ಪರಿಶಿಷ್ಟರ ₹86 ಕೋಟಿ ಅನ್ಯರಾಜ್ಯಕ್ಕೆ ಹೋಗಿದ್ದು ಸರಿಯಲ್ಲ: ಡಾ. ಪ್ರಸನ್ನಾನಂದಪುರಿ ಸ್ವಾಮೀಜಿ

| Published : Nov 11 2025, 02:30 AM IST

ಪರಿಶಿಷ್ಟರ ₹86 ಕೋಟಿ ಅನ್ಯರಾಜ್ಯಕ್ಕೆ ಹೋಗಿದ್ದು ಸರಿಯಲ್ಲ: ಡಾ. ಪ್ರಸನ್ನಾನಂದಪುರಿ ಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ಭಾರತ ದಾರ್ಶನಿಕರ ಪುಣ್ಯಭೂಮಿಯಾಗಿದ್ದು, ಎಲ್ಲರ ಆಶಯ ಸಮ ಸಮಾಜ ನಿರ್ಮಾಣದ ಉದ್ದೇಶವಿದೆ. ಮಹಾತ್ಮರ ಮಾರ್ಗದರ್ಶನದಿಂದ ಒಳ್ಳೆಯ ಕೆಲಸಗಳಾಗಿವೆ.

ಮುಂಡರಗಿ: ರಾಜ್ಯ ಸರ್ಕಾರ ಎಸ್ಸಿಎಸ್ಟಿ ಸಮುದಾಯಗಳ ಅಭಿವೃದ್ಧಿಗಾಗಿ ಕಾಯ್ದಿರಿಸಿದ್ದ ಸುಮಾರು ₹86 ಕೋಟಿ ಹಣ ಬೇರೆ ರಾಜ್ಯಕ್ಕೆ ಹೋಗಿರುವುದು ವಿಪರ್ಯಾಸ ಎಂದು ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಡಾ. ಪ್ರಸನ್ನಾನಂದಪುರಿ ಸ್ವಾಮೀಜಿ ತಿಳಿಸಿದರು.

ಸೋಮವಾರ ಪಟ್ಟಣದ ಪುರಸಭೆ ಪಕ್ಕದ ಪೊಲೀಸ್ ಪರೇಡ್ ಮೈದಾನದಲ್ಲಿ ತಾಲೂಕು ಮಹರ್ಷಿ ವಾಲ್ಮೀಕಿ ನಾಯಕ ಸಮಾಜ, ವಾಲ್ಮೀಕಿ ನೌಕರರ ಸಂಘ, ಯುವ ಘಟಕ, ವಾಲ್ಮೀಕಿ ಶಹರ ಘಟಕಗಳ ಆಶ್ರದಲ್ಲಿ ಜರುಗಿದ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ರಾಜ್ಯಾದ್ಯಂತ 50ಕ್ಕೂ ಹೆಚ್ಚು ಜನ ಎಸ್ಸಿಎಸ್ಟಿ ಸಮುದಾಯದ ಶಾಸಕರಿದ್ದರೂ ₹86 ಕೋಟಿ ಹಣದ ಬಗ್ಗೆ ಯಾರೊಬ್ಬರೂ ಮಾತನಾಡದಿರುವುದು ಬೇಸರ ಮೂಡಿಸಿದೆ ಎಂದರು.

ಭಾರತ ದಾರ್ಶನಿಕರ ಪುಣ್ಯಭೂಮಿಯಾಗಿದ್ದು, ಎಲ್ಲರ ಆಶಯ ಸಮ ಸಮಾಜ ನಿರ್ಮಾಣದ ಉದ್ದೇಶವಿದೆ. ಮಹಾತ್ಮರ ಮಾರ್ಗದರ್ಶನದಿಂದ ಒಳ್ಳೆಯ ಕೆಲಸಗಳಾಗಿವೆ. ಸಾಂವಿಧಾನಿಕ ಹುದ್ದೆಗಳನ್ನು ಪಡೆಯುವುದಕ್ಕಾಗಿ ವಾಲ್ಮೀಕಿ ಸಮಾಜದವರು ಚುನಾವಣೆ ಸಂದರ್ಭದಲ್ಲಿ ಮಾತ್ರ ರಾಜಕಾರಣ ಮಾಡಬೇಕು. ಉಳಿದ ಸಂದರ್ಭಗಳಲ್ಲಿ ಸಮಾಜದ ಹಿತಕ್ಕಾಗಿ ಸಂಘಟಿತರಾಗಬೇಕು ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ ಮಾತನಾಡಿ, ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸರ್ಕಾರಿ ಸೌಲಭ್ಯಗಳು ದೊರೆಯುವಂತೆ ಎಲ್ಲ ಸರ್ಕಾರಗಳು ಪ್ರಯತ್ನಿಸುತ್ತಿವೆ. ಸರ್ಕಾರ ಪರಿಶಿಷ್ಟ ಜಾತಿ ಪಂಗಡದವರಿಗೆ ಮತ್ತು ಮಕ್ಕಳಿಗೆ ಶೈಕ್ಷಣಿಕ ಅಭಿವೃದ್ಧಿಗೆ ಅನೇಕ ಸೌಲಭ್ಯಗಳನ್ನು ಒದಗಿಸುತ್ತಿದೆ. ಇದರ ಸದುಪಯೋಗ ಪಡೆದುಕೊಂಡು ಸಮಾಜದಲ್ಲಿ ಉತ್ತಮ ಪ್ರಜೆಯಗಳಾಗಿ ಬಾಳಬೇಕು ಎಂದರು.

