ಹಾಲುಮತದಿಂದ ಅಧಿಕಾರ ಬಿಡಿಸಿಕೊಳ್ಳೋದು ಕಷ್ಟ. ಬಜೆಟ್ ಆಗೋವರೆಗೆ ಸಿಎಂ ಖುರ್ಚಿಗೆ ಏನೂ ತೊಂದರೆ ಇಲ್ಲ. ಬಜೆಟ್ ಬಳಿಕ ಅವರಾಗಿಯೇ ಬಿಟ್ಟರೆ ಬೇರೆಯವರಿಗೆ ಸಿಎಂ ಆಗುವ ಯೋಗ ಇದೆ ಎಂದು ಕೋಡಿಮಠದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದರು.

ಹಾವೇರಿ: ಹಾಲುಮತದಿಂದ ಅಧಿಕಾರ ಬಿಡಿಸಿಕೊಳ್ಳೋದು ಕಷ್ಟ. ಬಜೆಟ್ ಆಗೋವರೆಗೆ ಸಿಎಂ ಖುರ್ಚಿಗೆ ಏನೂ ತೊಂದರೆ ಇಲ್ಲ. ಬಜೆಟ್ ಬಳಿಕ ಅವರಾಗಿಯೇ ಬಿಟ್ಟರೆ ಬೇರೆಯವರಿಗೆ ಸಿಎಂ ಆಗುವ ಯೋಗ ಇದೆ ಎಂದು ಕೋಡಿಮಠದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದರು.

ನಗರದಲ್ಲಿ ಭಾನುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹಕ್ಕ ಬುಕ್ಕರು ವಿಜಯನಗರ ಸಾಮ್ರಾಜ್ಯ ಉಳಿಸಿದರು. ಸಂಗೊಳ್ಳಿ ರಾಯಣ್ಣ ಕಿತ್ತೂರು ಸಾಮ್ರಾಜ್ಯ ಉಳಿಸಿದರು. ಈ ಕುರುಬ ಸಮಾಜದವರು ಪ್ರಕೃತಿಯಲ್ಲಿ ಭವಿಷ್ಯ ಕಂಡವರು. ಹಾಲುಮತ ಸಮಾಜ ದೈವಿಬಲವುಳ್ಳ ಪುರಾತನ ಮತವಾಗಿದ್ದು, ಹಾಲುಮತದಿಂದ ಅಧಿಕಾರ ಬಿಡಿಸಿಕೊಳ್ಳುವುದು ಕಷ್ಟ ಎಂದರು. ಶಿವನ ಮಲ್ಲಿಗೆಯ ಮುಡಿಯ ಹೂವು ಬಲಪಾದದಿಂದ ಬಿದ್ದಿವೆ, ಎರಡು ಹೂವು ಶಿವನ ಪಾದ ಸೇರುತ್ತವೆ. ಡಿಸೆಂಬರ್ ತಿಂಗಳ ನಂತರ ಇನ್ನೂ ಸಾವು-ನೋವು ಹೆಚ್ಚಾಗುತ್ತದೆ ಎಂದರು.ಈ ಹಿಂದೆ ಅಂಬಲಿಯು ಹಳಸೀತು, ಕಂಬಳಿಯು ಹಾಸೀತು ಅಂತ ಹೇಳಿದ್ದೆ, ಕೈಲಾಸದಲ್ಲಿ ಕೈ ಪೂಜೆ ಮಾಡುತ್ತೆ ಅಂತನೂ ಹೇಳಿದ್ದೆ, ಅರಸರ ಅರಮನೆಗೆ ಕಾರ್ಮೋಡ ಕವಿದೀತು ಅಂತನೂ ಹೇಳಿದ್ದೆ. ಚೀನಾದಲ್ಲಿ ಏನಾಯ್ತು? ಪ್ರಧಾನಮಂತ್ರಿಗಳು ಉಳಿದಿದ್ದೇ ಹೆಚ್ಚು. 2026ಕ್ಕೆ ಇನ್ನೂ ಸಾವು, ನೋವುಗಳು ಹೆಚ್ಚಾಗುತ್ತವೆ ಎಂದು ಹೇಳಿದರು.