ಸಾರಾಂಶ
ಭಗವದ್ಗೀತೆಯಂತಹ ಮಹಾಗ್ರಂಥಗಳ ತಿರುಳನ್ನು ಪ್ರಸ್ತುತ ಮಕ್ಕಳಿಗೆ ತಿಳಿ ಹೇಳುವುದು ಅತ್ಯವಶ್ಯ ಎಂದು ಡಾ.ಟಿ.ವಿ. ರಾಜು ತಿಳಿಸಿದರು.
ಕನ್ನಡಪ್ರಭ ವಾರ್ತೆ ತುರುವೇಕೆರೆ
ಧರ್ಮದ ವಿಚಾರವು ಕೇವಲ ವಯೋವೃದ್ಧರಿಗಾಗಿ ಇದೆ ಎಂಬ ಭಾವನೆ ಇದೆ. ಆದರೆ ಭವಿಷ್ಯತ್ತಿನ ದೃಷ್ಠಿಯಿಂದ ಮಕ್ಕಳಿಗೆ ಧರ್ಮ ಸಂಸ್ಕಾರ ಬೀಜವನ್ನು ಬಿತ್ತುವುದು ಅತ್ಯವಶ್ಯಕ ಎಂದು ವಿನಿಯ ಫೌಂಡೇಶನ್ ಟ್ರಸ್ಟ್ ವ್ಯವಸ್ಥಾಪಕ ಡಾ.ಟಿ.ವಿ. ರಾಜು ತಿಳಿಸಿದರು.ಪಟ್ಟಣದ ಚಿದಂಬರೇಶ್ವರ ಉಚಿತ ಗ್ರಂಥಾಲಯ ಹಾಗೂ ಚೈತನ್ಯ ಎಜುಕೇಶನಲ್ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ತಿಂಗಳಿಗೊಂದು ಪುಸ್ತಕ ಪರಿಚಯ ಹಾಗೂ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಗರವಾಸಿಗಳು ದಿನವಿಡೀ ಬದುಕು-ಬವಣೆ ಸಾಗಿಸುವ ಒತ್ತಡ ಬದುಕಿನಲ್ಲಿ ಧರ್ಮ ಸಂಸ್ಕಾರಗಳನ್ನ ಬದಿಗೊತ್ತಿದ್ದಾರೆ ಎಂದು ವಿಷಾದಿಸಿದರು.ಭಗವದ್ಗೀತೆಯಂತಹ ಮಹಾಗ್ರಂಥಗಳ ತಿರುಳನ್ನು ಪ್ರಸ್ತುತ ಮಕ್ಕಳಿಗೆ ತಿಳಿ ಹೇಳುವುದು ಅತ್ಯವಶ್ಯ. ಈ ದಿಸೆಯಲ್ಲಿ ಚಿದಂಬರ ಉಚಿತ ಗ್ರಂಥಾಲಯ ಪುಸ್ತಕ ಪರಿಚಯ ಹಾಗೂ ಹೊಸ ಹೊಸ ಪುಸ್ತಕ ಲೋಕಾರ್ಪಣೆಯೊಂದಿಗೆ ಸಾಕ್ಷರತೆ ಹಾಗೂ ಧಾರ್ಮಿಕ ಮನೋಭಾವನೆ ಬಿತ್ತುವಲ್ಲಿ ಉತ್ತಮ ಕಾರ್ಯಕೈಗೊಂಡಿರುವುದು ಶ್ಲಾಘನೀಯ ಎಂದರು.ಗಣಕ ಪರಿಷತ್ತಿನ ಜಿ.ಎಂ ನರಸಿಂಹಮೂರ್ತಿಯವರು ‘ಗೀತೆಯ ತಿರುಳು ಹಾಗೂ ಮಕ್ಕಳ ಕೈ ಗೀತೆ ಲೇಖಕರಾದ ದಿ.ಹೊಸಕೆರೆ ಚಿಂದಂಬರೇಶ್ವರವರ ಸಾಧನೆಯೊಂದಿಗೆ ವ್ಯಕ್ತಿ ಪರಿಚಯ ಮಾಡಿಕೊಟ್ಟರು. ಬೆಂಗಳೂರಿನ ನಿವೃತ್ತ ಕನ್ನಡ ಪ್ರಾಧ್ಯಾಪಕರಾದ ಪ್ರೊ.ಜಿ ಅಶ್ವಥ್ ನಾರಾಯಣ್ ಗೀತೆಯ ತಿರುಳು ಪುಸ್ತಕಗಳನ್ನು ಲೋಕಾರ್ಪಣೆ ಮಾಡಿದರು.ಧೇನುಪುರಿ ಭಜನಾ ಮಂಡಳಿಯ ಅಧ್ಯಕ್ಷರಾದ ಸೀತಾಲಕ್ಷ್ಮೀ ಕೃಷ್ಣಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಶಾರದಾ ಭಜನಾ ಮಂಡಳಿ ಮೆಲ್ಲುಸಿರೇ ಸವಿಗಾನ ತಂಡ, ಶ್ರೀ ಧೇನುಪುರಿ ಭಜನಾ ಮಂಡಳಿ ಹಾಗೂ ಸಾಹಿತ್ಯಾಸಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.ಕೃಷ್ಣ ಚೈತನ್ಯ ಚಿದಂಬರೇಶ್ವರ ಗ್ರಂಥಾಲಯ ನಡೆದು ಬಂದ ಹಾದಿಯನ್ನು ಪ್ರಾಸ್ತವಿಕ ನುಡಿದರು. ಗ್ರಂಥಾಲಯದ ರಾಮಚಂದ್ರು ಸ್ವಾಗತಿಸಿ, ನಿರೂಪಿಸಿ ವಂದಿಸಿದರು.೩೧ ಟಿವಿಕೆ ೨ -ತುರುವೇಕೆರೆ ಪಟ್ಟಣದ ಚಿದಂಬರೇಶ್ವರ ಉಚಿತ ಗ್ರಂಥಾಲಯದಲ್ಲಿ ‘ಗೀತೆಯ ತಿರುಳು ಮತ್ತು ಮಕ್ಕಳ ಕೈ ಗೀತೆ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮ ನಡೆಯಿತು.