ಸಂವಿಧಾನ ಬದಲಾವಣೆ ಮಾಡಲು ಹೊರಟಿರುವುದು ಖಂಡನೀಯ

| Published : Apr 15 2024, 01:23 AM IST

ಸಂವಿಧಾನ ಬದಲಾವಣೆ ಮಾಡಲು ಹೊರಟಿರುವುದು ಖಂಡನೀಯ
Share this Article
  • FB
  • TW
  • Linkdin
  • Email

ಸಾರಾಂಶ

ಭಾರತದ ಧರ್ಮ ಗ್ರಂಥವಾಗಿರುವ ಸಂವಿಧಾನವನ್ನು ಕೆಲ ಕಿಡಿಗೇಡಿಗಳು ವಿರೋಧಿಸುವ ಮೂಲಕ ಬದಲಾವಣೆ ಮಾಡಲು ಹೊರಟಿರುವುದು ಖಂಡನೀಯ. ನಮ್ಮ.ಸಂವಿಧಾನ ರಕ್ಷಿಸುವ ಹೊಣೆ ಪ್ರತಿಯೊಬ್ಬ ಭಾರತೀಯರದ್ದು ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.

ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ 133ನೇ ಜಯಂತಿ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ, ಕಡೂರು.

ಭಾರತದ ಧರ್ಮ ಗ್ರಂಥವಾಗಿರುವ ಸಂವಿಧಾನವನ್ನು ಕೆಲ ಕಿಡಿಗೇಡಿಗಳು ವಿರೋಧಿಸುವ ಮೂಲಕ ಬದಲಾವಣೆ ಮಾಡಲು ಹೊರಟಿರುವುದು ಖಂಡನೀಯ. ನಮ್ಮ.ಸಂವಿಧಾನ ರಕ್ಷಿಸುವ ಹೊಣೆ ಪ್ರತಿಯೊಬ್ಬ ಭಾರತೀಯರದ್ದು ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.

ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಭಾನುವಾರ ಆಯೋಜಿಸಿದ್ದ ಡಾ.ಅಂಬೇಡ್ಕರ್ ಅವರ 133ನೇ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪ್ರಪಂಚದಲ್ಲಿ ಭಾರತದ ಸಂವಿಧಾನಕ್ಕೆ ವಿಶೇಷವಾದ ಗೌರವ, ಘನತೆಯಿದ್ದು ಅಂಬೇಡ್ಕರ್ ಅವರ ಸತತ ಪ್ರಯತ್ನದಿಂದ ದೇಶದ ಪ್ರಾದೇಶಿಕ ಅಸಮಾನತೆ ಸರಿದೂಗಿಸಿ, ಬಡವ, ಬಲ್ಲಿದ ಮೇಲು, ಕೀಳೆಂಬ ಬೇಧ ಭಾವವನ್ನುಸ್ವತಹ ಅನುಭವಿಸುವ ಮೂಲಕ ಸತ್ಯವನ್ನು ಅರಿತು ರಚಿಸಿರುವ ಈ ಸಂವಿಧಾನ ಅತ್ಯಂತ ಶ್ರೇಷ್ಠವಾಗಿದೆ ಆದ್ದರಿಂದ ಇದನ್ನು ಭಾರತದ ಧರ್ಮಗ್ರಂಥ ಎಂದು ಕರೆಯಬಹುದಾಗಿದೆ ಎಂದರು.

ಕೆಲವು ಕಿಡಿಗೇಡಿಗಳು ಸಂವಿಧಾನ ವಿರೋಧಿಸುತ್ತಿದ್ದು ಬದಲಾವಣೆ ಮಾಡಲು ಹೊರಟಿರುವುದು ಸಂವಿಧಾನಕ್ಕೆ ಮಾಡುವ ಅಪಮಾನವಾಗಿದೆ. ಸಂವಿಧಾನವನ್ನು ರಕ್ಷಿಸುವ ಹೊಣೆ ಪ್ರತಿಯೊಬ್ಬ ಭಾರತೀಯರದ್ದಾಗಬೇಕು ಆಗ ಮಾತ್ರ ಅಂಬೇಡ್ಕರ್ ಕಂಡ ಕನಸು ಸಕಾರಗೊಳ್ಳುತ್ತವೆ ಎಂದರು. ಪುರಸಭೆ ಮಾಜಿ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಮಾತನಾಡಿ ಸಂವಿಧಾನದಡಿ ಎಲ್ಲರಿಗೂ ನ್ಯಾಯ ದೊರಕುತ್ತಿದ್ದು, ಸಮಾನತೆ ಕಾಣಲು ಸಾಧ್ಯವಾಗಿದೆ. ಅಂಬೇಡ್ಕರ್ ಆದರ್ಶ ಮತ್ತು ಮಾರ್ಗದರ್ಶನ ಅವರ ಜೀವನ ಚರಿತ್ರೆಯನ್ನು ಯುವಕರು ಓದಿ ತಿಳಿದುಕೊಂಡು ಪಾಲಿಸಬೇಕಾಗಿದೆ ಎಂದರು. ಕೆ.ಜಿ.ಶ್ರೀನಿವಾಸಮೂರ್ತಿ, ಇಮ್ರಾನ್,ಯಾಸೀನ್,ದಲಿತ ಸಂಘಟನೆ ಮುಖಂಡರಾದ ಅಂಬೇಡ್ಕರ್ ನಗರ ಶಂಕರ್, ಶ್ರೀಕಾಂತ್, ಚಂದ್ರಶೇಖರ್,ಮಲ್ಲಿಕಾರ್ಜುನ್, ಚಿಕ್ಕಂಗಳ ಲಕ್ಷ್ಮಣ್,ಗಣೇಶ್, ಮಹೇಶ್,ಶ್ರೀನಿವಾಸ್,ಜಯಣ್ಣ, ಟಿ.ಮಂಜಪ್ಪ, ಗೋವಿಂದಪ್ಪ,ಸಚ್ಚಿನ್, ರಾಮಚಂದ್ರಪ್ಪ, ತಿಮ್ಮಪ್ಪ ಮತ್ತಿತರರು ಇದ್ದರು. 14ಕೆಕೆಡಿಯು2.

ಕಡೂರು ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಇರುವ ಅಂಬೇಡ್ಕರ್ ಪ್ರತಿಮೆಗೆ ಶಾಸಕ ಕೆ.ಎಸ್.ಆನಂದ್ ಮಾಲಾರ್ಪಣೆ ಮಾಡಿದರು. ಭಂಡಾರಿ ಶ್ರೀನಿವಾಸ್, ಶಂಕರ್, ದಲಿತ ಸಂಘಟನೆ ಮುಖಂಡರು ಇದ್ದರು.