ಸಂವಿಧಾನದ ಆಶಯ ಎಲ್ಲರಿಗೂ ಸಮಾನ ಹಕ್ಕು ನೀಡಿ ಸಮಾಜದಲ್ಲಿ ಅಸಮಾನತೆ ಬಡತನ ಹೋಗಲಾಡಿಸುವ ಉದ್ದೇಶದಿಂದ ಮೀಸಲಾತಿ ನೀಡಿ ಅನುಕೂಲತೆ ಕಲ್ಪಿಸಿದೆ. ಸರ್ಕಾರ ಪರಿಶಿಷ್ಟ ಜಾತಿ ಪಂಗಡದವರಿಗೆ ಮತ್ತು ಮಕ್ಕಳಿಗೆ ಶೈಕ್ಷಣಿಕ ಅಭಿವೃದ್ಧಿಗೆ ಅನೇಕ ಸೌಲಭ್ಯಗಳನ್ನು ಒದಗಿಸುತ್ತಿದೆ. ಇದರ ಸದುಪಯೋಗ ಪಡೆದು ಸಮಾಜದಲ್ಲಿ ಉತ್ತಮ ಪ್ರಜೆಯಗಳಾಗಿ ಬಾಳಬೇಕು ಎಂದರು.

ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ, ಮಿಥುನಗೌಡ ಪಾಟೀಲ, ಸಣ್ಣವೀರಪ್ಪ ಹಳ್ಳೆಪ್ಪನವರ, ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತ ಉದಯಕುಮಾರ ತಳವಾರ ಮಾತನಾಡಿ, ಸಮಾಜದ ಏಳ್ಗೆಗಾಗಿ, ಸದೃಢತೆಗಾಗಿ ಮಕ್ಕಳಿಗೆ ಉತ್ತಮ ಶಿಕ್ಷಣ ಮತ್ತು ಸಂಸ್ಕಾರ ಕೊಡಬೇಕು ಎಂದರು.ತಾಲೂಕು ವಾಲ್ಮೀಕಿ ನಾಯಕ ಸಂಘದ ಅಧ್ಯಕ್ಷ ರಾಮಣ್ಣ ಕೋಳಿ ಅಧ್ಯಕ್ಷತೆ ವಹಿಸಿದ್ದರು. ಎ.ವೈ. ನವಲಗುಂದ ಉಪನ್ಯಾಸ ನೀಡಿದರು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಲಾಯಿತು. ಈ ವೇಳೆ ವಾಲ್ಮೀಕಿ ಮಹಿಳಾ ಘಟಕ ಉದ್ಘಾಟಿಸಲಾಯಿತು.ಕಾರ್ಯಕ್ರಮದಲ್ಲಿ ಪುರಸಭೆ ಉಪಾಧ್ಯಕ್ಷ ನಾಗೇಶ ಹುಬ್ಬಳ್ಳಿ, ಮುಖಂಡರಾದ ಕರಬಸಪ್ಪ ಹಂಚಿನಾಳ, ರಾಜಶೇಖರ ತಳವಾರ, ಕವಿತಾ ಉಳ್ಳಾಗಡ್ಡಿ, ನಾಗರಾಜ ಹೊಂಬಳಗಟ್ಟಿ, ಕವಿತಾ ನಾಯಕ, ಪ್ರಕಾಶ ಹಲವಾಗಲಿ, ಉದಯಕುಮಾರ ಯಲಿವಾಳ, ಡಾ. ಲಕ್ಷ್ಮಣ ಪೂಜಾರ, ಡಾ. ಕುಮಾರಸ್ವಾಮಿ, ಸವಿತಾ ಸಾಸ್ವಿಹಳ್ಳಿ, ಮೈಲಾರಪ್ಪ ಕಲಕೇರಿ, ಪವಿತ್ರ ಕಲ್ಲಕುಟಿಗರ, ಬಿ.ಎನ್. ರಾಟಿ, ಬಿ.ಎಫ್. ಈಟಿ, ಚೆನ್ನಪ್ಪ ಹಳ್ಳಿ, ಸುರೇಶ ಬಣಕಾರ, ಎಲ್.ಜಿ. ಹೊನ್ನಪ್ಪನವರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಚಂದ್ರಶೇಖರ ಪೂಜಾರ ಸ್ವಾಗತಿಸಿದರು. ಎಚ್.ಕೆ. ಹಲವಾಗಲಿ ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕ ಕನಕಪ್ಪತಳವಾರ ನಿರೂಪಿಸಿದರು.