಸಬೀಹಾ ಭೂಮಿಗೌಡ. ಬೆಂಗಳೂರು ಲೇಖಕರು ಮತ್ತು ಚಿಂತಕರು ಡಾ.ದು.ಸರಸ್ವತಿ, ಕನ್ನಡ ಮತ್ತು ಸಂಸ್ಖೃತಿ ಇಲಾಖೆ ಸಹಾಯಕ ನಿರ್ದೇಶಕ ರಮೇಶ್, ಜಿಲ್ಲಾ ಕಸಾದ ಅಧ್ಯಕ್ಷ ಸೂರಿ ಶ್ರೀನಿವಾಸ್, ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯ ಪವಿತ್ರ ವೆಂಕಟೇಶ್, ಡಾ.ಸಬಿತಾ ಬನ್ನಾಡಿ, ತಾಲೂಕು ಕಸಾಪ ಅಧ್ಯಕ್ಷ ರವಿ ದಳವಾಯಿ, ಕನ್ನಡಶ್ರೀ ಬಿ.ಎಸ್.ಭಗವಾನ್, ಪ್ರಕೃತಿಶ್ರೀ ಕಲಾ ಕುಟೀರ ಅಧ್ಯಕ್ಷೆ ಉಮಾ ಪ್ರಕಾಶ್, ಜಿಲ್ಲಾ ಕನ್ನಡ ಜಾನಪದ ಪರಿಷತ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ವಿಶಾಲಾಕ್ಷಮ್ಮ, ಮಮತ ಮಹಿಳಾ ಸಮಾಜ ಅಧ್ಯಕ್ಷೆ ಮಂಜುಳಾ ವಿಜಯ ಕುಮಾರ್, ಕಜಾಪ ತಾಲೂಕು ಅಧ್ಯಕ್ಷೆ ಲೀಲಾ ಸೋಮಶೇಖರಯ್ಯ, ಅನುವನ ಹಳ್ಳಿ ಪ್ರಸನ್ನ ಕುಮಾರ್, ಕಜಾಪ ಅಧ್ಯಕ್ಷೆ ಗಾಯಿತ್ರಮ್ಮ ಮತ್ತಿತರರು ಭಾಗವಹಿಸಿದ್ದರು.

11ಕೆಟಆರ್.ಕೆ.4ಃ

ತರೀಕೆರೆಯ ಕಾರ್ಯಕ್ರಮದಲ್ಲಿ ಶಾಸಕ ಜಿ.ಎಚ್.ಶ್ರೀನಿವಾಸ್ ಜಾನಪದ ಕಲಾವಿದೆ ಲಕ್ಷ್ಮೀದೇವಮ್ಮ ಅವರ ಆತ್ಮಕಥನ ಎದೆಯ ಪದ ಪುಸ್ತಕ ಬಿಡುಗಡೆ ಮಾಡಿದರು. ಬೆಂಗಳೂರು ವಿ.ವಿ.ಕನ್ನಡ ಅಧ್ಯಯನ ಕೇಂದ್ರದ ನಿವೃತ್ತ ಪ್ರಾಧ್ಯಾಪಕ ಡಾ.ರಾಜಪ್ಪ ದಳವಾಯಿ, ಮೈಸೂರು ಸಮತಾ ಅಧ್ಯಯನ ಕೇಂದ್ರ ಅಧ್ಯಕ್ಷೆ ಡಾ.ಸಬೀಹಾ ಭೂಮಿಗೌಡ, ಜಿಲ್ಲಾ ಕಸಾಪ ಅಧ್ಯಕ್ಷ ಸೂರಿ ಶ್ರೀನಿವಾಸ್, ಪ್ರಾಚಾರ್ಯ ಡಾ.ಟಿ.ಮಂಜುನಾಥ್, ಮತ್ತಿತರರು ಇದ್ದರು.