ಮಹಿಳೆ ಅಡುಗೆ ಮನೆಗೆ ಸೀಮಿತಳೆಂಬುದು ಹಳಸು ಮಾತು

| Published : Sep 10 2024, 01:47 AM IST

ಸಾರಾಂಶ

ಮಹಿಳೆ ಅಡುಗೆ ಮನೆಗೆ ಸೀಮಿತಳೆಂಬುದು ಈಗ ಹಳಸು ಮಾತು. ಆಧುನಿಕ ಜಗತ್ತಿನಲ್ಲಿ ಆಕೆ ಎಲ್ಲ ರಂಗಗಳಲ್ಲಿಯೂ ಸಬಲಳು ಎಂಬುದನ್ನು ಸಾಬೀತುಪಡಿಸಿದ್ದಾಳೆಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ದಿನೇಶ್ ಪೂಜಾರಿ ಹೇಳಿದರು. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಸಿರಿಗೆರೆ ಯೋಜನಾ ಕಚೇರಿ ವ್ಯಾಪ್ತಿಯ ಗುತ್ತಿನಾಡು ವಲಯದ ಸೀಬಾರ ಕಾರ್ಯಕ್ಷೇತ್ರದಲ್ಲಿ ಸರಸ್ವತಿ ನೂತನ ಜ್ಞಾನವಿಕಾಸ ಕೇಂದ್ರ ಉದ್ಘಾಟಿಸಿ ಅವರು ಮಾತನಾಡಿದರು.

ಕನ್ನಡಪ್ರಭವಾರ್ತೆ ಚಿತ್ರದುರ್ಗಮಹಿಳೆ ಅಡುಗೆ ಮನೆಗೆ ಸೀಮಿತಳೆಂಬುದು ಈಗ ಹಳಸು ಮಾತು. ಆಧುನಿಕ ಜಗತ್ತಿನಲ್ಲಿ ಆಕೆ ಎಲ್ಲ ರಂಗಗಳಲ್ಲಿಯೂ ಸಬಲಳು ಎಂಬುದನ್ನು ಸಾಬೀತುಪಡಿಸಿದ್ದಾಳೆಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ದಿನೇಶ್ ಪೂಜಾರಿ ಹೇಳಿದರು. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಸಿರಿಗೆರೆ ಯೋಜನಾ ಕಚೇರಿ ವ್ಯಾಪ್ತಿಯ ಗುತ್ತಿನಾಡು ವಲಯದ ಸೀಬಾರ ಕಾರ್ಯಕ್ಷೇತ್ರದಲ್ಲಿ ಸರಸ್ವತಿ ನೂತನ ಜ್ಞಾನವಿಕಾಸ ಕೇಂದ್ರ ಉದ್ಘಾಟಿಸಿ ಅವರು ಮಾತನಾಡಿದರು.

ಮಹಿಳೆಯರ ಆರ್ಥಿಕ ಬೆಳವಣಿಗೆಗಾಗಿ ಹೇಮಾವತಿ ಅಮ್ಮನವರು 1993 ರಲ್ಲಿ ಜ್ಞಾನವಿಕಾಸ ಕೇಂದ್ರ ಆರಂಭಿಸಿದರು. ನಮ್ಮ ಸಂಘದಿಂದ ಪ್ರತಿ ತಿಂಗಳು ಮಹಿಳೆಯರಿಗೆ ಉತ್ತಮವಾದ ಮಾಹಿತಿ ನೀಡುವ ಕಾರ್ಯಕ್ರಮವನ್ನು ನಡೆಸಿಕೊಂಡು ಬರಲಾಗುತ್ತಿದೆ. ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಮಹಿಳೆಯರು ಸಮಾಜದ ಮುಖ್ಯವಾಹಿನಿಗೆ ಬರಬೇಕೆಂದು ದಿನೇಶ್ ಪೂಜಾರಿ ತಿಳಿಸಿದರು.ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಆರ್. ನರಸಿಂಹರಾಜು ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಗ್ರಾಮೀಣ ಭಾಗದ ಮಹಿಳೆಯರನ್ನು ಸ್ವಾವಲಂಭಿಯನ್ನಾಗಿ ಮಾಡುವುದಕ್ಕಾಗಿ ಅನೇಕ ಕಾರ್ಯಕ್ರಮ ರೂಪಿಸಿದೆ. ಬ್ಯಾಂಕಿನ ಮೂಲಕ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗಡೆರವರು ಮಹಿಳೆಯರಿಗೆ ಸಾಲಗಳು ಸಿಗುವಂತ ವ್ಯವಸ್ಥೆ ಕಲ್ಪಿಸಿದ್ದಾರೆ. ನೂತನ ಜ್ಞಾನ ವಿಕಾಸ ಕೇಂದ್ರದ ಮಹಿಳೆಯರು ಇದರ ಸದುಪಯೋಗಪಡಿಸಿಕೊಳ್ಳುವಂತೆ ಕರೆ ನೀಡಿದರು.ಯೋಜನಾಧಿಕಾರಿ ರವಿಚಂದ್ರ ಜ್ಞಾನವಿಕಾಸ ಹಾಗೂ ವಾತ್ಸಲ್ಯ ಕಾರ್ಯಕ್ರಮದ ಬಗ್ಗೆ ಜ್ಞಾನವಿಕಾಸ ಕೇಂದ್ರದ ಮಹಿಳೆಯರಲ್ಲಿ ಅರಿವು ಮೂಡಿಸಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ, ತಿಪ್ಪಮ್ಮ, ಸಾಕಮ್ಮ, ಜ್ಞಾನವಿಕಾಸ ಸಮನ್ವಯಾಧಿಕಾರಿ ಶಿವಲೀಲಾ ಎಸ್. ಬಾಗೋಡಿ, ಪ್ರಮೋದಿನಿ, ಅಂಬಿಕಾ, ರೇಣುಕಾ ಇದ್ದರು.