ಮಹಾತ್ಮರ ಆದರ್ಶ, ಸಾಧನೆ ಸ್ಮರಣೆ ಅಗತ್ಯ: ರವಿ ಕೊರವರ

| Published : Apr 03 2025, 12:35 AM IST

ಮಹಾತ್ಮರ ಆದರ್ಶ, ಸಾಧನೆ ಸ್ಮರಣೆ ಅಗತ್ಯ: ರವಿ ಕೊರವರ
Share this Article
  • FB
  • TW
  • Linkdin
  • Email

ಸಾರಾಂಶ

ಮಹಾತ್ಮರ ಆದರ್ಶ ಮತ್ತು ಸಾಧನೆಗಳ ಸ್ಮರಣೆ ಮುಖ್ಯವಾಗಿದೆ. ಹೀಗಾಗಿ ಅವರ ಜಯಂತ್ಯುತ್ಸವ ಆಚರಣೆ ಮಾಡುವ ಮೂಲಕ ಗೌರವಿಸುವ ಕಾರ್ಯ ಅರ್ಥಪೂರ್ಣವಾಗಿದೆ.

ಶಿಗ್ಗಾಂವಿ: ಮಹನೀಯರ ಜಯಂತಿ ಕಾರ್ಯಗಳನ್ನು ಪ್ರತಿಯೊಬ್ಬರೂ ಹಂಚಿಕೊಂಡು ಮಾಡಬೇಕು. ಜವಾಬ್ದಾರಿ ನೀಡಿದ ಕೆಲಸ, ಕಾರ್ಯಗಳನ್ನು ಕಡ್ಡಾಯವಾಗಿ ಮಾಡಬೇಕು ಎಂದು ತಹಸೀಲ್ದಾರ್ ರವಿ ಕೊರವರ ಸಲಹೆ ನೀಡಿದರು.ಪಟ್ಟಣದ ತಹಸೀಲ್ದಾರ್ ಕಚೇರಿ ಆವರಣದಲ್ಲಿ ನಡೆದ ಬಿ.ಆರ್. ಅಂಬೇಡ್ಕರ್, ಬಾಬು ಜಗಜೀವನರಾಮ್, ದೇವರ ದಾಸಿಮಯ್ಯ, ಮಹಾವೀರ ಜಯಂತ್ಯುತ್ಸವದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.ಮಹಾತ್ಮರ ಆದರ್ಶ ಮತ್ತು ಸಾಧನೆಗಳ ಸ್ಮರಣೆ ಮುಖ್ಯವಾಗಿದೆ. ಹೀಗಾಗಿ ಅವರ ಜಯಂತ್ಯುತ್ಸವ ಆಚರಣೆ ಮಾಡುವ ಮೂಲಕ ಗೌರವಿಸುವ ಕಾರ್ಯ ಅರ್ಥಪೂರ್ಣವಾಗಿದೆ. ಅದಕ್ಕೆ ಪ್ರತಿಯೊಬ್ಬರೂ ಕೈಜೋಡಿಸುವ ಜತೆಗೆ ಸ್ವಯಂ ಸೇವಕರಾಗಿ ಕಾರ್ಯ ಮಾಡಬೇಕು ಎಂದರು.ಮುಖಂಡ ಬಸವರಾಜ ಕಟ್ಟಿಮನಿ ಮಾತನಾಡಿ, ಮಹಾತ್ಮರ ಜಯಂತ್ಯುತ್ಸವಗಳ ಬಗ್ಗೆ ನಿರ್ಲಕ್ಷ್ಯ ತೋರಬಾರದು. ಪ್ರತಿ ಇಲಾಖೆಯ ಅಧಿಕಾರಿಗಳು ಪೂರ್ವಭಾವಿ ಸಭೆಗೆ ಹಾಜರಾಗಬೇಕು. ವಿವಿಧ ಕಾರ್ಯಗಳ ಜವಾಬ್ದಾರಿ ಹೊರಬೇಕು. ಸಭೆಗೆ ಬಾರದ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಸರಸ್ವತಿ ಗಜಕೋಶ, ಪುರಸಭೆ ಮುಖ್ಯಾಧಿಕಾರಿ ಮಲ್ಲೇಶಪ್ಪ ಆರ್., ಸರ್ಕಾರಿ ನೌಕರರ ಸಂಘದ ತಾಲೂಕು ಘಟಕದ ಅಧ್ಯಕ್ಷ ಅರುಣ ಹುಡೆದಗೌಡ್ರ, ಮುಖಂಡರಾದ ಮಲ್ಲೇಶಪ್ಪ ಹರಿಜನ, ಶಿವಾನಂದ ಮ್ಯಾಗೇರಿ, ಕರಿಯಪ್ಪ ಕಟ್ಟಿಮನಿ, ಎಸ್.ಎಫ್. ಮಣಿಕಟ್ಟಿ, ಅಶೋಕ ಕಾಳೆ, ಅಣ್ಣಪ್ಪ ಲಮಾಣಿ, ನಿಂಗಪ್ಪ ಜವಳಗಿ, ಪರಶುರಾಮ ಕಾಳೆ, ಗದಿಗೆಪ್ಪ ಬಳ್ಳಾರಿ, ಜೈನ ಸಮಾಜದ ಮುಖಂಡ ರವಿ ಪಾಸರ ಇದ್ದರು.ನರೇಗಲ್ ಕೃಷಿ ಪತ್ತಿನ ಸಂಘಕ್ಕೆ ಅವಿರೋಧ ಆಯ್ಕೆ

