ದೇಶದ ಸ್ವಾತಂತ್ರಕ್ಕಾಗಿ ದುಡಿದ 140 ವರ್ಷಗಳ ಇತಿಹಾಸವಿರುವ ಕಾಂಗ್ರೆಸ್ ಪಕ್ಷವನ್ನು ದೇಶದಿಂದ ಮುಕ್ತ ಮಾಡುತ್ತೇವೆ ಎಂಬುದು ಭ್ರಮೆ.ಆರಂಭದಿಂದ ಇಲ್ಲಿಯವರೆಗೂ ದೇಶದ ಎಲ್ಲಾ ಧರ್ಮ, ಜಾತಿಯ ಜನರನ್ನು ಸಮಾನವಾಗಿ ಕಾಣುವ ಪಕ್ಷ ಎಂದರೆ ಆದು ಕಾಂಗ್ರೆಸ್ ಮಾತ್ರ ಎಂದು ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಜಿ.ಚಂದ್ರಶೇಖರಗೌಡ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ತುಮಕೂರುದೇಶದ ಸ್ವಾತಂತ್ರಕ್ಕಾಗಿ ದುಡಿದ 140 ವರ್ಷಗಳ ಇತಿಹಾಸವಿರುವ ಕಾಂಗ್ರೆಸ್ ಪಕ್ಷವನ್ನು ದೇಶದಿಂದ ಮುಕ್ತ ಮಾಡುತ್ತೇವೆ ಎಂಬುದು ಭ್ರಮೆ.ಆರಂಭದಿಂದ ಇಲ್ಲಿಯವರೆಗೂ ದೇಶದ ಎಲ್ಲಾ ಧರ್ಮ, ಜಾತಿಯ ಜನರನ್ನು ಸಮಾನವಾಗಿ ಕಾಣುವ ಪಕ್ಷ ಎಂದರೆ ಆದು ಕಾಂಗ್ರೆಸ್ ಮಾತ್ರ ಎಂದು ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಜಿ.ಚಂದ್ರಶೇಖರಗೌಡ ತಿಳಿಸಿದ್ದಾರೆ. ನಗರದ ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಪಕ್ಷದ 140 ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಸಂವಿಧಾನದ ಆಶಯದಂತೆ ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂಬ ನೀತಿಯನ್ನುಕಾಂಗ್ರೆಸ್ ಅನುಸರಿಸಿಕೊಂಡು ಬಂದಿದೆ. ಸಾರಿಗೆ, ಬ್ಯಾಂಕುಗಳ ರಾಷ್ಟೀಕರಣ, ಉಳುವವನೇ ಭೂಮಿಯ ಒಡೆಯ ಇನ್ನಿತರ ಕಾಯ್ದೆಗಳು ಬಡವರು ಶ್ರೀಮಂತರ ನಡುವಿನ ತಾರತಮ್ಯವನ್ನು ಕಡಿಮೆ ಮಾಡುವಲ್ಲಿ ಸಹಕಾರಿಯಾಗಿದ್ದವು. ಆದರೆ ಇಂದಿನ ಪ್ರಧಾನಿಯ ಯೋಜನೆಗಳು ಬಡವರು ಮತ್ತು ಶ್ರೀಮಂತರ ನಡುವಿನ ಅಂತರವನ್ನು ಮತ್ತಷ್ಟು ಹೆಚ್ಚಿಸಿದೆ ಎಂದರು.ಮಾಜಿ ಶಾಸಕ ಡಾ.ಎಸ್.ಷಪಿ ಅಹಮದ್ ಮಾತನಾಡಿ, ಕಾಂಗ್ರೆಸ್‌ ಕಾರ್ಯಕರ್ತರು ಪಕ್ಷದ ಹುಟ್ಟಿನ ಹಿಂದಿರುವ ಮಹತ್ವವನ್ನುಅರ್ಥ ಮಾಡಿಕೊಳ್ಳಬೇಕು. ಪಕ್ಷ ನಿಷ್ಠರಾಗಿದ್ದರೆ ಒಂದಿಲ್ಲೊಂದು ದಿನ ಅಧಿಕಾರ ನಿಮ್ಮನ್ನು ಹುಡುಕಿಕೊಂಡು ಬರಲಿದೆ. ಅಧಿಕಾರಕ್ಕೆ ಇದುವರೆಗೂ ಬದುಕು ನೀಡಿದ ಪಕ್ಷಕ್ಕೆ ದ್ರೋಹ ಬಗೆಯಬಾರದು.