ತಾಯಿಗಿಂತ ಮಿಗಿಲಾದ ದೇವರಿಲ್ಲ ಎಂಬುದು ಸೂರ್ಯನಷ್ಟೇ ಸತ್ಯ

| Published : May 11 2025, 01:32 AM IST

ತಾಯಿಗಿಂತ ಮಿಗಿಲಾದ ದೇವರಿಲ್ಲ ಎಂಬುದು ಸೂರ್ಯನಷ್ಟೇ ಸತ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಇದೀಗ ಶಾಲೆಗಳಿಗೆ ಬಹುತೇಕ ರಜೆ ಇದ್ದು ಆದರೆ ಪಟ್ಟಣದ ಪಿನಿಕ್ಸ್ ಇಂಟರ್‌ನ್ಯಾಷನಲ್ ಶಾಲೆಯಲ್ಲಿನ ಮಕ್ಕಳು ವಿಶೇಷವಾದ ದಿನವಾಗಿರುವ ಶನಿವಾರ ವಿಶ್ವತಾಯಂದಿರ ದಿನ ಆಚರಿಸಲು ಶಾಲೆಯಲ್ಲಿ ಸೇರಿ ತಮ್ಮ ತಾಯಂದಿರ ಪಾದಪೂಜೆ ನೆರವೇರಿಸಿ ತಾಯಿಯ ಆಶೀರ್ವಾದ ಪಡೆದುಕೊಳ್ಳುವ ಅಪರೂಪದ ದೃಶ್ಯ ಕಂಡುಬಂದಿತು.

ಲಕ್ಷ್ಮೇಶ್ವರ:ಇದೀಗ ಶಾಲೆಗಳಿಗೆ ಬಹುತೇಕ ರಜೆ ಇದ್ದು ಆದರೆ ಪಟ್ಟಣದ ಪಿನಿಕ್ಸ್ ಇಂಟರ್‌ನ್ಯಾಷನಲ್ ಶಾಲೆಯಲ್ಲಿನ ಮಕ್ಕಳು ವಿಶೇಷವಾದ ದಿನವಾಗಿರುವ ಶನಿವಾರ ವಿಶ್ವತಾಯಂದಿರ ದಿನ ಆಚರಿಸಲು ಶಾಲೆಯಲ್ಲಿ ಸೇರಿ ತಮ್ಮ ತಾಯಂದಿರ ಪಾದಪೂಜೆ ನೆರವೇರಿಸಿ ತಾಯಿಯ ಆಶೀರ್ವಾದ ಪಡೆದುಕೊಳ್ಳುವ ಅಪರೂಪದ ದೃಶ್ಯ ಕಂಡುಬಂದಿತು.

ಶನಿವಾರ ಶಾಲೆಯಲ್ಲಿ ಅಂಧ ಚಂದದ ಉಡುಗೆಗಳನ್ನು ತೊಟ್ಟ ಮಕ್ಕಳು ತಮ್ಮ ತಾಯಂದಿರೊಂದಿಗೆ ಆಗಮಿಸಿದರು. ಕಾರ್ಯಕ್ರಮಕ್ಕೆ ಹಿರಿಯ ತಾಯಂದಿರಾದ ಈರುಬಾಯಿ ಕೊಟಗಿ, ನಿರ್ಮಲಾ ಹತ್ತಿಕಾಳ ಚಾಲನೆ ನೀಡಿದರು. ನಂತರ ನಿರ್ದೇಶಕ ರಾಜಶೇಖರಯ್ಯ ಹಾಲೇವಾಡಿಮಠ ಅವರು ಸಂಪ್ರದಾಯದಂತೆ ವೇಧಘೋಷ ಹೇಳುತ್ತಾ ಮಕ್ಕಳಿಂದ ತಾಯಂದಿರ ಪಾದಪೂಜೆ ನೆರವೇರಿಸಿದರು.

