ಸಾರಾಂಶ
ಸಸಿಗಳನ್ನು ನೆಡುವುದಷ್ಟೇ ಅಲ್ಲ, ಮುಂದಿನ ದಿನಗಳಲ್ಲಿ ನೆಟ್ಟ ಸಸಿಗಳನ್ನು ಸೂಕ್ತ ರೀತಿಯಲ್ಲಿ ಪೋಷಣೆ ಮಾಡುವ ಜವಾಬ್ದಾರಿಯೂ ನಮ್ಮದಾಗಬೇಕು ಎಂದು ಕರುನಾಡ ಕನ್ನಡ ಸೇನೆ ಅಧ್ಯಕ್ಷ, ಪರಿಸರಪ್ರೇಮಿ ಕೆ.ಟಿ. ಗೋಪಾಲಗೌಡ ದಾವಣಗೆರೆಯಲ್ಲಿ ಹೇಳಿದರು.
ದಾವಣಗೆರೆ: ಸಸಿಗಳನ್ನು ನೆಡುವುದಷ್ಟೇ ಅಲ್ಲ, ಮುಂದಿನ ದಿನಗಳಲ್ಲಿ ನೆಟ್ಟ ಸಸಿಗಳನ್ನು ಸೂಕ್ತ ರೀತಿಯಲ್ಲಿ ಪೋಷಣೆ ಮಾಡುವ ಜವಾಬ್ದಾರಿಯೂ ನಮ್ಮದಾಗಬೇಕು ಎಂದು ಕರುನಾಡ ಕನ್ನಡ ಸೇನೆ ಅಧ್ಯಕ್ಷ, ಪರಿಸರಪ್ರೇಮಿ ಕೆ.ಟಿ. ಗೋಪಾಲಗೌಡ ಹೇಳಿದರು.
ಸೋಮವಾರ ನಗರದ ರಶ್ಮಿ ಹೆಣ್ಣುಮಕ್ಕಳ ವಸತಿ ಶಾಲೆಯಲ್ಲಿ ದಾವಣಗೆರೆ ಜಿಲ್ಲಾ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ಪರಿಸರ ದಿನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪರಿಸರ ದಿನದಂದು ಗಿಡಗಳನ್ನು ನೆಡುತ್ತೇವೆ. ಆದರೆ, ನೆಟ್ಟಂತಹ ಗಿಡಗಳನ್ನು ಮುಂದಿನ ದಿನಗಳಲ್ಲಿ ಉಳಿಸುವ ಜವಾಬ್ದಾರಿ ನಮ್ಮದಾಗಬೇಕು. ಆಗ ಮಾತ್ರ ಪರಿಸರ ದಿನಾಚರಣೆಗೆ ಮಹತ್ವ ಬರುತ್ತದೆ ಎಂದರು.ಪರಿಷತ್ತಿನ ಮಹಿಳಾ ಘಟಕದ ಎಸ್.ಉಮಾದೇವಿ ಹಿರೇಮಠ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಗಿಡಗಳನ್ನು ಮನೆ ಮಕ್ಕಳಂತೆ ಪೋಷಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಪರಿಸರ ದಿನವನ್ನು ಕೇವಲ ಒಂದು ದಿನಕ್ಕಷ್ಟೇ ಆಚರಣೆ ಮಾಡದೇ ವರ್ಷಪೂರ್ತಿ ಸಸಿಗಳನ್ನು ನೆಟ್ಟು ಜೊತೆಗೆ ಅವುಗಳು ಹಾಳಾಗದಂತೆ ಕಾಳಜಿ ವಹಿಸುವ ಅಗತ್ಯವಿದೆ ಎಂದರು.
ಕಾರ್ಯಕ್ರಮದಲ್ಲಿ ಪರಿಷತ್ತಿನ ಜಿಲ್ಲಾ ಕಾರ್ಯದರ್ಶಿ ಅಣಬೇರು ತಾರೇಶ್. ಮಹಾಂತೇಶ್. ಬಿಎಂಜಿ ವೀರೇಶ್, ಉಷಾ, ಅಮರೇಶ, ಲಲಿತಕುಮಾರ್ ಜೈನ್ ಇತರರು ಇದ್ದರು.- - - -24ಕೆಡಿವಿಜಿ31ಃ:
ದಾವಣಗೆರೆಯ ರಶ್ಮಿ ಶಾಲೆಯಲ್ಲಿ ನಡೆದ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಕೆ.ಟಿ.ಗೋಪಾಲಗೌಡ ಉದ್ಘಾಟಿಸಿದರು.