ರಾಜ್ಯ ಹೆದ್ದಾರಿ 11ರಲ್ಲಿ ಕವಿದ ಕತ್ತಲು

| Published : Aug 20 2024, 12:53 AM IST

ಸಾರಾಂಶ

ಹುಲಸೂರ ತಾಲೂಕು ಕೇಂದ್ರದ ಮಧ್ಯ ಹಾದು ಹೋಗಿರುವ ರಾಜ್ಯ ಹೆದ್ದಾರಿಯಲ್ಲಿ ಕತ್ತಲೆ ಆವರಿಸಿರುವುದು.

ಕನ್ನಡಪ್ರಭ ವಾರ್ತೆ ಹುಲಸೂರತಾಲೂಕು ಕೇಂದ್ರದಿಂದ ಹಾದು ಹೋಗಿರುವ ರಾಜ್ಯ ಹೆದ್ದಾರಿ 11ರ ರಸ್ತೆಯ ಡಿವೈಡರ್ ಮಧ್ಯ ಸುಮಾರು 20 ಕಂಬಗಳು ಅಳವಡಿಸಿದ್ದು, ಕಳೆದ 6 ತಿಂಗಳಿಂದ ಕಂಬದ ದೀಪಗಳು ಬೆಳಕು ನೀಡದ ಕಾರಣ ವಾಹನ ಸವಾರರಿಗೆ ರಾತ್ರಿ ಸಮಯದಲ್ಲಿ ಸಂಕಷ್ಟ ಎದುರಾದಂತಾಗಿದೆ.

ತಾಲೂಕು ಕೇಂದ್ರದಿಂದ ಹಾದೂ ಹೋಗುವ ರಾಜ್ಯ ಹೆದ್ದಾರಿಯ ಮಧ್ಯ ಹಲವಾರು ಗುಂಡಿಗಳು ನಿರ್ಮಾಣವಾಗಿ ಸವಾರರಿಗೆ ಕತ್ತಲಲ್ಲಿ ಕಾಣದೆ ಇರುವುದರಿಂದ ಅನೇಕ ಅಪಘಾತ ಸಂಭವಿಸಿವೆ.

ಲೋಕೋಪಯೋಗಿ ಇಲಾಖೆ ಅಧಿಕಾರಿ ಶೀಘ್ರದಲ್ಲೇ ತಗ್ಗು ಗುಂಡಿಗಳು ಮುಚ್ಚಬೇಕು ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕಳೆದ 6 ತಿಂಗಳಿಂದ ದೀಪ ಬೆಳಗದೆ ಕೆಟ್ಟಿರುವ ವಿದ್ಯುತ್ ದೀಪಗಳನ್ನು ದುರುಸ್ತಿ ಕಾರ್ಯ ಮಾಡುವಂತೆ ವ್ಯಾಪಾರಿಗಳು ಹಲವು ಸಲ ಮನವಿ ಮಾಡಿದ್ದಾರೆ.

ಈಗಲಾದರೂ ತಮ್ಮ ಜವಾಬ್ದಾರಿ ಅರಿತು ಸಮಸ್ಯೆಗೆ ಸ್ಪಂದಿಸುವಂತೆ ಮಾರುಕಟ್ಟೆ ವ್ಯಾಪಾರಿಗಳಾದ ಸೋಮನಾಥ ಕಾಡಾದಿ, ನಾಗರಾಜ ಕೋರೆ, ಅನಂತ ಹಾರಕುಡೆ, ನಾಗರಾಜ ಭೊಪಳೆ, ಸುನೀಲ ಕಾಡಾದಿ, ಸಂತೋಷ ಮೊರೆ, ಸಕ್ಲೇಶ ಕಾಡಾದಿ ಸೇರಿದಂತೆ ಹಲವರು ಆಗ್ರಹಿಸಿದರು.