ಕೊಲಂಬಿಯ ದೇಶದಲ್ಲಿ ಸ್ವಚ್ಛತೆ, ಸಮಯಪಾಲನೆ ಹಾಗೂ ಶಿಸ್ತಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಸಮಯಕ್ಕೆ ಸರಿಯಾಗಿ 1 ನಿಮಿಷ ತಡವಾಗಿ ಬಂದರೆ ಕೆಲಸಕ್ಕೆ ಸೇರಿಸಿಕೊಳ್ಳುವುದಿಲ್ಲ. ಮನೆಗೆ ವಾಪಸ್ ಕಳಿಸುತ್ತಾರೆ. ಜೊತೆಗೆ ವಾಹನಗಳು‌ ರಸ್ತೆಯಲ್ಲಿ ಗೆರೆ ದಾಟಿದರೆ ಕಠಿಣ ಕ್ರಮ ಕೈಗೊಳ್ಳುತ್ತಾರೆ.

ಕನ್ನಡಪ್ರಭ ವಾರ್ತೆ ಪಾಂಡವಪುರ

ಶಿಕ್ಷಕರು ಶಾಲೆಗಳಲ್ಲಿ ಮಕ್ಕಳಿಗೆ ಸ್ವಚ್ಛತೆ, ಸಮಯಪಾಲನೆ ಹಾಗೂ ಶಿಸ್ತಿನ‌ ಜೀವನದ ಬಗ್ಗೆ ಕುರಿತಂತೆ ಬೋಧನೆ ಮಾಡಬೇಕು ಎಂದು ಸಮಾಜ ಸೇವಕ ಅರವಿಂದ ರಾಘವನ್ ಹೇಳಿದರು.

ತಾಲೂಕಿನ ಹಿರೇಮರಳಿ, ಕೆ.ಬೆಟ್ಟಹಳ್ಳಿ, ಮಾಣಿಕ್ಯನಹಳ್ಳಿ, ಗೌಡಗೆರೆ, ಬೆಳ್ಳಾಳೆ ಗ್ರಾಮಗಳ ಪ್ರಾಥಮಿಕ ಶಾಲೆಗಳು ಹಾಗೂ ಮೂಡಲಕೊಪ್ಪಲು ಮತ್ತು ಸಣಬ ಬಡಾವಣೆಯ ಸರ್ಕಾರಿ‌ ಪ್ರೌಢಶಾಲೆಗಳಿಗ ಭೇಟಿ ನೀಡಿ ಮಾತನಾಡಿದರು.

ಕೊಲಂಬಿಯ ದೇಶದಲ್ಲಿ ಸ್ವಚ್ಛತೆ, ಸಮಯಪಾಲನೆ ಹಾಗೂ ಶಿಸ್ತಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಸಮಯಕ್ಕೆ ಸರಿಯಾಗಿ 1 ನಿಮಿಷ ತಡವಾಗಿ ಬಂದರೆ ಕೆಲಸಕ್ಕೆ ಸೇರಿಸಿಕೊಳ್ಳುವುದಿಲ್ಲ. ಮನೆಗೆ ವಾಪಸ್ ಕಳಿಸುತ್ತಾರೆ. ಜೊತೆಗೆ ವಾಹನಗಳು‌ ರಸ್ತೆಯಲ್ಲಿ ಗೆರೆ ದಾಟಿದರೆ ಕಠಿಣ ಕ್ರಮ ಕೈಗೊಳ್ಳುತ್ತಾರೆ ಎಂದರು.

ರೈಲುಗಳು ನಿಗದಿತ ಸಮಯಕ್ಕೆ ಸರಿಯಾಗಿ ನಿಲ್ದಾಣಕ್ಕೆ ಬರುತ್ತವೆ. ಆದರೆ, ನಮ್ಮಲ್ಲಿ ಇವುಗಳ ಪಾಲನೆ‌ ಮಾಡುವುದಿಲ್ಲ. ಬೇಕಾಬಿಟ್ಟಿಯಾಗಿ ನಡೆದುಕೊಳ್ಳುತ್ತಾರೆ. ಹೀಗಾಗಿ ಮಕ್ಕಳಿಗೆ ಶಿಕ್ಷಕರು ಶಿಸ್ತು, ಸಮಯಪಾಲನೆ‌ ಹಾಗೂ ಸ್ವಚ್ಛತೆ ಬಗ್ಗೆ ಹೇಳುವ ಮೂಲಕ ಅವರನ್ನು‌ ಸರಿದಾರಿಗೆ ಕೊಂಡೊಯ್ಯಬೇಕಿದೆ ಎಂದು ಸಲಹೆ ನೀಡಿದರು.

