ಜಾತಿ ಸಮೀಕ್ಷೆ ಅವೈಜ್ಞಾನಿಕ ಅನ್ನೋದು ಸರಿಯಲ್ಲ

| Published : Apr 19 2025, 12:33 AM IST

ಸಾರಾಂಶ

ಇದು ವೈಜ್ಞಾನಿಕವಾಗಿ ಮಾಡಲಾದ ಸಮೀಕ್ಷೆ, ಆದರೆ ಅವೈಜ್ಞಾನಿಕ ಎಂಬುದನ್ನ ನಾನು ಒಪ್ಪಲ್ಲ. ವಿಚಾರ ಆಧಾರಿತವಾಗಿ ಚರ್ಚೆಯಾಗಲಿ. ಸಮೀಕ್ಷೆಯಲ್ಲಿ ೧ ಕೋಟಿ ೩೦ ಲಕ್ಷ ಕುಟುಂಬಗಳು, ೫ ಕೋಟಿ ೯೮ ಲಕ್ಷ ಜನ ಭಾಗವಹಿಸಿದ್ದಾರೆ, ೧ ಲಕ್ಷ ೩೩ ಸಾವಿರ ಸರ್ಕಾರಿ ನೌಕರರು ಜನ ಗಣತಿಯಲ್ಲಿ ಭಾಗವಹಿಸಿದ್ದಾರೆ. ಇದರಲ್ಲಿ ನ್ಯೂನತೆಗಳಿರಬಹುದು ಆದರೆ ಅವೈಜ್ಞಾನಿಕ ಅಲ್ಲ.

ಕನ್ನಡಪ್ರಭ ವಾರ್ತೆ ಕೋಲಾರರಾಜ್ಯದಲ್ಲಿ ಅವರವರ ಜಾತಿಯನ್ನ ಪಟ್ಟಿ ಮಾಡಿ ಕೂಡಿಸಿದರೆ ೧೫ ರಿಂದ ೨೦ ಕೋಟಿ ಜನಸಂಖ್ಯೆ ಬರುತ್ತೆ, ಇದು ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆಯಷ್ಟೇ, ಕೆಲವರು ಸಮೀಕ್ಷೆ ಅವೈಜ್ಞಾನಿಕ ಅನ್ನೋದು ಸರಿಯಲ್ಲ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಸಮೀಕ್ಷೆ ವಿರೋಧಿಗಳಿಗೆ ಟಾಂಗ್ ನೀಡಿದರು.ತಾಲೂಕಿನ ಚೌಡದೇನಹಳ್ಳಿಯ ಊರಹಬ್ಬದಲ್ಲಿ ಭಾಗವಹಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ೨೦೧೧ ರಲ್ಲಿ ಸಮೀಕ್ಷೆ ನಡೆಸಿದ ವೇಳೆ ೬ ಕೋಟಿ ೩೫ ಲಕ್ಷ ಜನಸಂಖ್ಯೆ ಇತ್ತು. ಗಣತಿ ಪ್ರಕಾರ ೨೦೧೧ ರಲ್ಲಿ ೫ ಕೋಟಿ ೯೫ ಲಕ್ಷ ಜನರ ಆಧಾರದ ಮೇಲೆ ಗಣತಿ ತಯಾರಾಗಿದೆ ಎಂದರು.