ಈ ವೇಳೆ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಮಲ್ಲಿಕಾರ್ಜುನ ಕೊಟಗಿ ಮತ್ತು ನಿರ್ದೇಶಕ ವಿಜಯ ಹತ್ತಿಕಾಳ ಮಾತನಾಡಿ ನಮ್ಮನ್ನು ಈ ಜಗತ್ತಿಗೆ ತರುವ ತಾಯಿಗೆ ಗೌರವ ಹಾಗೂ ಪ್ರೀತಿ ತೋರಿಸಲು ಯಾವುದೇ ವಿಶೇಷ ದಿನ ಅಗತ್ಯವಿಲ್ಲ. ತಾಯಿ ಎಂದರೆ ವಿಶೇಷ ಆದರೆ ತಾಯಂದಿರ ದಿನ ನಮ್ಮ ಭಾವನೆ ವ್ಯಕ್ತಪಡಿಸಲು ವಿಶ್ವತಾಯಂದಿರ ದಿನಾಚರಣೆ ಆಚರಿಸುತ್ತಿದ್ದು, ಮುಖ್ಯವಾಗಿ ನಮ್ಮ ಮಕ್ಕಳಿಗೆ ನಮ್ಮ ಸಂಸ್ಕಾರ, ಸಂಸ್ಕೃತಿ, ಸಂಪ್ರದಾಯ ಕಲಿಸುವ ಕಾರ್ಯವಾಗಬೇಕಾಗಿದೆ, ತಾಯಿಯ ಪ್ರೀತಿಗೆ ಸರಿಸಾಟಿ ಇಲ್ಲ. ತಾಯಿ ತನ್ನ ಮಕ್ಕಳನ್ನು ಪ್ರೀತಿಸುವಷ್ಟು ಯಾರು ಕೂಡ ಪ್ರೀತಿಸಲು ಸಾಧ್ಯವಿಲ್ಲ. ತಾಯಿಯ ಪ್ರೀತಿ, ತ್ಯಾಗಕ್ಕೆ ಮಕ್ಕಳು ಏನೇ ಮಾಡಿದರೂ ಕಡಿಮೆ. ಆಕೆಯ ಋಣ ತೀರಿಸಲು ಎಂದಿಗೂ ಸಾಧ್ಯವಿಲ್ಲ. ನಮ್ಮನ್ನು ಈ ಜಗತ್ತಿಗೆ ತರುವ ತಾಯಿಗೆ ಗೌರವ ಹಾಗೂ ಪ್ರೀತಿಯನ್ನು ತೋರಿಸಲು ನಮಗೆ ಯಾವುದೇ ವಿಶೇಷ ದಿನ ಅಗತ್ಯವಿಲ್ಲ ಎಂದ ಅವರು ಸಂಸ್ಥೆಯಲ್ಲಿ ಮಕ್ಕಳಿಗೆ ಇಂತಹ ಸಂಪ್ರದಾಯ ಬಿತ್ತಿ ಬೆಳೆಸುವ ಕಾರ್ಯ ಮಾಡಲಾಗುತ್ತದೆ. ತಂದೆ ತಾಯಿಯರ ಮೇಲಿನ ಭಕ್ತಿ ಮಕ್ಕಳಿಗೆ ಸದಾ ಇರುವಂತಾಗಲಿ, ತಾಯಂದಿರ ಹಾರೈಕೆ ಮಕ್ಕಳಿಗೆ ಸದಾ ದೊರಕಲಿ ಎಂದು ಹೇಳಿದರು. ನಿರ್ದೇಶಕ ಚಂದ್ರಶೇಖರ ಕಗ್ಗಲಗೌಡ್ರ ಸ್ಪರ್ಧಾತ್ಮಕ ಪರೀಕ್ಷೆಯ ಪರಿಚಯ ಮಾಡಿಕೊಟ್ಟರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ದೀಪಾ ಹತ್ತಿಕಾಳ ವಹಿಸಿದ್ದರು. ಸಂಸ್ಥೆಯ ಸಂಗಪ್ಪ ಕೊಣ್ಣೂರ, ಶಿವಯೋಗಿ ಗಾಂಜಿ, ಕಿರಣ ನಾಲವಾಡ, ಶೋಭಾ ಗಾಂಜಿ, ಸಹನಾ ಮುಂಜಿ, ಮಂಜುಳಾ ಹೊನ್ನಪ್ಪನವರು ಇದ್ದರು. ಶಿಕ್ಷಕಿ ಶೈಲಾ ಕೊಣ್ಣೂರ ಸ್ವಾಗತಿಸಿದರು. ಮಂಗಳಾ ಹುಲಮನಿ ವಂದಿಸಿದರು. ವಿದ್ಯಾರ್ಥಿ ಪ್ರೀತಿ, ಲಾವಣ್ಯ, ಈಶ್ವರಿ ಹಾಗೂ ಶಿವರಾಜ ಬಡ್ನಿ ನಿರೂಪಿಸಿದರು.