ಶಿಕ್ಷಕರನ್ನು ಒಂದೆಡೆ ಸೇರಿಸಿ ಸನ್ಮಾನಿಸುತ್ತಿರುವುದು ಖುಷಿ ನೀಡಿದೆ

| Published : Dec 27 2024, 12:45 AM IST

ಶಿಕ್ಷಕರನ್ನು ಒಂದೆಡೆ ಸೇರಿಸಿ ಸನ್ಮಾನಿಸುತ್ತಿರುವುದು ಖುಷಿ ನೀಡಿದೆ
Share this Article
  • FB
  • TW
  • Linkdin
  • Email

ಸಾರಾಂಶ

ರಾಯಚೂರು ನಗರದ ಕನ್ನಡ ಭವನದಲ್ಲಿ ಶಾರದಾ ಕನ್ಯಾ ಪ್ರಾಥಮಿಕ ಪಾಠಶಾಲೆಯ 1988-1994ನೇ ಸಾಲಿನ ವಿದ್ಯಾರ್ಥಿಗಳಿಂದ ಗುರುವಂದನಾ, ಸ್ನೇಹ ಸಮ್ಮೀಲನ ಸಮಾರಂಭ ಜರುಗಿತು.

ಕನ್ನಡಪ್ರಭ ವಾರ್ತೆ ರಾಯಚೂರು

ಟ್ಯಾಗೋರ್ ಸ್ಮಾರಕ ಶಿಕ್ಷಣ ಸಂಸ್ಥೆ ಸಂಚಾಲಿತ ಶಾರದಾ ಕನ್ಯಾ ಪ್ರಾಥಮಿಕ ಪಾಠ (ಶ್ರೀರಾಮ) ಶಾಲೆಯ 1988-1994ನೇ ಸಾಲಿನ ವಿದ್ಯಾರ್ಥಿಗಳಿಂದ ಗುರುವಂದನೆ, ಸ್ನೇಹ ಸಮ್ಮೀಲನ ಸಮಾರಂಭ ಹಮ್ಮಿಕೊಳ್ಳಲಾಯಿತು.

ಸ್ಥಳೀಯ ಕನ್ನಡ ಭವನದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಶಾಲೆಯ ಹಳೆಯ ವಿದ್ಯಾರ್ಥಿಗಳು ಎಲ್ಲಾ ಶಿಕ್ಷಕರನ್ನು ಹಾಗೂ ಸಿಬ್ಬಂದಿಯನ್ನು ಸನ್ಮಾನಿಸಿ ಗೌರವ ಸಮರ್ಪಿಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ನಿವೃತ್ತ ಶಿಕ್ಷಕಿ ಜೀವಮ್ಮ ಬಾಯಿ, ಶಾಲೆಯಲ್ಲಿ ಕಲಿತ ಎಲ್ಲಾ ವಿದ್ಯಾರ್ಥಿಗಳು ಓದು ಮುಗಿಸಿ ದೂರವಾದರೂ ಶಿಕ್ಷಕರ ಬಗ್ಗೆ ಕಾಳಜಿ ಕಡಿಮೆಯಾಗಿಲ್ಲ. ಎಲ್ಲಾ ಸ್ನೇಹಿತರು ಒಗ್ಗೂಡಿ ಶಿಕ್ಷಕರನ್ನು ಒಂದೆಡೆ ಸೇರಿಸಿ ಸನ್ಮಾನಿಸುತ್ತಿರುವುದು ಖುಷಿ ನೀಡಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ನಿವೃತ್ತ ಶಿಕ್ಷಕಿ ಕಲ್ಯಾಣಿ ಹಾಗೂ ಅನಸೂಯ ಮಾತನಾಡಿ, ನಾವು ಪಾಠ ಮಾಡಿದ ವಿದ್ಯಾರ್ಥಿಗಳು ಈಗ ದೊಡ್ಡ ವ್ಯಕ್ತಿಗಳಾಗಿದ್ದನ್ನು ನೋಡಿ ಖುಷಿಯಾಗಿದೆ. ತಮ್ಮ ಮನೆಯಲ್ಲಿ ನೀಡಿದ ಸಂಸ್ಕಾರ, ಸಂಸ್ಕೃತಿ ಮಕ್ಕಳಿಗೆ ರವಾನಿಸಿ ದೇಶ ಸೇವೆಗೆ ಸಜ್ಜುಗೊಳಿಸಬೇಕು ಎಂದು ಹೇಳಿದರು.

ಹಳೆಯ ವಿದ್ಯಾರ್ಥಿಗಳಾದ ರಾಘವೇಂದ್ರ ಕುಲಕರ್ಣಿ, ಚಂದ್ರಶೇಖರ್ ತಮ್ಮ ಅನಿಸಿಕೆಗನ್ನು ವ್ಯಕ್ತಪಡಿಸಿದರು.

ಈ ವೇಳೆ ನಿವೃತ್ತ ಶಿಕ್ಷಕಿಯರಾದ ಶೈಲಜಾ, ಉಷಾ, ಸೌಭಾಗ್ಯ ಹಳೆಯ ವಿದ್ಯಾರ್ಥಿಗಳಾದ ಸುಧೀಂದ್ರ ಕುಲಕರ್ಣಿ, ಶರಣಬಸವ ದೇಸಾಯಿ, ಟಿಕಾರಾವ್ ಮುಜಿಮದಾರ್, ರವಿ ವರ್ಮಾ, ನಾಗಬಾಬು, ಶ್ರೀದೇವಿ ವೈದ್ಯ, ರೇಣುಕಾ ಪಾಟೀಲ, ಲಕ್ಷ್ಮೀ, ಶಶಿಕಲಾ ಜೋಶಿ, ಬಸವರಾಜೇಶ್ವರಿ ಉಪಸ್ಥಿತರಿದ್ದರು. ಲಲಿತಾ ಪ್ರಾರ್ಥಿಸಿದರು, ಅಶ್ವಿನಿ ಪುರೋಹಿತ ಸ್ವಾಗತಿಸಿ, ನಿರೂಪಿಸಿದರು. ಚಂದ್ರಶೇಖರ ವಂದಿಸಿದರು.