ಸಾರಾಂಶ
ರಾಜ್ಯ ಸರ್ಕಾರ ನೀಡುತ್ತಿರುವ ಎಂಟು ವರ್ಷಗಳ ಹಳೆಯ ದರದಲ್ಲೇ ಸರ್ಕಾರಿ ಶಾಲಾ ಮಕ್ಕಳಿಗೆ ಗುಣಮಟ್ಟದ ಶೂ, ಸಾಕ್ಸ್ ಖರೀದಿ ಸಾಧ್ಯವಾಗದ ಕಾರಣ ಶಾಲಾ ಎಸ್‌ಡಿಎಂಸಿ ಪ್ರತಿನಿಧಿಗಳು ಹಾಗೂ ಮುಖ್ಯ ಶಿಕ್ಷಕರು ಹೆಚ್ಚುವರಿ ಅನುದಾನಕ್ಕಾಗಿ ದಾನಿಗಳ ಹುಡುಕಾಟಕ್ಕಿಳಿದಿದ್ದಾರೆ. ಇನ್ನೂ ಒಂದಷ್ಟು ಶಾಲೆಗಳಲ್ಲಿ ದಾನಿಗಳು ಸಿಗದೆ ಪೋಷಕರಿಗೇ ಹೆಚ್ಚುವರಿ ಹಣಕ್ಕೆ ಬೇಡಿಕೆ ಇಡುತ್ತಿವೆ.
ಲಿಂಗರಾಜು ಕೋರಾ
ಕನ್ನಡಪ್ರಭ ವಾರ್ತೆ ಬೆಂಗಳೂರುರಾಜ್ಯ ಸರ್ಕಾರ ನೀಡುತ್ತಿರುವ ಎಂಟು ವರ್ಷಗಳ ಹಳೆಯ ದರದಲ್ಲೇ ಸರ್ಕಾರಿ ಶಾಲಾ ಮಕ್ಕಳಿಗೆ ಗುಣಮಟ್ಟದ ಶೂ, ಸಾಕ್ಸ್ ಖರೀದಿ ಸಾಧ್ಯವಾಗದ ಕಾರಣ ಶಾಲಾ ಎಸ್‌ಡಿಎಂಸಿ ಪ್ರತಿನಿಧಿಗಳು ಹಾಗೂ ಮುಖ್ಯ ಶಿಕ್ಷಕರು ಹೆಚ್ಚುವರಿ ಅನುದಾನಕ್ಕಾಗಿ ದಾನಿಗಳ ಹುಡುಕಾಟಕ್ಕಿಳಿದಿದ್ದಾರೆ. ಇನ್ನೂ ಒಂದಷ್ಟು ಶಾಲೆಗಳಲ್ಲಿ ದಾನಿಗಳು ಸಿಗದೆ ಪೋಷಕರಿಗೇ ಹೆಚ್ಚುವರಿ ಹಣಕ್ಕೆ ಬೇಡಿಕೆ ಇಡುತ್ತಿವೆ.ಪ್ರತಿ ವಿದ್ಯಾರ್ಥಿಗೆ ಗುಣಮಟ್ಟ ಶೂ, ಸಾಕ್ಸ್ ಖರೀದಿಸಿಬೇಕಾದರೆ ಸರ್ಕಾರ ನೀಡುತ್ತಿರುವ ಹಣದ ಜೊತೆಗೆ ತಲಾ 100 ರು.ವರೆಗೆ ಹೆಚ್ಚುವರಿ ಹಣ ನೀಡುವಂತೆ ದಾನಿಗಳು, ಸಂಘ-ಸಂಸ್ಥೆಗಳು ಹಾಗೂ ಪೋಷಕರ ಬಳಿಕ ಶಾಲಾ ಮುಖ್ಯಶಿಕ್ಷಕರು, ಎಸ್‌ಡಿಎಂಸಿಗಳ ಪ್ರತಿನಿಧಿಗಳು ಕೋರುತ್ತಿರುವುದು ರಾಜ್ಯದ ವಿವಿಧ ಶಾಲೆಗಳಲ್ಲಿ ಕಂಡುಬರುತ್ತಿದೆ.ವಿವರ 4--ಹಳೆ ದರದಲ್ಲೇ ಖರೀದಿ
ಸಾಧ್ಯ: ಅಧಿಕಾರಿಗಳುಪ್ರತಿ ಶಾಲೆಯಲ್ಲೂ ಎಲ್ಲ ಮಕ್ಕಳಿಗೂ ಒಂದೇ ಕಂಪನಿಯ ಶೂ, ಸಾಕ್ಸ್‌ಗಳನ್ನು ಸಗಟು ದರದಲ್ಲಿ ಖರೀದಿಸುವುದರಿಂದ ದರ ಕಡಿಮೆಯಾಗುತ್ತದೆ. ಪಾದದ ಅಳತೆಗೆ ತಕ್ಕಂತೆ ಬೇರೆ ಬೇರೆ ಶ್ರೇಣಿಯ ಶೂ, ಸಾಕ್ಸ್ ಖರೀದಿಸುವುದರಿಂದ ಸರ್ಕಾರ ನಿಗದಿಪಡಿಸಿರುವ ದರದಲ್ಲಿ ಗುಣಮಟ್ಟದ ಶೂ, ಸಾಕ್ಸ್ ಖರೀದಿ ಸಾಧ್ಯವಿದೆ. ಹಾಗಾಗಿ ದರ ಪರಿಷ್ಕರಣೆ ಅಗತ್ಯವಿಲ್ಲ ಎಂದು ಪರಿಗಣಿಸಿ ಹಳೆಯ ದರವನ್ನೇ ಮುಂದುವರೆಸಲಾಗಿದೆ ಎಂದು ಶಿಕ್ಷಣ ಇಲಾಖೆಯ ಉನ್ನತ ಅಧಿಕಾರಿಗಳು ಹೇಳುತ್ತಾರೆ.