ಪ್ರಾಚೀನ ಪರಂಪರೆ ಉಳಿಸುವುದು ನಮ್ಮ ಕರ್ತವ್ಯ

| Published : Aug 12 2024, 01:31 AM IST

ಪ್ರಾಚೀನ ಪರಂಪರೆ ಉಳಿಸುವುದು ನಮ್ಮ ಕರ್ತವ್ಯ
Share this Article
  • FB
  • TW
  • Linkdin
  • Email

ಸಾರಾಂಶ

ನಮ್ಮ ಪ್ರಾಚೀನ ಪರಂಪರೆಗಳು ನಮ್ಮ ಜೀವನ ಮೌಲ್ಯವನ್ನು ಎತ್ತಿ ಹಿಡಿಯುವಂತಹವು. ಅವುಗಳನ್ನು ಉಳಿಸಿ, ಬೆಳೆಸುವುದು ನಮ್ಮ ಆದ್ಯ ಕರ್ತವ್ಯವಾಗಬೇಕು ಎಂದು ಶ್ರವಣಬೆಳಗೊಳದ ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ನಮ್ಮ ಪ್ರಾಚೀನ ಪರಂಪರೆಗಳು ನಮ್ಮ ಜೀವನ ಮೌಲ್ಯವನ್ನು ಎತ್ತಿ ಹಿಡಿಯುವಂತಹವು. ಅವುಗಳನ್ನು ಉಳಿಸಿ, ಬೆಳೆಸುವುದು ನಮ್ಮ ಆದ್ಯ ಕರ್ತವ್ಯವಾಗಬೇಕು ಎಂದು ಶ್ರವಣಬೆಳಗೊಳದ ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು.

ಜೈನ ಪ್ರವಿತ್ರ ಹಾಗೂ ಇತಿಹಾಸ ಪ್ರಸಿದ್ಧ ಕ್ಷೇತ್ರತಾಲೂಕಿನ ಮಲೆಯೂರು ಗ್ರಾಮದ ಕನಕಗಿರಿಯಲ್ಲಿ ಭಗವನ್ ಶ್ರೀ ವಿಜಯ ಪಾರ್ಶ್ವನಾಥಸ್ವಾಮಿ ಮೋಕ್ಷ ಕಲ್ಯಾಣ ಪೂಜೆ ಹಾಗೂ ಮುಕುಟ ಸಪ್ತಮಿ ಮಹೋತ್ಸವ ಆಂಗವಾಗಿ ನಡೆದ ಧಾರ್ಮಿಕ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.

ಸಪ್ತಮಿಗಳಲ್ಲಿ ಮುಕುಟ ಸಪ್ತಮಿ ಅತ್ಯಂತ ಮಹತ್ವವಾದದ್ದು, 24 ತೀರ್ಥಂಕರಗಳಲ್ಲಿ ಅಗ್ರಗಣ್ಯರಾದ ಪಾರ್ಶ್ವನಾಥ ತೀರ್ಥಂಕರರು ನಿರ್ವಾಣ ಹೊಂದಿದ ಪವಿತ್ರ ದಿನ. ನಮ್ಮಆಚಾರ್ಯರು, ಸಂತರು, ಪೂಜ್ಯರು. ಅನೇಕ ಮೌಲ್ಯಗಳ ಜತೆ ಪಾರಂಪರಿಕ ಬಸದಿ, ದೇವಸ್ಥಾನಗಳನ್ನು ಬಿಟ್ಟು ಹೋಗಿದ್ದಾರೆ. ಅವುಗಳನ್ನು ಉಳಿಸಿ ಸಂರಕ್ಷಿಸುವುದು ಅಗತ್ಯವಾಗಿದೆ ಎಂದರು.

ಕನಕಗಿರಿ ಪುಣ್ಯಕ್ಷೇತ್ರ ಒಂದು ತಪೋಭೂಮಿ, ಕಳೆದು ಹೋಗುತ್ತಿದ್ದ ಈ ಪವಿತ್ರ ಕ್ಷೇತ್ರವನ್ನು ಭುವನಕೀರ್ತಿ ಭಟ್ಟಾರಕ ಸ್ವಾಮೀಜಿ ಅಭಿವೃದ್ಧಿಗೊಳಿಸಿ ಇದರ ಮಹತ್ವವನ್ನು ಸಾರಿದ್ದಾರೆ ಎಂದರು.