ಹಾನಗಲ್ಲ: ನರೇಗಲ್ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ನಡೆದ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಮಲ್ಲಿಕಾರ್ಜುನ ನಿಂಗಪ್ಪ ಅಗಡಿ, ಉಪಾಧ್ಯಕ್ಷರಾಗಿ ಚಂದ್ರಪ್ಪ ಕೂಡಲ ಅವಿರೋಧವಾಗಿ ಆಯ್ಕೆಯಾದರು.

ಮಂಗಳವಾರ ನಡೆದ ಆಯ್ಕೆ ಪ್ರಕ್ರಿಯೆಯನ್ನು ಸಹಕಾರಿ ಅಭಿವೃದ್ಧಿ ಅಧಿಕಾರಿ ಬಿ. ಪುಷ್ಪವತಿ ನಡೆಸಿದರು. ಈ ಸಮಯದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮಾಲತೇಶ್ ಸೊಪ್ಪಿನ್, ನ್ಯಾಯವಾದಿ ಎಸ್.ಎಂ. ಕೋತಂಬರಿ, ನಿರ್ದೇಶಕರಾದ ಮಂಜುನಾಥ್ ಕ್ಯಾತಪನವರ, ಚಂದ್ರು ನಾಯ್ಕರ್, ಬಸವರಾಜ್ ಮರ್ಜಿ, ಚನ್ನಬಸಪ್ಪ ಹುಲಿಕಟ್ಟಿ, ಚನ್ನಬಸಪ್ಪ ಉಜ್ಜಿನಶೆಟ್ಟರ್, ಶೇಖಪ್ಪ ಬಸಪ್ಪ ಹರಿಜನ, ಗೀತಾ ತಹಸೀಲ್ದಾರ್, ಮಂಗಳಾ ದೇವಸೂರ, ಹಿದಾಯಿತುಲ್ಲಾ ರಾಣೇಬೆನ್ನೂರ್, ಮುಖಂಡರಾದ ಶಾಂತಪ್ಪ ಶೀಲವಂತರ, ಬಸಯ್ಯ ಹಿರೇಮಠ, ಗುಡ್ಡಪ್ಪ ಕುರುಬರ, ಗುಡ್ಡಪ್ಪ ಪಾನಿಗಟ್ಟಿ, ಶೇಖಪ್ಪ ಕರಡಿ, ತಿರಕಪ್ಪ ಗೋಧಿ, ಬಸವರಾಜ್ ಬರ್ಕಿ, ರೇವಣೆಪ್ಪ ಬರ್ಕಿ, ಫಕ್ಕೀರೇಶ್ ಅಗಸಿಬಾಗಿಲ, ಮಲ್ಲಿಕಾರ್ಜುನ ಉಜ್ಜಿನಶೆಟ್ಟರ, ಸೋಮಲಿಂಗ ಸುಳ್ಳಳ್ಳಿ, ಮಂಜುನಾಥ್ ಸೀರಿಯಮ್ಮನವರ, ಚಾಮರಾಜ ಗೋಧಿ, ವೀರಭದ್ರಪ್ಪ ಅಗಡಿ, ಬಸವರಾಜ್ ಶೀಲವಂತರ, ಶಂಕ್ರಪ್ಪ ದಾನಮ್ಮನವರ, ಕಲಂದರ್ ನೆಗಳೂರ್ ಸೇರಿದಂತೆ ಹಲವರಿದ್ದರು.