ಸಾರಾಂಶ
ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ ಸಾಲಬಾಧೆ ತಾಳದೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಕುಂಟೋಜಿ ಗ್ರಾಮದ ರೈತ ಸಂಗಪ್ಪ ಲಕ್ಕಪ್ಪ ಗೌಡರ(ಬೊಮ್ಮಣಗಿ) ಮನೆಗೆ ಮಾಜಿ ಶಾಸಕ ಎ.ಎಸ್.ಪಾಟೀಲ(ನಡಹಳ್ಳಿ) ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು.
ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ
ಸಾಲಬಾಧೆ ತಾಳದೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಕುಂಟೋಜಿ ಗ್ರಾಮದ ರೈತ ಸಂಗಪ್ಪ ಲಕ್ಕಪ್ಪ ಗೌಡರ(ಬೊಮ್ಮಣಗಿ) ಮನೆಗೆ ಮಾಜಿ ಶಾಸಕ ಎ.ಎಸ್.ಪಾಟೀಲ(ನಡಹಳ್ಳಿ) ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು.ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ, ಮತಕ್ಷೇತ್ರದಲ್ಲಿ ವ್ಯಾಪಕ ಮಳೆಯಾಗಿ ರೈತರು ಬೆಳೆದ ಬೆಳೆ ಸಂಪೂರ್ಣ ಹಾಳಾಗಿದೆ. ಆದರೆ, ಶಾಸಕರಾಗಲಿ ಅಥವಾ ಅಧಿಕಾರಿಗಳಾಗಲಿ, ಸರ್ಕಾರವಾಗಲಿ ರೈತರ ಸಮಸ್ಯೆಗೆ ಸಕಾರಾತ್ಮಕ ಸ್ಪಂದನೆ ನೀಡದಿರುವುದು ರೈತರನ್ನು ಚಿಂತೆಗೀಡು ಮಾಡಿದೆ. ಯಾರೇ ಆಗಲಿ ಅಧಿಕಾರ ಶಾಶ್ವತವಲ್ಲ, ರೈತ ಮಾತ್ರ ಶಾಶ್ವತ. ಇದನ್ನು ಅಧಿಕಾರದಲ್ಲಿದ್ದವರು ಅರ್ಥೈಸಿಕೊಳ್ಳಬೇಕು. ಸಂಗಪ್ಪ ಗೌಡರ ಸಾವು ಕುಟುಂಬಕ್ಕೆ ಸೂಕ್ತ ಪರಿಹಾರ ಕೊಡಿಸಿ ರೈತನ ಸಂಪೂರ್ಣ ಸಾಲ ಮನ್ನಾ ಮಾಡಬೇಕು. ಆತನ ಮಕ್ಕಳಿಗೆ ಸರ್ಕಾರದಿಂದ ಪಿಂಚಣಿ ಹಣ ಬರುವಂತೆ ಹಾಗೂ ಉಚಿತ ಶಿಕ್ಷಣ ಕೊಡಿಸಲು ಮುಂದಾಗಬೇಕು. ಆತ್ಮಹತ್ಯೆ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸೌಜನ್ಯಕ್ಕು ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಆಲಿಸದಿರುವುದು ದುರಾಡಳಿತಕ್ಕೆ ಕೈಗನ್ನಡಿಯಾಗಿದೆ. ಮೃತ ರೈತನ ಮಗಳ ಮದುವೆ ವೇಳೆ ಸಹಾಯ ಮಾಡುವೆ, ಜತೆಗೆ ಪರಿಹಾರ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.ಈ ವೇಳೆ ಯಲ್ಲವ್ವ ಲಕ್ಕಪ್ಪ ಗೌಡರ, ಬೋರಮ್ಮ ಸಂಗಪ್ಪ ಗೌಡರ, ಪರಮಾಂದ ಗೌಡರ, ಹಣಮಂತ ಗೌಡರ, ಮಲ್ಲಿಕಾರ್ಜುನ ನಾಟಿಕಾರ, ಬಸವರಾಜ ಹುಲಗಣ್ಣಿ, ರಾಮಣ್ಣ ಹುಗಣ್ಣಿ, ಗಣೇಶ ಹೆಬ್ಬಾಳ, ಗುರುಲಿಂಗಪ್ಪ ಸುಲ್ಲಳ್ಳಿ, ನಾಗಲಿಂಗಯ್ಯಾ ಮಠ, ಬಿಜೆಪಿ ತಾಲೂಕು ಮಂಡಲ ಅಧ್ಯಕ್ಷ ಜಗದೀಶ ಪಂಪಣ್ಣವರ ಸೇರಿ ಇತರರು ಇದ್ದರು.