ಸ್ವಾವಲಂಬನೆಗೆ ದಾರಿ ಒದಗಿಸಿದ್ದು ಶ್ಲಾಘನೀಯ

| Published : Sep 10 2024, 01:45 AM IST

ಸಾರಾಂಶ

ಜಾತಿ ಭೇದವಿಲ್ಲದೇ ಸರ್ವ ಧರ್ಮದ ಮಹಿಳೆಯರಿಗೂ ಉಚಿತ ಉದ್ಯೋಗ ತರಬೇತಿ ನೀಡಿ ಅವರ ಸ್ವಾವಲಂಬನೆ ಮತ್ತು ಸ್ವಾಭಿಮಾನದ ಬದುಕಿಗೆ ದಾರಿಯಾಗುತ್ತಿರುವ ಸ್ಫೂರ್ತಿ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದು ಸ್ಥಳೀಯ ಸಿದ್ಧಾರೂಢ ಬ್ರಹ್ಮವಿದ್ಯಾಶ್ರಮದ ಸಹಜಾನಂದ ಸ್ವಾಮೀಜಿ ನುಡಿದರು.

ಕನ್ನಡಪ್ರಭ ವಾರ್ತೆ ಮಹಾಲಿಂಗಪುರ

ಜಾತಿ ಭೇದವಿಲ್ಲದೇ ಸರ್ವ ಧರ್ಮದ ಮಹಿಳೆಯರಿಗೂ ಉಚಿತ ಉದ್ಯೋಗ ತರಬೇತಿ ನೀಡಿ ಅವರ ಸ್ವಾವಲಂಬನೆ ಮತ್ತು ಸ್ವಾಭಿಮಾನದ ಬದುಕಿಗೆ ದಾರಿಯಾಗುತ್ತಿರುವ ಸ್ಫೂರ್ತಿ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದು ಸ್ಥಳೀಯ ಸಿದ್ಧಾರೂಢ ಬ್ರಹ್ಮವಿದ್ಯಾಶ್ರಮದ ಸಹಜಾನಂದ ಸ್ವಾಮೀಜಿ ಹೇಳಿದರು.

ಸ್ಥಳೀಯ ಸ್ಫೂರ್ತಿ ಗ್ರಾಮೀಣಾಭಿವೃದ್ಧಿ ಸಂಸ್ಥೆ, ಸ್ಥಳೀಯ ಸಿದ್ಧಾರೂಢ ಬ್ರಹ್ಮವಿದ್ಯಾಶ್ರಮದ ಸಭಾಭವನದಲ್ಲಿ ಜರುಗಿದ ಮಹಿಳೆಯರಿಗೆ ಉಚಿತ ಸ್ವಯಂ ಉದ್ಯೋಗ ತರಬೇತಿ ಶಿಬಿದರದ ಸವಿಭೋಜನ ಕಾರ್ಯಕ್ರಮದಲ್ಲಿ ಮಾತನಾಡಿದರು.ಪುರಸಭೆ ಉಪಾಧ್ಯಕ್ಷೆ ಶೀಲಾ ಭಾವಿಕಟ್ಟಿ ಮಾತನಾಡಿ, ಶಿಬಿರದಲ್ಲಿ ತರಬೇತಿ ಪಡೆದ ಅರ್ಹ ಮಹಿಳೆಯರಿಗೆ ಪುರಸಭೆಯಿಂದ ಸಹಾಯದ ಭರವಸೆ ನೀಡಿದರು.

ಪುರಸಭಾ ಮಾಜಿ ಉಪಾಧ್ಯಕ್ಷ ಚನ್ನಬಸು ಹುರಕಡ್ಲಿ ಮಾತನಾಡಿದರು. ಪುರಸಭೆ ಮುಖ್ಯಾಧಿಕಾರಿ ಈರಣ್ಣ ದಡ್ಡಿ, ಬಸವರಾಜ ಬಳಗಾರ, ವಿಜಯ ತಮದಡ್ಡಿ, ಪತ್ರಕರ್ತ ನಾರಣಗೌಡ ಉತ್ತಂಗಿ ಮಾತನಾಡಿದರು. ಚಿದಾನಂದ ಮಠಪ, ಶಿವಾನಂದ ಕೊಣ್ಣೂರ ಇತರರಿದ್ದರು. ಕಾನಿಪ ಅಧ್ಯಕ್ಷ ಮಹೇಶ ಮನ್ನಯ್ಯನವರಮಠ ಅಧ್ಯಕ್ಷತೆ ವಹಿಸಿ, ತರಬೇತುದಾರ ಎಂ.ಗುಡ್ಡಪ್ಪ ಸ್ವಾಗತಿಸಿ, ನಿರೂಪಿಸಿದರು.