ತಾಲೂಕಿನಲ್ಲಿ ಸುಮಾರು 100 ಶಾಲೆಗಳು ಹಾಗೂ 200 ಅಂಗನವಾಡಿಗಳ ಅಭಿವೃದ್ಧಿಗೆ ಕೋಟಿಗಟ್ಟಲೇ ಅನುದಾನ ಒದಗಿಸುವ ಮೂಲಕ ಸರ್ಕಾರಿ ಶಾಲೆಗಳ ಬಲವರ್ಧನೆಗೆ ಕಳೆದ 20 ವರ್ಷಗಳಿಂದಲೂ ಶ್ರಮಿಸುತ್ತಿದ್ದೇನೆ ಎಂದರು.

ತಾಲೂಕಿನ‌ ವಿವಿಧ ಸರ್ಕಾರಿ ಶಾಲೆಗಳ 25ಕ್ಕೂ ಹೆಚ್ಚು ಕಂಪ್ಯೂಟರ್ ಶಿಕ್ಷಕರಿಗೆ ಪ್ರತಿ ತಿಂಗಳು 1.25ಲಕ್ಷ ರು.ಗಳವರೆಗೆ ತಮ್ಮ ಸ್ವಂತ ಹಣದಿಂದ ವೇತನ ಪಾವತಿ ಮಾಡುತ್ತಿದ್ದೇನೆ ಎಂದರು.

ಬಿಜೆಪಿ ಮುಖಂಡ ಎಚ್.ಎನ್.ಮಂಜುನಾಥ್ ಮಾಡನಾಡಿ, ರಾಜ್ಯದಲ್ಲಿ ಯಾವುದೇ ತಾಲೂಕಿಗೂ ಸಿಗದಂತಹ ಒಳ್ಳೆಯ ಅವಕಾಶ ಪಾಂಡವಪುರಕ್ಕೆ ಸಿಕ್ಕಿದೆ. ಇದಕ್ಕೆ ಅರವಿಂದ ‌ರಾಘವನ್ ಹಾಗೂ ಅವರ ಸಹೋದರರು ಕಾರಣ. ತಾಲೂಕಿ‌ನ ಸರ್ಕಾರಿ ಶಾಲೆಗಳನ್ನು ಉಳಿಸಲು ಶ್ರಮಿಸುತ್ತಿದ್ದಾರೆ ಎಂದು ಶ್ಲಾಘಿಸಿದರು.

ಈ ವೇಳೆ ಎಲ್ಲಾ ಶಾಲೆಗಳಲ್ಲೂ ಸಮಾಜ ಸೇವಕ ಅರವಿಂದ ರಾಘವನ್‌ ಅವರನ್ನು ಆತ್ಮೀಯವಾಗಿ ಅಭಿನಂದಿಸಿ ಕೇಕ್ ಕತ್ತರಿಸಿ ತಿನ್ನಿಸುವ ಮೂಲಕ ಹುಟ್ಟುಹಬ್ಬದ ಶುಭಾಶಯ ಕೋರಲಾಯಿತು. ತಾಲೂಕಿನ ವಿವಿಧ ಶಾಲೆಗಳಲ್ಲಿ ‌ಮಕ್ಕಳಿಗೆ‌ ಸಿಹಿ ಊಟ ಉಣಬಡಿಸಲಾಯಿತು.

ಈ ವೇಳೆನಿವೃತ್ತ ಶಿಕ್ಷಕರಾದ ಎಂ.ಡಿ.ಮರಿಸ್ವಾಮಿಗೌಡ, ಮಹದೇವೇಗೌಡ, ಎಂಜಿನಿಯರ್ ರೂಪಾ, ರೈತಸಂಘದ ಮುಖಂಡರಾದ ಕೆ.ಬೆಟ್ಟಹಳ್ಳಿ ಕೃಷ್ಣೇಗೌಡ, ಚಂದ್ರೇಗೌಡ, ಪ್ರೌಢಶಾಲಾ‌ ಸಹ ಶಿಕ್ಷಕರ ಸಂಘದ ಮಾಜಿ‌ ಅಧ್ಯಕ್ಷ ಆರ್.ಸಿ.ನಾಗೇಗೌಡ, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಎಸ್.ಮಲ್ಲಿಕಾರ್ಜುನೇಗೌಡ, ಆಪೋಲೋ ಆಸ್ಪತ್ರೆ ವೈದ್ಯ ಡಾ.ರಾಮಕೃಷ್ಣ, ‌ವಿವಿಧ ಶಾಲೆಗಳ ಶಿಕ್ಷಕರು ಸೇರಿದಂತೆ ಇತರರು ಇದ್ದರು.