ಪಕ್ಷ ಕಟ್ಟುವತ್ತ ನಾವೆಲ್ಲರೂ ಗಮನಹರಿಸಬೇಕಾಗಿದೆ ಎಂದರು.ಜಿ.ಪಂ.ಮಾಜಿ ಅಧ್ಯಕ್ಷ ಹಾಗೂ ಡಿಸಿಸಿ ಮಾಜಿ ಅಧ್ಯಕ್ಷ ಕೆಂಚಮಾರಯ್ಯ ಮಾತನಾಡಿ, ಬ್ರಿಟಿಷರ ದಬ್ಬಾಳಿಕೆಯನ್ನು ಕೊನೆಗಾಣಿಸುವ ಉದ್ದೇಶದಿಂದ ಮೋತಿಲಾಲ್ ನೆಹರು, ಗೋಖಲೆ ಸೇರಿದಂತೆ ಹಲವು ನಾಯಕರು ಸೇರಿ ಎ.ಓ,ಹ್ಯೂಮ್‌ ಎನ್ನುವ ಬ್ರಿಟಿಷ್‌ ಅಧಿಕಾರಿ ಮುಂದಾಳತ್ವದಲ್ಲಿ 1885 ರಲ್ಲಿ ಕಾಂಗ್ರೆಸ್‌ ಕಟ್ಟಿದರು. ಗಾಂಧಿ ಆಗಮನವದವರೆಗೂ ತೀವ್ರಗಾಮಿ ಸ್ವರೂಪದಲ್ಲಿದ್ದ ಚಳವಳಿ, ಸತ್ಯ, ಅಹಿಂಸೆ, ಶಾಂತಿ ಎಂಬ ಮೂರು ಅಂಶಗಳ ಮೇಲೆ ರೂಪಗೊಂಡು, ಬ್ರಿಟಿಷರನ್ನು ಭಾರತದಿಂದ ತೊಲಗಿಸಲು ಸಹಾಯವಾಯಿತು. ಆದರೆ ಇಂದು ದೇಶದ ಜನರು ಗಾಂಧಿ ಹೆಸರು ಹೇಳಲು ಹಿಂಜರಿಯವಂತಹ ವಾತಾವರಣ ಸೃಷ್ಟಿಯಾಗಿದೆ ಎಂದರು. ಮುಖಂಡರಾದ ಇಕ್ಬಾಲ್‌ ಅಹಮದ್ ಮಾತನಾಡಿ, ಎಸ್.ಐ.ಆರ್.ಮೂಲಕ ಕಾಂಗ್ರೆಸ್ ಬೆಂಬಲಿಗರ ಮತ ಕಸಿಯುವ ಪ್ರಯತ್ನಕ್ಕೆ ಅವಕಾಶ ನೀಡದೆ ಮತದಾರರ ಪಟ್ಟಿ ಪರಿಷ್ಕರಣೆಯನ್ನುಎಚ್ಚರಿಕೆಯಿಂದ ಗಮನಿಸಿ, ಪ್ರತಿ ಮತದಾರರ ಹಕ್ಕನ್ನುರಕ್ಷಿಸಬೇಕಾಗಿದೆ ಎಂದರು. ಮಹಿಳಾ ಮುಖಂಡರಾದ ಡಾ.ಅರುಂಧತಿ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್‌ನನ್ನು ಬಲಗೊಳಿಸಲು ನಾವೆಲ್ಲರೂ ಪ್ರಯತ್ನಿಸಬೇಕಾಗಿದೆ ಎಂದರು. ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ . ಪರಮೇಶ್ವರ್‌. ಕೆಪಿಸಿಸಿ ರಾಜ್ಯಉಪಾಧ್ಯಕ್ಷ ಆರ್.ರಾಮಕೃಷ್ಣ, ಗ್ರಾಮಾಂತರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಕೆಂಪಣ್ಣ,ಪಾಲಿಕೆ ಮಾಜಿ ಉಪಮೇಯರ್‌ ಅಸ್ಲಾಂಪಾಷ, ಮಾಜಿ ಶಾಸಕ ಗಂಗಹನುಮಯ್ಯ ಸೇರಿದಂತೆ ಹಲವರು ಮಾತನಾಡಿದರು.

ಕಾರ್ಯಕ್ರಮದಲ್ಲಿ ಯುವಕಾಂಗ್ರೆಸ್ ಮುಖಂಡಜೈನ್ ಷೇಕ್ ಫಯಾಜ್, ಜಿಲ್ಲಾಉಪಾಧ್ಯಕ್ಷ ರಂಗಸ್ವಾಮಯ್ಯ ಸಿದ್ದಾಪುರ,ನರಸೀಯಪ್ಪ, ಬಿ.ಜಿ.ಲಿಂಗರಾಜು,ಶಿವಾಜಿ, ಅತೀಕ್‌ಅಹಮದ್,ಸುಜಾತ,ವಿಜಯಲಕ್ಷ್ಮಿ, ಮುಬೀನ, ಭಾಗ್ಯ, ಜಯಮೂರ್ತಿ,ಸೇವಾದಳದ ಬೈಲಪ್ಪ ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.