ಸಾರಾಂಶ
ಸೂಲಿಬೆಲೆ: ವಿದ್ಯಾರ್ಥಿಗಳು ಯಾವುದೇ ವಿಷಯದಲ್ಲೂ ಹಿಂಜರಿಯದೇ ಪ್ರಯತ್ನ ಮಾಡಬೇಕು ಎಂದು ಸರ್ಕಾರಿ ಸ್ವತಂತ್ರ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಸುಬ್ರಮಣಿ ಹೇಳಿದರು.
ಸೂಲಿಬೆಲೆ: ವಿದ್ಯಾರ್ಥಿಗಳು ಯಾವುದೇ ವಿಷಯದಲ್ಲೂ ಹಿಂಜರಿಯದೇ ಪ್ರಯತ್ನ ಮಾಡಬೇಕು ಎಂದು ಸರ್ಕಾರಿ ಸ್ವತಂತ್ರ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಸುಬ್ರಮಣಿ ಹೇಳಿದರು. ಸೂಲಿಬೆಲೆ ಪಿಯು ಕಾಲೇಜಿನಲ್ಲಿ ನೆಹರು ಯುವಕೇಂದ್ರ ಹಾಗೂ ನಾಡಪ್ರಭು ಕೆಂಪೇಗೌಡ ಯುವಕರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಪ್ರಬಂಧ ಸ್ವರ್ಧೆ ಹಾಗೂ ಚಿತ್ರಕಲೆ ಸ್ಪರ್ಧೆ ವಿಜೇತರಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡಿದ ಅವರು, ಯಾವುದೇ ರೀತಿಯ ಸ್ಪರ್ಧೆಗಳಲ್ಲಿ ಮೇಲುಕೀಳು ಎಂಬುದಿಲ್ಲ, ಎಲ್ಲರೂ ಪಾಲ್ಗೊಳ್ಳಬೇಕು. ಸಾಧನೆಯ ಹಾದಿಯಲ್ಲಿ ಮುನ್ನಡೆಯಬೇಕು ಎಂದು ಹೇಳಿದರು. ಈ ವೇಳೆ ಉಪನ್ಯಾಸಕ ಜಗದೀಶ್ ಕೆಂಗನಾಳ್, ಕುಮಾರ್, ಮೃತ್ಯುಂಜಯ, ಶ್ರೀಕೃಪಾ, ಸಂಘದ ಅಧ್ಯಕ್ಷ ಬಿ.ಎಂ.ಸಾಗರ, ಕಾರ್ಯದರ್ಶಿ ಸುರೇಶ್ ಇತರರಿದ್ದರು. (ಫೋಟೋ ಕ್ಯಾಫ್ಷನ್)
ಸೂಲಿಬೆಲೆ ಪಿಯು ಕಾಲೇಜಿನಲ್ಲಿ ನೆಹರು ಯುವಕೇಂದ್ರ ಹಾಗೂ ನಾಡಪ್ರಭು ಕೆಂಪೇಗೌಡ ಯುವಕರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಪ್ರಬಂಧ ಸ್ವರ್ಧೆ ಹಾಗೂ ಚಿತ್ರಕಲೆ ಸ್ಪರ್ಧೆ ವಿಜೇತರಿಗೆ ಪ್ರಾಚಾರ್ಯ ಸುಬ್ರಮಣಿ ಪ್ರಮಾಣ ಪತ್ರ ವಿತರಿಸಿದರು. ಉಪನ್ಯಾಸಕ ಜಗದೀಶ್ ಕೆಂಗನಾಳ್, ಕುಮಾರ್, ಮೃತ್ಯುಂಜಯ, ಶ್ರೀಕೃಪಾ ಇತರರಿದ್ದರು.