ಎಲ್ಲರ ಅಭಿಪ್ರಾಯಕ್ಕೂ ಮಾನ್ಯತೆ

ಸಮೀಕ್ಷೆ ಕುರಿತು ಈಗಾಗಲೆ ನಾವು ಹೇಳಿರುವಂತೆ ಚರ್ಚೆ ಆಗಿದೆ. ಕೆಲವರು ಅವರ ಅಭಿಪ್ರಾಯ ಹೇಳಿದ್ದಾರೆ, ಇನ್ನೂ ಕೆಲವರು ಸಮಯ ಕೇಳಿದ್ದಾರೆ, ವೈಯಕ್ತಿಕ ವಾಗಿ ಕೆಲವರು ಹೇಳಲಿದ್ದಾರೆ. ಎಲ್ಲರ ಅಭಿಪ್ರಾಯ ಪಡೆದು ಮುಂದೆ ಹೋಗಲಾಗುವುದು. ಯಾರ ಅಭಿಪ್ರಾಯದ ಬಗ್ಗೆಯೂ ತಕರಾರಿಲ್ಲ, ಪ್ರಜಾ ಪ್ರಭುತ್ವದಲ್ಲಿ ಎಲ್ಲರ ಅಭಿಪ್ರಾಯ ಕೇಳಬೇಕಿದೆ ಹಾಗಾಗಿ ಮುಕ್ತವಾಗಿ ಅವಕಾಶ ನೀಡಿದ್ದು, ಅಭಿಪ್ರಾಯ ವಿಮರ್ಶೆ ಮಾಡಿ ತಾರ್ಕಿಕ ತೀರ್ಮಾನವಾಗಲಿದೆ ಎಂದರು. ನಾವೂ ಸಹ ಚರ್ಚೆಯಲ್ಲಿ ಭಾಗವಸಿದ್ದೇವೆ, ಇದು ವೈಜ್ಞಾನಿಕವಾಗಿ ಮಾಡಲಾದ ಸಮೀಕ್ಷೆ, ಆದರೆ ಅವೈಜ್ಞಾನಿಕ ಎಂಬುದನ್ನ ನಾನು ಒಪ್ಪಲ್ಲ. ವಿಚಾರ ಆಧಾರಿತವಾಗಿ ಚರ್ಚೆಯಾಗಲಿ. ಸಮೀಕ್ಷೆಯಲ್ಲಿ ೧ ಕೋಟಿ ೩೦ ಲಕ್ಷ ಕುಟುಂಬಗಳು, ೫ ಕೋಟಿ ೯೮ ಲಕ್ಷ ಜನ ಭಾಗವಹಿಸಿದ್ದಾರೆ, ೧ ಲಕ್ಷ ೩೩ ಸಾವಿರ ಸರ್ಕಾರಿ ನೌಕರರು ಜನ ಗಣತಿಯಲ್ಲಿ ಭಾಗವಹಿಸಿದ್ದಾರೆ. ಅವರು ೩೦ ಸಾವಿರ ಹಳ್ಳಿಗಳಲ್ಲಿ ಗಣತಿ ಮಾಡಿದ್ದಾರೆ. ನ್ಯೂನತೆಗಳಿರಬಹುದು ಆದರೆ ಅವೈಜ್ಞಾನಿಕ ಎನ್ನುವುದು ಸರಿಯಲ್ಲ ಎಂದರು.

