ಸಂವಿಧಾನ ಗೌರವಿಸುವುದು ಪ್ರತಿಯೊಬ್ಬರ ಕರ್ತವ್ಯ: ಸಜ್ಜನ್

| Published : Feb 22 2024, 01:48 AM IST

ಸಾರಾಂಶ

ಸಂವಿಧಾನ ನಮ್ಮ ದೇಶದ ತಾಯಿ ಇದ್ದಂತೆ ಅದನ್ನು ಗೌರವಿಸುವುದು ದೇಶದ ಪ್ರತಿಯೊಬ್ಬ ನಾಗರಿಕನ ಕರ್ತವ್ಯ

ಕನ್ನಡಪ್ರಭ ವಾರ್ತೆ ಸುರಪುರ

ಜಿಲ್ಲಾಡಳಿತ ಹಾಗೂ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಜಿಲ್ಲೆಯಲ್ಲಿ ಸಂಚರಿಸುತ್ತಿರುವ ಸಂವಿಧಾನ ಜಾಗೃತಿ ಜಾಥಾಕ್ಕೆ ಕೆಂಭಾವಿ ಪಟ್ಟಣದಲ್ಲಿ ಸ್ವಾಗತಿಸಲಾಯಿತು.

ಹೊಸ ಬಸ್ ನಿಲ್ದಾಣದಿಂದ ಬಸವೇಶ್ವರ ವೃತ್ತ, ಎಸ್‌ಬಿಐ ವೃತ್ತ, ಹೇಮರೆಡ್ಡಿ ಮಲ್ಲಮ್ಮ ದೇವಸ್ಥಾನ, ಟಿಪ್ಪು ಸುಲ್ತಾನ ವೃತ್ತ, ಉತ್ತರಾದಿ ಮಠದ ಬೀದಿ, ಜೈ ಹನುಮಾನ ಚೌಕ್ ಮಾರ್ಗವಾಗಿ ಪುರಸಭೆ ಆವರಣ ತಲುಪಿತು.ಮೆರವಣಿಗೆಯುದ್ದಕ್ಕು ಸರ್ಕಾರಿ ಹಾಗೂ ಖಾಸಗಿ ಶಾಲಾ ಮಕ್ಕಳು ನಡೆಸಿಕೊಟ್ಟ ಲೇಝೀಮ್, ಸಂವಿಧಾನ ಗೀತೆ, ನೃತ್ಯ ಎಲ್ಲರ ಗಮನ ಸೆಳೆದವು. ಪುರಸಭೆ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ತಾಪಂ ಅಧಿಕಾರಿ ಬಸವರಾಜ್ ಸಜ್ಜನ್ ಮಾತನಾಡಿ, ದೇಶದ ಸ್ವಾತಂತ್ರ ನಂತರ ಅವಶ್ಯಕವಾಗಿರುವ ಎಲ್ಲ ಕಾನೂನು ಮತ್ತು ಕರ್ತವ್ಯ ಒಳಗೊಂಡ ಸಂವಿಧಾನ ನಮ್ಮ ದೇಶದ ತಾಯಿ ಇದ್ದಂತೆ ಅದನ್ನು ಗೌರವಿಸುವುದು ದೇಶದ ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ ಎಂದು ಹೇಳಿದರು.ಗುಲಬರ್ಗಾ ವಿಶ್ವ ವಿದ್ಯಾಲಯದ ಪ್ರಾಧ್ಯಾಪಕ ಡಾ. ವಿಜಯಕುಮಾರ ಸಾಲಿಮನಿ ವಿಶೇಷ ಉಪನ್ಯಾಸ ನೀಡಿದರು. ತಹಸೀಲ್ದಾರ್ ವಿಜಯಕುಮಾರ, ತಾಲೂಕು ಸಮಾಜ ಕಲ್ಯಾಣಾಧಿಕಾರಿ ಶೃತಿ ಸೇರಿ ಪುರಸಭೆ ಸಿಬ್ಬಂದಿ, ಸದಸ್ಯರು, ವಿವಿಧ ದಲಿತಪರ ಸಂಘಟನೆ ಮುಖಂಡರು ಇದ್ದರು. ಬಸವರಾಜ ಭಂಟನೂರ ಹಾಗೂ ಯಮುನೇಶ ಯಾಳಗಿ ಅವರಿಂದ ಪ್ರಾರ್ಥನಾ ಗೀತೆ ನೆರವೇರಿತು. ಡಾ.ಯಂಕನಗೌಡ ಪೊಲೀಸ್ ಪಾಟೀಲ್ ನಿರೂಪಿಸಿದರು.