ಸರ್ಕಾರ ಹಿರಿಯ ನಾಗರಿಕರಿಗೆ ಕನಿಷ್ಠ ಸೌಲಭ್ಯ ನೀಡುವುದು ಅಗತ್ಯ : ಚಂಬಣ್ಣ ಬಾಳಿಕಾಯಿ

| N/A | Published : Feb 27 2025, 02:05 AM IST / Updated: Feb 27 2025, 04:38 AM IST

ಸಾರಾಂಶ

ಸರ್ಕಾರ ಹಿರಿಯ ನಾಗರಿಕರಿಗೆ ₹10 ಸಾವಿರ ಗೌರವಧನ, ರೈಲ್ವೆ, ಬಸ್ಸಿನಲ್ಲಿ ಉಚಿತ ಪ್ರಯಾಣದ ಅವಕಾಶ, ಆಸ್ಪತ್ರೆಯಲ್ಲಿ ಹಿರಿಯರಿಗೆ ಪ್ರಥಮ ಆದ್ಯತೆ ಕೊಡಬೇಕು

ಲಕ್ಷ್ಮೇಶ್ವರ: ದೇಶದಲ್ಲಿ 25 ಕೋಟಿ ಹಿರಿಯ ನಾಗರಿಕರು ಇದ್ದು, ಸರ್ಕಾರ ಹಿರಿಯ ನಾಗರಿಕರಿಗೆ ಅಗತ್ಯವಾಗಿರುವ ಸೌಲಭ್ಯ ನೀಡುವ ಅವಶ್ಯಕತೆವಿದೆ ಎಂದು ಲಕ್ಷ್ಮೇಶ್ವರ ತಾಲೂಕು ಕರ್ನಾಟಕ ರಾಜ್ಯ ಹಿರಿಯ ನಾಗರಿಕರ ಹಾಗೂ ನಿವೃತ್ತ ನೌಕರರ ಕ್ಷೇಮಾಭಿವೃದ್ಧಿ ಸಂಘ ಅಧ್ಯಕ್ಷ ಸಿ.ಆರ್.ಲಕ್ಕುಂಡಿಮಠ ಹಾಗೂ ಉಪಾಧ್ಯಕ್ಷ ಚಂಬಣ್ಣ ಬಾಳಿಕಾಯಿ ಹೇಳಿದರು.

ಪಟ್ಟಣದ ಚಂಬಣ್ಣ ಬಾಳಿಕಾಯಿ ಅವರ ಜಿನ್ನಿಂಗ್ ಫ್ಯಾಕ್ಟರಿಯಲ್ಲಿ ನಡೆದ ಹಿರಿಯ ನಾಗರಿಕರ ಹಾಗೂ ನಿವೃತ್ತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಸಭೆಯಲ್ಲಿ ಮಾತನಾಡಿದರು.

ಸರ್ಕಾರ ಹಿರಿಯ ನಾಗರಿಕರಿಗೆ ₹10 ಸಾವಿರ ಗೌರವಧನ, ರೈಲ್ವೆ, ಬಸ್ಸಿನಲ್ಲಿ ಉಚಿತ ಪ್ರಯಾಣದ ಅವಕಾಶ, ಆಸ್ಪತ್ರೆಯಲ್ಲಿ ಹಿರಿಯರಿಗೆ ಪ್ರಥಮ ಆದ್ಯತೆ ಕೊಡಬೇಕು. ಪೊಲೀಸ್ ಠಾಣೆಯಲ್ಲಿ ಸಾಂತ್ವನ ಕೇಂದ್ರ, ಸಮುದಾಯ ಭವನ ನಿರ್ಮಿಸಲು ಜಾಗದ ವ್ಯವಸ್ಥೆ, ಹಿರಿಯ ನಾಗರಿಕರ ಅಭಿವೃದ್ಧಿ ನಿಗಮ ಸೇರಿದಂತೆ ಅನೇಕ ಸೌಲಭ್ಯ ನೀಡುವುದು ಅಗತ್ಯವಾಗಿದೆ. ಹಿರಿಯ ನಾಗರಿಕರ ಬೇಡಿಕೆಗಳು ರಾಜ್ಯ ಹಾಗೂ ಕೇಂದ್ರ ಸರ್ಕಾರ ಜಾರಿಗೆ ತರುವ ಮೂಲಕ ಹಿರಿಯ ನಾಗರಿಕರ ಹಿತ ಕಾಯುವ ಕಾರ್ಯ ಮಾಡಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಹೋರಾಟ ಮಾಡಲಾಗುವುದು ಎಂದು ಹೇಳಿದರು. ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಸಿ.ಎಫ್. ಬೂದಿಹಾಳ ಮಾತನಾಡಿದರು.

ಈ ವೇಳೆ ಹಿರಿಯ ನಾಗರಿಕರ ಸಂಘದ ಗೌರವಾದ್ಯಕ್ಷ ಚನ್ನಪ್ಪ ಕೋಲಕಾರ, ಅಧ್ಯಕ್ಷ ನಾಗರಾಜ ಹೇಮಗಿರಿಮಠ, ಪ್ರಕಾಶ ಉಪನಾಳ, ಎಸ್.ಪಿ. ಸಭಾವಡೆಮಠ, ಎಂ.ಕೆ. ಕಳ್ಳಿಮಠ, ಡಾ.ಶಿವಾನಂದ ಹೂವಿನ, ಚಂದ್ರಶೇಖರ ಹೂಗಾರ, ನಾಗರಾಜ ಪೂಜಾರ, ವಿ.ಸಿ.ರಬಕವಿ, ಎಸ್.ಬಿ. ತಾಳಿಕೋಟಿಮಠ ಅನೇಕರು ಇದ್ದರು. ಐ.ಎಸ್. ಬಡಿಗೇರ ನಿರೂಪಿಸಿದರು.