ಸಾರಾಂಶ
ಕನ್ನಡಪ್ರಭ ವಾರ್ತೆ ಉಡುಪಿತುಳುಕೂಟ ಒಡಿಪು ಮತ್ತು ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ವತಿಯಂದ ನಗರದ ಜಗನ್ನಾಥ ಸಭಾಭವನದಲ್ಲಿ ಆಟಿದ ತಿರ್ಲ್ - 2025 ಕಾರ್ಯಕ್ರಮ ಆಯೋಜಿಸಲಾಗಿತ್ತು. ಉಡುಪಿ ಜಿಲ್ಲೆಯ ವಿವಿಧ ಕಾಲೇಜುಗಳ ತುಳು ಸಂಘಗಳ ವಿದ್ಯಾರ್ಥಿಗಳು ತುಳುನಾಡಿನ ವೈವಿಧ್ಯಮಯ ಆಹಾರ ತಿನಿಸುಗಳನ್ನು ಅನಾವರಣಗೊಳಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಇದೇ ಸಂದರ್ಭದಲ್ಲಿ ದೆಂದೂರುಕಟ್ಟೆಯ ಹಿರಿಯ ನಾಟಿ ವೈದ್ಯೆ, ದೃಷ್ಠಿ ನಿವಾಳಿಸುವ ತಜ್ಞೆ ಕಮಲಾ ಮಡಿವಾಳ ಅವರನ್ನು ಸನ್ಮಾನಿಸಲಾಯಿತು.
ಅಧ್ಯಕ್ಷತೆ ವಹಿಸಿದ್ಧ ತುಳುಕೂಟದ ಅಧ್ಯಕ್ಷ ಬಿ.ಜಯಕರ ಶೆಟ್ಟಿ ಇಂದ್ರಾಳಿ ಮಾತನಾಡಿ, ಹಿಂದೆ ನಮ್ಮ ಹಿರಿಯರು ಮಳೆಗಾಲದ ಆಟಿ ತಿಂಗಳಲ್ಲಿ ತಿಂದುಣ್ಣುವುದಕ್ಕೂ ಇಲ್ಲದೆ ಸಂಕಷ್ಟ ಅಭವಿಸುತಿದ್ದರು. ಆದರೆ ನಾವೆಲ್ಲಾ ಸಾಕಷ್ಟು ಸ್ಥಿತಿವಂತರಾಗಿದ್ದೇವೆ. ಹಾಗಂತ ನಮ್ಮ ಹಿರಿಯರ ಕಷ್ಟದ ದಿನಗಳನ್ನು ಮರೆಯಬಾರದು ಎಂಬ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯೆ ತಾರಾ ಉಮೇಶ್ ಆಚಾರ್ಯ ಮಾತನಾಡಿ, ನಮ್ಮ ಆಹಾರ ಪದ್ಧತಿ ಬದಲಾಗಿರುವುದರಿಂದ ಅನೇಕ ತರಹದ ಆರೋಗ್ಯ ಸಮಸ್ಯೆಗಳನ್ನು ಎದುರಿಸುತಿದ್ದೇವೆ. ಅವುಗಳಿಗೆ ಪರಿಹಾರ ನಮ್ಮ ಪರಿಸರದಲ್ಲಿಯೇ ಸಿಗುವ ಸೊಪ್ಪುತರಕಾರಿಗಳಲ್ಲಿಯೇ ಇದೆ. ಇದನ್ನು ನಮ್ಮ ಹಿರಿಯರು ಮನಗಂಡಿದ್ದರು, ಆದರೆ ನಾವಿಂದು ಅದನ್ನುಮೂಡನಂಭಿಕೆ ಎಂದು ನಿರ್ವಕ್ಷಿಸಿದ್ದರಿಂದಲೇ ಸಮಸ್ಯೆಗೊಳಗಾಗಿದ್ದೇವೆ. ಇಂತಹ ಕಾರ್ಯಕ್ರಮಗಳ ಮೂಲಕ ನಮ್ಮ ಹಿರಿಯ ಜ್ಞಾನವನ್ನು ಮತ್ತೆ ಪಡೆಯಬೇಕಾಗಿದೆ ಎಂದರು. ಕಾಲೇಜುಗಳ ತುಳು ಸಂಘದ ಶರಣ್ಯ (ತೆಂಕನಿಡಿಯೂರು ಕಾಲೇಜು), ಶ್ರೇಯಸ್ ಮತ್ತು ಅನಿಶಾ ಭಂಡಾರಿ (ಎಂಎಸ್‌ಆರ್‌ಎಸ್ ಶಿರ್ವ), ಕೃತಿ ಮೂಡಬೆಟ್ಟು (ಎಂಜಿಎಂ ಕಾಲೇಜು), ಬಾವನಾ ಮತ್ತು ನಿರಾಲಿ (ವಿದ್ಯೋದಯ ಪಿಯುಸಿ ಉಡುಪಿ), ಅನ್ಯ ಆಚಾರ್ಯ (ತ್ರಿಷಾ ಪಿಯುಸಿ ಉಡುಪಿ) ತಮ್ಮಅಭಿಪ್ರಾಯಗಳನ್ನು ಹಂಚಿಕೊಂಡರು.
ತುಳುಕೂಟದ ಕಾರ್ಯದರ್ಶಿ ಗಂಗಾಧರ ಕಿದಿಯೂರು ಇದ್ದರು, ಕಾರ್ಯಕ್ರಮ ಸಂಚಾಲಕಿ ತಾರಾ ಸತೀಶ್ ಸ್ವಾಗತಿಸಿದರು. ಪೂರ್ಣಿಮಾ ಶೆಟ್ಟಿ ವಂದಿಸಿದರು, ಜ್ಯೋತಿ ದೇವಾಡಿಗ ಪ್ರಾರ್ಥಿಸಿದರು, ಯಶೋಧಾ ಕೇಶವ್ ಮತ್ತು ತಾರಾ ಆಚಾರ್ಯ ನಿರೂಪಿಸಿದರು.)
)
_925.jpg?impolicy=All_policy&im=Resize=(240))
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))