ಸಾರಾಂಶ
ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಬೇಲೂರು ತಾಲೂಕು ಘಟಕದ ವತಿಯಿಂದ ಶಿವನಂಜುಂಡೇಶ್ವರ ಪ್ರೌಢಶಾಲೆ ಯಲಹಂಕದಲ್ಲಿ ಆಕಾಶಕಾಯಗಳ ಬಗ್ಗೆ ವಿಚಾರ ಸಂಕಿರಣ ಏರ್ಪಡಿಸಲಾಗಿತ್ತು. ಗ್ರಹಗತಿ ನಿಜವೇ ಗ್ರಹಣ ದೋಷ ಮುಂತಾದ ವೈಜ್ಞಾನಿಕ ವಿಚಾರಗಳನ್ನು ಪ್ರಾತ್ಯಕ್ಷಿತೆಯೊಂದಿಗೆ ಚರ್ಚಿಸಿದರು. ನಕ್ಷತ್ರ ರಾಶಿ, ಧ್ರುವ ನಕ್ಷತ್ರ, ಸಪ್ತರ್ಷಿ ಮಂಡಲ, ಗುದ್ದಿ ನಕ್ಷತ್ರ, ಶುಕ್ರ ಗ್ರಹ ಗುರು, ಗ್ರಹ ಮಂಗಳ ಗ್ರಹಗಳ ಸಂಕ್ಷಿಪ್ತ ಪರಿಚಯ ಮಾಡಿದರು. ಅಲ್ಲದೆ ನಕ್ಷತ್ರಪುಂಜಗಳಾದ ಮಹಾವ್ಯಾದ ನಕ್ಷತ್ರ ವೃಷಭ ರಾಶಿ ಮಿಥುನ ರಾಶಿ ಮುಂತಾದ ವೀಕ್ಷಣೆ ಬಗ್ಗೆ ಮಕ್ಕಳಿಗೆ ತಿಳಿಸಿಕೊಟ್ಟರು.
ಕನ್ನಡಪ್ರಭ ವಾರ್ತೆ ಬೇಲೂರು
ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಬೇಲೂರು ತಾಲೂಕು ಘಟಕದ ವತಿಯಿಂದ ಶಿವನಂಜುಂಡೇಶ್ವರ ಪ್ರೌಢಶಾಲೆ ಯಲಹಂಕದಲ್ಲಿ ಆಕಾಶಕಾಯಗಳ ಬಗ್ಗೆ ವಿಚಾರ ಸಂಕಿರಣ ಏರ್ಪಡಿಸಲಾಗಿತ್ತು.ಕಾರ್ಯಕ್ರಮವನ್ನು ಶಾಲಾ ಮುಖ್ಯೋಪಾಧ್ಯಾಯರಾದ ಪ್ರಕಾಶ್ ಅವರು ಉದ್ಘಾಟಿಸಿದರು. ಕರ್ನಾಟಕ ವಿಜ್ಞಾನ ಸಮಿತಿಯ ಮಾನ ಮಂಜೇಗೌಡ ಮಾತನಾಡಿ, ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವನೆಯನ್ನು ಮೂಡಿಸುವುದು, ಪರಿಸರ ಕಾಳಜಿಯನ್ನು ಬೆಳೆಸುವುದು ಜಲಮಾಲಿನ್ಯ, ವಾಯುಮಾಲಿನ್ಯ, ಪರಿಸರ ಮಾಲಿನ್ಯದ ಬಗ್ಗೆ ಮಕ್ಕಳಲ್ಲಿ ತಿಳಿವಳಿಕೆ ಮೂಡಿಸಿ ಆಕಾಶದಲ್ಲಿ ಇರುವ ಗ್ರಹ ನಕ್ಷತ್ರಗಳು ಅಮಾವಾಸ್ಯೆ ಹುಣ್ಣಿಮೆಗಳು ವೈಜ್ಞಾನಿಕ ಹೇಗೆ ಸಂಘಟಿಸುವುದು ಎಂಬ ವಿಚಾರಗಳನ್ನು ತಿಳಿಸಿದರು.
ಕರ್ನಾಟಕದಲ್ಲಿ ವಿಜ್ಞಾನ ಸಮಿತಿಯ ಗೌರವ ಅಧ್ಯಕ್ಷರು ಸಂಪನ್ಮೂಲ ವ್ಯಕ್ತಿ ಟಿ ಡಿ ತಮಣ್ಣಗೌಡ ಮಾತನಾಡಿ, ಗ್ರಹಣ ಏಕೆ ಹೇಗೆ ಸಂಭವಿಸುತ್ತವೆ. ಅದರ ಪರಿಣಾಮಗಳು ಹಾಗೂ ಗ್ರಹಗತಿ ನಿಜವೇ ಗ್ರಹಣ ದೋಷ ಮುಂತಾದ ವೈಜ್ಞಾನಿಕ ವಿಚಾರಗಳನ್ನು ಪ್ರಾತ್ಯಕ್ಷಿತೆಯೊಂದಿಗೆ ಚರ್ಚಿಸಿದರು. ನಕ್ಷತ್ರ ರಾಶಿ, ಧ್ರುವ ನಕ್ಷತ್ರ, ಸಪ್ತರ್ಷಿ ಮಂಡಲ, ಗುದ್ದಿ ನಕ್ಷತ್ರ, ಶುಕ್ರ ಗ್ರಹ ಗುರು, ಗ್ರಹ ಮಂಗಳ ಗ್ರಹಗಳ ಸಂಕ್ಷಿಪ್ತ ಪರಿಚಯ ಮಾಡಿದರು. ಅಲ್ಲದೆ ನಕ್ಷತ್ರಪುಂಜಗಳಾದ ಮಹಾವ್ಯಾದ ನಕ್ಷತ್ರ ವೃಷಭ ರಾಶಿ ಮಿಥುನ ರಾಶಿ ಮುಂತಾದ ವೀಕ್ಷಣೆ ಬಗ್ಗೆ ಮಕ್ಕಳಿಗೆ ತಿಳಿಸಿಕೊಟ್ಟರು.ಶಾಲಾ ಮುಖ್ಯೋಪಾಧ್ಯಾಯರಾದ ಪ್ರಕಾಶ್ ಮಾತನಾಡಿ, ಯಾವುದೇ ಸಂದರ್ಭದಲ್ಲಿ ನಾನು ರಾಹುಕಾಲ, ಗುಳಿಕಾಲ ಇವುಗಳನ್ನು ಪರಿಗಣಿಸದೆ ಮಕ್ಕಳ ಮದುವೆ ಮಾಡಿರುವುದಾಗಿ ತಿಳಿಸಿದರು ಹಾಗೂ ವಿದ್ಯಾರ್ಥಿಗಳು ಭಾಗವಹಿಸುವುದು ತಮಗೆ ಖುಷಿ ತಂದಿದೆ. ಕರ್ನಾಟಕ ಜ್ಞಾನ ವಿದ್ಯಾ ಸಮಿತಿಯಿಂದ ಹೆಚ್ಚು ವಿಷಯಗಳನ್ನು ಮಕ್ಕಳಲ್ಲಿ ಅರಿವು ಮೂಡಿಸಲಿ ಎಂದು ತಿಳಿಸಿದರು.