ಸಾರಾಂಶ
ಜ.14ರಂದು ಸರ್ಕಾರದ ನಿರ್ದೇಶನದ ಪ್ರಕಾರವಾಗಿ ತಹಸೀಲ್ದಾರ ಕಾರ್ಯಾಲಯದಲ್ಲಿ ಶ್ರೀ ಶಿವಯೋಗಿ ಸಿದ್ದರಾಮೇಶ್ವರ ಜಯಂತಿಯನ್ನು ಸಾಂಕೇತಿಕವಾಗಿ ಆಚರಣೆ ಮಾಡಲಾಗುತ್ತದೆ.
ಕನ್ನಡಪ್ರಭ ವಾರ್ತೆ ಕುಷ್ಟಗಿ
ಪಟ್ಟಣ ಸೇರಿದಂತೆ ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿ ಕಾರ್ಯಾಲಯಗಳಲ್ಲಿ, ಶಾಲಾ, ಕಾಲೇಜುಗಳಲ್ಲಿ, ಸರ್ಕಾರಿ ಕಚೇರಿಗಳಲ್ಲಿ ಕಡ್ಡಾಯವಾಗಿ ಜ.14ರಂದು ಶ್ರೀ ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಆಚರಿಸಿ ಫೋಟೋ, ವರದಿಯನ್ನು ತಾಲೂಕು ಆಡಳಿತಕ್ಕೆ ಸಲ್ಲಿಸಬೇಕು ಎಂದು ತಹಸೀಲ್ದಾರ ಅಶೋಕ ಶಿಗ್ಗಾಂವಿ ಹೇಳಿದರು.ಪಟ್ಟಣದ ತಹಸೀಲ್ದಾರ ಕಾರ್ಯಾಲಯದಲ್ಲಿ ಶ್ರೀ ಶಿವಯೋಗಿ ಸಿದ್ದರಾಮೇಶ್ವರ ಜಯಂತಿಯ ಅಂಗವಾಗಿ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜ.14ರಂದು ಸರ್ಕಾರದ ನಿರ್ದೇಶನದ ಪ್ರಕಾರವಾಗಿ ತಹಸೀಲ್ದಾರ ಕಾರ್ಯಾಲಯದಲ್ಲಿ ಶ್ರೀ ಶಿವಯೋಗಿ ಸಿದ್ದರಾಮೇಶ್ವರ ಜಯಂತಿಯನ್ನು ಸಾಂಕೇತಿಕವಾಗಿ ಆಚರಣೆ ಮಾಡಲಾಗುತ್ತದೆ. ಅಧಿಕಾರಿಗಳು ಹಾಗೂ ಸಮಾಜದವರು ಆಗಮಿಸಬೇಕು ಎಂದರು.
ಸುಮಾರು ಮೂರು ವರ್ಷಗಳಿಂದ ಶ್ರೀ ಶಿವಯೋಗಿ ಸಿದ್ದರಾಮೇಶ್ವರರ ಜಯಂತಿ ಆಚರಣೆ ಮಾಡಿಲ್ಲ. ಆದ ಕಾರಣ ಈ ವರ್ಷ ಅದ್ಧೂರಿಯಾಗಿ ಜಿಲ್ಲಾ ಉಸ್ತುವಾರಿ ಸಚಿವರು, ಸಮಾಜದ ಗುರುಗಳ ನೇತೃತ್ವದಲ್ಲಿ ಆಚರಿಸಬೇಕು. ಸರ್ಕಾರದಿಂದ ಬರುವ ಅನುದಾನವನ್ನು ಸರಿಯಾಗಿ ಕೊಡಬೇಕು ಎಂದು ಸಮಾಜದ ಮುಖಂಡರು ವಿನಂತಿಸಿಕೊಂಡರು.ಇದಕ್ಕೆ ತಹಸೀಲ್ದಾರ ಉತ್ತರಿಸಿ, ಸರ್ಕಾರದಿಂದ ಅನುದಾನ ಕೊಡಲು ನಾವು ಸಿದ್ಧ. ಆದರೆ ಕಾರ್ಯಕ್ರಮದ ಫೋಟೋ, ಕಾರ್ಯಕ್ರಮದ ವರದಿ, ಖರ್ಚು ಮಾಡಲಾಗಿರುವ ಬಿಲ್ಲು ನೀಡಬೇಕು. ತದ ನಂತರ ಬಿಲ್ ಮಾಡಿ ಕೊಡಲಾಗುತ್ತದೆ ಎಂದರು.
ಈ ಸಂದರ್ಭ ಸಮಾಜದ ತಾಲೂಕು ಅಧ್ಯಕ್ಷ ಬಸವರಾಜ ಹೊಸಮನಿ, ಸಮಾಜದ ಮುಖಂಡರಾದ, ಸೂಚಪ್ಪ ಹನುಮಸಾಗರ, ಪರಶುರಾಮ್ ನಾಗರಾಳ, ಹನುಮೇಶ ಭೋವಿ, ನಾಗರಾಜ್ ಭೋವಿ, ಈಶಪ್ಪ ಭೋವಿ, ತಿಮ್ಮಣ್ಣ ಹಿರೇಮನಿ, ದಾಸಪ್ಪ ಭೋವಿ, ಮುತ್ತಣ್ಣ ಹೊಸಮನಿ ಸೇರಿದಂತೆ ಶಿಕ್ಷಣ, ಅರಣ್ಯ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.9ಕೆಎಸಟಿ1: ಕುಷ್ಟಗಿ ಪಟ್ಟಣದ ತಹಸೀಲ್ದಾರ ಕಾರ್ಯಾಲಯದಲ್ಲಿ ಶ್ರೀ ಶಿವಯೋಗಿ ಸಿದ್ದರಾಮೇಶ್ವರರ ಜಯಂತಿಯ ಅಂಗವಾಗಿ ನಡೆದ ಪೂರ್ವಭಾವಿ ಸಭೆಯಲ್ಲಿ ತಹಸೀಲ್ದಾರ ಅಶೋಕ ಶಿಗ್ಗಾಂವಿ ಮಾತನಾಡಿದರು.