ಜೀವನದಲ್ಲಿ ಕಷ್ಟಗಳನ್ನು ಎದುರಿಸಿದಾಗ ಯಶಸ್ಸು ಕಾಣಲು ಸಾಧ್ಯ, ತಾವರೆ ಕೆಸರಿನಲ್ಲಿ ಹುಟ್ಟಿ ಪ್ರಜಲ್ಪಿಸುವಂತೆ ಸಮಾಜದಲ್ಲಿ ಕಷ್ಟಗಳನ್ನು ಎದುರಿಸಿ ಸಮಾಜಕ್ಕೆ ಬೆಳಕು ನೀಡುವಂತಹ ಜೀವನ ನಡೆಸಬೇಕು. ಭಗವನ್ ಪಾರ್ಶ್ವನಾಥಸ್ವಾಮಿ ನೆಲೆಸಿದ ಪವಿತ್ರ ಸ್ಥಳ ಕನಕಗಿರಿ. ಇಲ್ಲಿ ಇಂಥ ಪೂಜೆ ಕಾರ್ಯಗಳು, ಧಾರ್ಮಿಕ ಸಭೆ ನಡೆಯುತ್ತಿರುವುದು ಅರ್ಥಪೂರ್ಣವಾದದ್ದು ಎಂದರು.

ಕನಕಗಿರಿಯ ಭುವನಕೀರ್ತಿ ಭಟ್ಟಾರಕ ಸ್ವಾಮೀಜಿ ಆಶೀರ್ವಚನ ನೀಡಿ, ಇಲ್ಲಿ ನಡೆಯುವ ನಾಗರಪೂಜೆಯು ಹಲವಾರು ಜನರ ಕಷ್ಟಗಳನ್ನು ನಿವಾರಿಸಿದೆ. ಈ ನೆಲದ ಮಹಾತ್ಮೆಯೇ ಅಂತಹದು, ಈ ಕ್ಷೇತ್ರ ಮತ್ತಷ್ಟು ಪ್ರಬುದ್ದಮಾನಕ್ಕೆ ಬರಲು ಸಹಕರಿಸುತ್ತಿದ್ದಾರೆ ಎಂದರು,

ಶನಿವಾರ ಬೆಳಿಗ್ಗೆಯಿಂದಲೇ ಧಾರ್ಮಿಕ ವಿಧಿ ವಿಧಾನಗಳು ಶ್ರದ್ಧಾ, ಭಕ್ತಿಯಿಂದ ನೆರವೇರಿದವು. ಆಗ್ರೋದಕ ಅನಯನ, ಧ್ವಜಾರೋಹಣ, ನಿತ್ಯನಿಧಿ ವ್ರತೋಪದೇಶ ನಡೆದವು. ನಂತರ ಭಗವನ್ ಶ್ರೀ ವಿಜಯ ಪಾರ್ಶ್ವನಾಥಸ್ವಾಮಿ ಮೂಲ ಪ್ರತಿಮೆಗೆ 108 ಮಂಗಲ ಮಹಾಕಳಶಗಳಿಂದ ಮಹಾ ಅಭಿಷೇಕ ಪೂಜೆ ನೆರವೇರಿತು. ಜ್ವಾಲಾಮಾಲಿನಿ ಅಮ್ಮನವರಿಗೆ ಮತ್ತು ಬ್ರಹ್ಮದೇವರಿಗೆ ವಿಶೇಷ ಅಲಂಕಾರ ಮಾಡಿ ಪೂಜೆ ನೆರವೇರಿಸಲಾಯಿತು.

ನಾನಾ ಜಿಲ್ಲೆಗಳಿಂದ ಆಗಮಿಸಿದ್ದ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ಹಲವಾರು ಜ್ಯೋತಿಷ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮಕ್ಕೂ ಮುನ್ನ ದಾನಿಗಳಿಂದ ನಿರ್ಮಿಸಲ್ಪಟ್ಟ ವಿಜಯ ಪಾರ್ಶ್ವನಾಥಸ್ವಾಮಿ ನೂತನ ಮುಖಮಂಟಪ, ಅತಿಥಿ ಭವನ ಉದ್ಘಾಟನೆಗೊಂಡವು.

ದೆಹಲಿಯ ಜೈನ ಮುಖಂಡರಾದ ಅತುಲ್‌ಜೈನ್, ವಿಕಾಶ್‌ಜೈನ್, ಸುನೀಲ್, ನಿರ್ಮಲ್‌ಕುಮಾರ್, ಸುರೇಶ್‌ಕುಮಾರ್‌ಜೈನ್, ಅನಂತರಾಜ್, ರಾಜೇಶ್‌ಜೈನ್, ಪದ್ಮರಾಜ್, ವಿವಿಧಭಾಗಗಳಿಂದ ಆಗಮಿಸಿದ್ದ ಜೈನ ಸಮಾಜದ ಮುಂಖಡರು ಉಪಸ್ಥಿತರಿದ್ದರು.