ವಿವಿಧ ಸೇವೆಯಲ್ಲಿ ತೊಡಗಿದ ವ್ಯಕ್ತಿಗಳಿಗೆ ಸನ್ಮಾನ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ, ತರೀಕೆರೆಅತ್ಯುತ್ತಮ ಸೇವೆ ಗುರುತಿಸುವುದು ಮತ್ತು ಗೌರವಿಸುವುದು ಪ್ರತಿಯೊಬ್ಬರ ಕರ್ತವ್ಯ ಎಂದು ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ ಪದ್ಮಾವತಿ ಸಂಜೀವ್ ಕುಮಾರ್ ಹೇಳಿದ್ದಾರೆ.ನಾರಿ ಶಕ್ತಿ ಬಳಗದಿಂದ ಪಟ್ಟಣದಲ್ಲಿ ಸದಸ್ಯರಾದ ಸುಧಾ ಅವರ ಮನೆ ಅವರಣದಲ್ಲಿ ವಿವಿಧ ಸೇವೆಯಲ್ಲಿ ತೊಡಗಿದ ವ್ಯಕ್ತಿಗಳಿಗೆ ನಡೆದ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ನಾರಿಶಕ್ತಿ ಬಳಗದಿಂದ ಶಾಲಾ ಮಕ್ಕಳಿಗೆ ನೋಟ್ ಪುಸ್ತಕ ವಿತರಣೆ, ಪರಿಸರ ದಿನಾಚರಣೆ, ಆರೋಗ್ಯ ಸೇವೆ ಮಾಡಿದ ವೈದ್ಯ ದಂಪಳಿಗೆ ಸನ್ಮಾನ, ಬಡ ಕುಟುಂಬಗಳಿಗೆ ಆಹಾರ ಧಾನ್ಯ ವಿತರಣೆ ಹಣಕಾಸಿನ ಸಹಕಾರ ಮನೆಗಳ ಮೇಲ್ಚಾವಣಿ ಸರಿಪಡಿಸುವುದು ವಯಸ್ಸಾದ ಅನಾಥರಿಗೆ ಸಹಾಯ ಹೀಗೆ ಹಲವಾರು ಕಾರ್ಯಕ್ರಮ ನೆರವೇರಿಸಲಾಗುತ್ತಿದೆ, ಈ ನಿಟ್ಟಿನಲ್ಲಿ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಮಕ್ಕಳ ಡಿಲವರಿ ಮತ್ತು ಗರ್ಭಿಣಿ ಮತ್ತು ಬಾಣಂತಿಯರಿಗೆ ಅತ್ಯುತ್ತಮ ಸೇವೆ ನೀಡಿದ ನರ್ಸ್ ಹಸೀನಾ ತರೀಕೆರೆಯಲ್ಲಿ ಅತ್ಯುತ್ತಮ ಸೇವೆ ಮಾಡಿರುವುದು ವಿಶೇಷ. ಆದ್ದರಿಂದ ಅಂತ ವ್ಯಕ್ತಿಯನ್ನು ನಮ್ಮ ನಾರಿ ಶಕ್ತಿ ಬಳಗದಿಂದ ಸನ್ಮಾನಿಸುತ್ತಿರುವುದು ನಮ್ಮೆಲ್ಲರ ಭಾಗ್ಯ ಎಂದು ತಿಳಿಸಿದರು ತರೀಕೆರೆ ಪುರಸಭೆ ಪೌರ ಕಾರ್ಮಿಕರಾದ ಚಂದ್ರಮ್ಮ ಸೇವೆ ಅತ್ಯುತ್ತಮ ಸೇವೆ ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ ನಮ್ಮ ನಾರಿ ಶಕ್ತಿ ಬಳಗದಿಂದ ಸನ್ಮಾನಿಸುತ್ತಿರುವುದು ಬಹಳ ವಿಶೇಷ ಈ 2 ಜನ ಮಹಿಳಾ ಮಣಿಗಳನ್ನು ಗೌರವಿಸುತ್ತಿರುವುದು ನಮ್ಮೆಲ್ಲರ ಭಾಗ್ಯ ಎಂದು ತಿಳಿಸಿದರು. ಅರುಂಧತಿ ಹೆಗಡೆ ಮಾತನಾಡಿ ಅತ್ಯುತ್ತಮ ಸೇವೆಯಲ್ಲಿ ತೊಡಗಿದ ನಮ್ಮ ತರೀಕೆರೆ ಸರ್ಕಾರಿ ಆರೋಗ್ಯ ಕೇಂದ್ರ ದಲ್ಲಿ ಸೇವೆ ಸಲ್ಲಿಸಿದ ನರ್ಸ್ ಹಸೀನಾ ಮತ್ತು ತರೀಕೆರೆ ಪುರಸಭೆ ಪೌರಕಾರ್ಮಿಕರಾಗಿ ಸೇವೆ ಸಲ್ಲಿಸುತ್ತಿರುವ ಚಂದ್ರಮ್ಮ ಈ ಇಬ್ಬರ ವ್ಯಕ್ತಿತ್ವ ಜನರ ಸೇವೆಯೇ ಬಹಳ ಮುಖ್ಯ ಎಂದು ನಂಬಿದವರು. ಅಂಥವರನ್ನು ಸನ್ಮಾನಿಸುತ್ತಿರುವುದು ನಮ್ಮೆಲ್ಲರ ಭಾಗ್ಯ ಹಾಗೆ ಮುಂದಿನ ದಿನದಲ್ಲಿ ಇವರ ಸೇವೆ ಇನ್ನಷ್ಟು ಮಹಿಳೆಯರಿಗೆ ಮತ್ತು ಜನರಿಗೆ ಸಿಗಲಿ ಎಂದು ನಾನು ಆಶಿಸುತ್ತೇನೆ ಎಂದು ತಿಳಿಸಿದರು. ತಾ.ಪಂ. ನಿವೃತ್ತ ಕಾರ್ಯನಿರ್ವಹಣಾಧಿಕಾರಿ ವಿಶಾಲಾಕ್ಷಮ್ಮ ಮಾತನಾಡಿ ಇದು ಒಂದು ಅಪರೂಪದ ಕಾರ್ಯಕ್ರಮ, ಇಂಥ ಕಾರ್ಯವನ್ನು ನಮ್ಮ ನಾರಿ ಶಕ್ತಿ ಬಳಗ ಮಾಡುತ್ತಿರುವುದು ಬಹಳ ವಿಶೇಷ ಎಂದು ತಿಳಿಸಿದರು ಯೂನಿಯನ್ ಬ್ಯಾಂಕಿನ ಸಾಕ್ಷರತಾ ಅಧಿಕಾರಿ ಶ್ರೀನಿವಾಸ್, ಪುಟ್ಟಮ್ಮ ಮಾತನಾಡಿದರು. ಸುಧಾ ಹಾದಿಕೆರೆ ಗ್ರಾ.ಪಂ ಮಾಜಿ ಅಧ್ಯಕ್ಷೆ ರೇಖಾ, ದೋರನಾಳು ಗ್ರಾ.ಪಂ. ಮಾಜಿ ಅಧ್ಯಕ್ಷೆ ಶೀಲಾವತಿ, ಪುಟ್ಟಮ್ಮ, ಮಧು ಸಿದ್ಲಿಪುರ, ರಜನಿ ಮಂಜುಳಾ ಅನಿತಾ ಮತ್ತು ಇತರ ಮಹಿಳೆಯರು ಭಾಗವಹಿಸಿದ್ದರು. -02ಕೆಟಿಆರ್.ಕೆ.1ಃ
ತರೀಕೆರೆಯಲ್ಲಿ ನಾರಿಶಕ್ತಿ ಬಳಗ ದಿಂದ ವಿವಿಧ ಸೇವೆಯಲ್ಲಿ ತೊಡಗಿದ ವ್ಯಕ್ತಿಗಳಿಗೆ ಸನ್ಮಾನ ಕಾರ್ಯಕ್ರಮ ಏರ್ಪಡಿಸ ಲಾಗಿತ್ತು. ತಾ.ಪಂ.ಮಾಜಿ ಅಧ್ಯಕ್ಷೆ ಪದ್ಮಾವತಿ ಸಂಜೀವ್ ಕುಮಾರ್. ತಾ.ಪಂ. ನಿವೃತ್ತ ಕಾರ್ಯನಿರ್ವಹಣಾಧಿಕಾರಿ ವಿಶಾಲಾಕ್ಷಮ್ಮ ಮತ್ತಿತರರು ಇದ್ದಾರೆ.