ವೈಯಕ್ತಿ ಜಾತಿ ಪಟ್ಟಿಯಲ್ಲಿ 20 ಕೋಟಿ ಜನ

ರಾಜ್ಯದಲ್ಲಿ ಅವರವರ ಜಾತಿಯನ್ನ ಪಟ್ಟಿ ಮಾಡಿ ಕೂಡಿಸಿದರೆ ಆ ಪಟ್ಟಿ ೧೫ ರಿಂದ ೨೦ ಕೋಟಿ ಜನಸಂಖ್ಯೆ ಆಗುತ್ತದೆ. ಈ ಹಿಂದೆ ಸರ್ವೇ ಮಾಡಿರುವ ಯಾವುದೆ ದಾಖಲೆ ನಮ್ಮಲ್ಲಿ ಇಲ್ಲ, ೫೪ ಪ್ರಶ್ನೆಗಳನ್ನ ಮಾಡಲಾಗಿದೆ. ಈಗಾಗಲೆ ನಿಮ್ಮದೆ ಸಚಿವ, ಶಾಸಕರು ಸಮೀಕ್ಷೆಯನ್ನ ವಿರೋಧಿಸುತ್ತಿದ್ದಾರಲ್ಲ ಅನ್ನೋ ಪ್ರಶ್ನೆಗೆ ಉತ್ತರಿಸಿದ ಅವರು ಸ್ವತಂತ್ರವಾಗಿ ಹೋರಾಟ ಮಾಡಲಿ, ಚರ್ಚೆ ಮಾಡಲಿ ಎಂದರು. ಸಮೀಕ್ಷೆಯನ್ನ ನಾನು ಓದಿದ್ದೇನೆ ರಾಜ್ಯದ ಶೇ.೯೮ ರಷ್ಟು ಜನರಿಗೆ ಈ ವರದಿ ಅನುಕೂಲವಾಗಲಿದೆ, ಶೇ.೭೦ ಪರ್ಸೆಂಟ್ ಒಕ್ಕಲಿಗ ಹಾಗೂ ಲಿಂಗಾಯತರಿಗೆ ಅನುಕೂಲವಾಗಲಿದೆ, ಸತ್ಯದ ಆಧಾರದ ಮೇಲೆ ಚರ್ಚೆಗೆ ಸಿದ್ದ ಸಮೀಕ್ಷೆ ವರದಿ ಅನುಷ್ಟಾನವಾದ್ರೆ ಎಲ್ಲರಿಗೂ ರಿಸವರ್ವೇಷನ್ ಹೆಚ್ಚಾಗಲಿದೆ, ಆದರೆ ಕೆಲವರು ನಮ್ಮದೆ ಜಾಸ್ತಿ ಎನ್ನಲು ಹೊರಟಿದ್ದಾರೆ ಎಂದರು.ವಕ್ಕಲಿಗರಿಗೆ ೩ ಎ ನಲ್ಲಿ ಮೀಸಲಾತಿ ಇರುವುದು ಶೇ.೪ ಮಾತ್ರ. ಆದರೆ ವರದಿಯಲ್ಲಿ ಶೇ.೭ ಕ್ಕೆ ಶಿಫಾರಸು ಮಾಡಲಾಗಿದೆ. ಲಿಂಗಾಯತರಿಗೆ ೩ ಬಿ ಯಲ್ಲಿ ಶೇ.೫ ರಷ್ಟಿದೆ ಆದರೆ ೮ಕ್ಕೆ ಹೆಚ್ಚು ಮಾಡಲು ಶಿಫಾರಸು ಮಾಡಲಾಗಿದೆ, ವರದಿ ಅನುಷ್ಟಾನವಾದರೆ ಎಲ್ಲರಿಗೂ ಮೀಸಲು ಹೆಚ್ಚಾಗಲಿದೆ ಎಂದು ಹೇಳಿದರು.ಇದು ಜಾತಿ ಸಮೀಕ್ಷೆ ಅಲ್ಲ

ಇದೊಂದು ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆಯಷ್ಟೆ ಜಯಪ್ರಕಾಶ್ ಹೆಗ್ಡೆ ಅವರು ಕೊಟ್ಟಿರುವ ಮುಖ ಪುಟದಲ್ಲಿ ಸಮೀಕ್ಷೆ ಅಂತ ಇದೆ, ಆದರೆ ಕೆಲವರು ಇದನ್ನ ಜಾತಿ ಗಣತಿಯಂತೆ ಬಿಂಬಿಸುತ್ತಿದ್ದಾರೆ. ಯಾರು ಎಷ್ಟು ಹಿಂದುಳಿದಿದ್ದಾರೆ ಅನ್ನೋ ಸಮೀಕ್ಷೆಯನ್ನ ಮಾಡಲಾಗಿದೆ, ಇದು ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಮಾಡಲಾಗಿರುವ ಸಮೀಕ್ಷೆ ಅದನ್ನೆ ಕೆಲವರು ಸುಳ್ಳು ಎನ್ನುತ್ತಿದ್ದಾರೆ ಇದು ಎಷ್ಟು ಸರಿ ಎಂದು ಪ್ರಶ್ನೆ ಮಾಡಿದರು.